ಬಂಟ್ವಾಳ, ಸೆಪ್ಟಂಬರ್ 12, 2021 (ಕರಾವಳಿ ಟೈಮ್ಸ್) : ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಹಣವನ್ನು ಸರಕಾರ ಇತರ ಉದ್ದೇಶಗಳಿಗೆ ಬಳಸುವ ಮೂಲಕ ಕಟ್ಟಡ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿರುವುದನ್ನು ವಿಟ್ಲ ಪಡ್ನೂರು ಗ್ರಾಮದ ಕಟ್ಟಡ ಕಾರ್ಮಿಕರ ಸಭೆಯಲ್ಲಿ ಖಂಡಿಸಲಾಯಿತು.
ಕಾರ್ಮಿಕರಿಗೆ ಕೋವಿಡ್ ಪರಿಹಾರ 3,000/- ರೂಪಾಯಿಯನ್ನು ಕಲ್ಯಾಣ ಮಂಡಳಿಯಿಂದ ನೀಡಲು ಆದೇಶವಾಗಿದ್ದು, ಪರಿಹಾರ ಹಣ ಬೆರಳೆಣಿಕೆಯ ಕಾರ್ಮಿಕರಿಗೆ ಮಾತ್ರ ಸಿಕ್ಕಿದ್ದು, ಹೆಚ್ಚಿನ ನೋಂದಾಯಿತ ಕಾರ್ಮಿಕರಿಗೆ ಸಿಗದೆ ಅನ್ಯಾಯವಾಗಿದೆ. ಅಲ್ಲದೆ ಕಲ್ಯಾಣ ಮಂಡಳಿಯಿಂದ ಪ್ರತಿ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆಯಾಗಿದ್ದು ಆಹಾರ ಕಿಟ್ ಎಲ್ಲಾ ಕಾರ್ಮಿಕರಿಗೆ ಸಿಕ್ಕಿಲ್ಲ. ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಆಹಾರ ಕಿಟ್ ವಿತರಣೆಯಲ್ಲಿ ಮದ್ಯ ಪ್ರವೇಶಿಸಿ ತಮ್ಮ ಬೆಂಬಲಿಗರಿಗೆ ಮಾತ್ರ ಆಹಾರ ಕಿಟ್ ವಿತರಿಸಿ ನಿಜವಾದ ನೋಂದಾಯಿತ ಕಾರ್ಮಿಕರಿಗೆ ಅನ್ಯಾಯವೆಸಗಿದ್ದಾರೆ. ಕೂಡಲೇ ಎಲ್ಲಾ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕೋವಿಡ್ ಪರಿಹಾರ ಧನ ಹಾಗೂ ಆಹಾರ ಕಿಟ್‍ಗಳನ್ನು ವಿತರಿಸುವಂತೆ ಒತ್ತಾಯಿಸಿ ಕಟ್ಟಡ ಕಾರ್ಮಿಕರ ಸಂಘ ಸಿಐಟಿಯು ವತಿಯಿಂದ ವಿಟ್ಲ ಪಡ್ನೂರು ಗ್ರಾಮದಲ್ಲಿ ಕಟ್ಟಡ ಕಾರ್ಮಿಕರ ಸಮಿತಿ ರಚಿಸಲಾಯಿತು.
ಸಭೆಯಲ್ಲಿ ಭಾಗವಹಿಸಿದ್ದ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ ಮಾತನಾಡಿ, ಸಂಘಟನೆಗಳ ಹೋರಾಟದಿಂದ ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ರಚನೆಯಾಗಿದ್ದು. ಈಗ ಕಲ್ಯಾಣ ಮಂಡಳಿಯ ಹಣವನ್ನು ಸರಕಾರ ದುರುಪಯೋಗ ಮಾಡುತ್ತಿದೆ ಎಂದು ಆರೋಪಿಸಿದರು.
ಕಾರ್ಮಿಕ ಮುಖಂಡ ದಿನೇಶ ಆಚಾರಿ ಮಾಣಿ ಸಭೆಯಲ್ಲಿ ಭಾಗವಹಿಸಿದ್ದರು. ಇದೇ ವೇಳೆ ನೂತನ ಗ್ರಾಮ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ರುಕ್ಮ ನಾಯ್ಕ, ಉಪಾದ್ಯಕ್ಷರುಗಳಾಗಿ ಮೋಹನ ಗೌಡ ಕಡಂಬು ಬನ, ಗುರುವಪ್ಪ ನಾಯ್ಕ ಕುಂಟುಕುಡೇಲು, ಕಾರ್ಯದರ್ಶಿಯಾಗಿ ಅಬ್ದುಲ್ ರಹೀಂ ಕುಕ್ಕಿಲ, ಜೊತೆ ಕಾರ್ಯದರ್ಶಿಗಳಾಗಿ ರವಿ ಕುಂಟುಕುಡೇಲು, ಎಂ ಚೆನ್ನಪ್ಪ ಮೂಲ್ಯ ಮಾಲ, ಕೋಶಧಿಕಾರಿಯಾಗಿ ಆನಂದ ಕಡಂಬು ಸಹಿತ 40 ಜನರ ಕಾರ್ಯಕಾರಿ ಸಮಿತಿ ರಚಿಸಲಾಯಿತು.
0 comments:
Post a Comment