ಮಂಗಳೂರು, ಸೆಪ್ಟಂಬರ್ 29, 2021 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಟ್ವೆಕಾಂಡೋ ಆಶ್ರಯದಲ್ಲಿ ಮಂಗಳೂರು ಸೈಂಟ್ ಎಲೋಶಿಯಸ್ ಕಾಲೇಜು ಇದರ ಸಹಯೋಗದೊಂದಿಗೆ ಆಯೋಜಿಸಲಾದ ಮಿಸ್ಟರ್ ದಕ್ಷಿಣ ಕನ್ನಡ ದ್ವಿತೀಯ ವಾರ್ಷಿಕ ಟ್ವೆಕಾಂಡೋ ಚಾಂಪಿಯನ್ ಶಿಪ್ ಗುರುವಾರ (ಅಕ್ಟೋಬರ್ 28) ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜು ಹೊರ ಕ್ರೀಡಾಂಗಣದಲ್ಲಿ ನಡೆಯಿತು.
ಕೂಟದ ಅಂಡರ್ 54 ಕೆಜಿ ಹಾಗೂ 63 ಕೆಜಿ ವಿಭಾಗದಲ್ಲಿ ಪಾಣೆಮಂಗಳೂರು ಫಿಟ್ನೆಸ್ ಮಲ್ಟಿ ಜಿಮ್ ಹಾಗೂ ಮಾರ್ಶಲ್ ಆಟ್ರ್ಸ್ ಸೆಂಟರ್ ವಿದ್ಯಾರ್ಥಿಗಳಾದ ರೈಫಾನ್ ಅಹ್ಮದ್ ಬಿ ಸಿ ರೋಡು ಹಾಗೂ ವಿಲಾಯತ್ ರಾಫಿ ಗೂಡಿನಬಳಿ, ಅಂಡರ್ 74 ಕೆಜಿ ಹಾಗೂ ಅಂಡರ್ 80 ಕೆಜಿ ವಿಭಾಗದಲ್ಲಿ ಸುರತ್ಕಲ್-ಕೃಷ್ಣಾಪುರದ ಎಕ್ಸ್ಟ್ರೀಂ ಫೈಟ್ ಕ್ಲಬ್ ವಿದ್ಯಾರ್ಥಿಗಳಾದ ಫಾಯಿಝ್ ಪಾರೂಕ್ ಕೃಷ್ಣಾಪುರ ಹಾಗೂ ಮುಹಮ್ಮದ್ ಶಿರ್‍ಹಾನ್ ಗುರುಪುರ-ಕೈಕಂಬ ಅವರುಗಳು ಪ್ರತ್ಯೇಕ ವಿಭಾಗದ ಮಿಸ್ಟರ್ ಚಾಂಪಿಯನ್ಸ್ ಗಳಾಗಿ ಮೂಡಿ ಬಂದು ಚಿನ್ನದ ಪದಕ ಹಾಗೂ ಟ್ರೋಫಿ ಪಡೆದುಕೊಂಡರು.
ಅಂಡರ್ 54 ಕೆಜಿ ವಿಭಾಗದಲ್ಲಿ ಮಂಗಳೂರು-ಕುದ್ರೋಳಿಯ ದಿ ಮ್ಯಾಕ್ಸ್ ಸೆಂಟರಿನ ವಿದ್ಯಾರ್ಥಿ ಮುಹಮ್ಮದ್ ಅಮೀನ್ ಶಾಹಿಂ ಬೆಂಗರೆ ಅವರು ದ್ವಿತೀಯ ಸ್ಥಾನಿಯಾಗಿ ಮೂಡಿ ಬಂದು ಬೆಳ್ಳಿ ಪದಕ ಪಡೆದರೆ, ಪಾಣೆಮಂಗಳೂರು ಫಿಟ್ನೆಸ್ ಮಲ್ಟಿ ಜಿಮ್ ಹಾಗೂ ಮಾರ್ಶಲ್ ಆಟ್ರ್ಸ್ ಸೆಂಟರ್ ವಿದ್ಯಾರ್ಥಿ ಯೂಸುಫ್ ಹಫೀಝ್ ಬೋಗೋಡಿ ತೃತೀಯ ಹಾಗೂ ಮಂಗಳೂರಿನ ನೌಶೀಕ್ ರಾಜ್ ಚತುರ್ಥ ಸ್ಥಾನಿಯಾಗಿ ಕಂಚಿನ ಪದಕ ಪಡೆದುಕೊಂಡರು.
ಅಂಡರ್ 63 ಕೆಜಿ ವಿಭಾಗದಲ್ಲಿ ದಿ ಮ್ಯಾಕ್ಸ್ ಫಿಟ್ನೆಸ್ ಸೆಂಟರ್ ವಿದ್ಯಾರ್ಥಿ ಸಲ್ಮಾನುಲ್ ಫಾರಿಶ್ ಕುದ್ರೋಳಿ ದ್ವಿತೀಯ ಸ್ಥಾನಿಯಾಗಿ ಬೆಳ್ಳಿ ಪದಕ ಪಡೆದರೆ, ಸುರತ್ಕಲ್-ಕೃಷ್ಣಾಪುರದ ಎಕ್ಸ್ಟ್ರೀಂ ಫೈಟ್ ಕ್ಲಬ್ ವಿದ್ಯಾರ್ಥಿ ಜಶೀಂ ಇಸ್ಮಾಯಿಲ್ ಕುಳಾಯಿ ತೃತೀಯ ಹಾಗೂ ಪಾಣೆಮಂಗಳೂರು ಫಿಟ್ನೆಸ್ ಮಲ್ಟಿ ಜಿಮ್ ಹಾಗೂ ಮಾರ್ಶಲ್ ಆಟ್ರ್ಸ್ ಸೆಂಟರ್ ವಿದ್ಯಾರ್ಥಿ ಮುಹಮ್ಮದ್ ಝೈಫ್ ಬೊಳ್ಳಾಯಿ ಚತುರ್ಥ ಸ್ಥಾನಿಯಾಗಿ ಕಂಚಿನ ಪದಕ ಪಡೆದುಕೊಂಡರು.
ಅಂಡರ್ 74 ಕೆಜಿ ವಿಭಾಗದಲ್ಲಿ ಸುರತ್ಕಲ್-ಕೃಷ್ಣಾಪುರದ ಎಕ್ಸ್ಟ್ರೀಂ ಫೈಟ್ ಕ್ಲಬ್ ವಿದ್ಯಾರ್ಥಿ ಶಾಬಾನ್ ಕುಳಾಯಿ ದ್ವಿತೀಯ ಸ್ಥಾನಿಯಾಗಿ ಬೆಳ್ಳಿ ಪದಕ ಪಡೆದುಕೊಂಡರು.
ಅಂಡರ್ 80 ಕೆಜಿ ವಿಭಾಗದಲ್ಲಿ ಮಂಗಳೂರು-ಕುದ್ರೋಳಿಯ ದಿ ಮ್ಯಾಕ್ಸ್ ಸೆಂಟರಿನ ವಿದ್ಯಾರ್ಥಿ ಮುಹಮ್ಮದ್ ಸಿರಾಜುದ್ದೀನ್ ಮುನೈಝ್ ಕುದ್ರೋಳಿ ಅವರು ದ್ವಿತೀಯ ಸ್ಥಾನಿಯಾಗಿ ಮೂಡಿ ಬಂದು ಬೆಳ್ಳಿ ಪದಕ ಪಡೆದರೆ, ಪಾಣೆಮಂಗಳೂರು ಫಿಟ್ನೆಸ್ ಮಲ್ಟಿ ಜಿಮ್ ಹಾಗೂ ಮಾರ್ಶಲ್ ಆಟ್ರ್ಸ್ ಸೆಂಟರ್ ವಿದ್ಯಾರ್ಥಿ ಮುನಾಝ್ ನಂದಾವರ ತೃತೀಯ ಸ್ಥಾನಿಯಾಗಿ ಕಂಚಿನ ಪದಕ ಪಡೆದುಕೊಂಡರು.
ಮಂಗಳೂರು ಯೂತ್ ಎಂಪವರ್‍ಮೆಂಟ್ ಆಂಡ್ ಸ್ಪೋಟ್ರ್ಸ್ ಇದರ ಡೆಪ್ಯುಟಿ ಡೈರೆಕ್ಟರ್ ಪ್ರದೀಪ್ ಡಿ’ಸೋಜ ಕಾರ್ಯಕ್ರಮ ಉದ್ಘಾಟಿಸಿದರು. ಸೈಂಟ್ ಎಲೋಶಿಯಸ್ ಕಾಲೇಜು ಅರೂಪ್ ಬ್ಲಾಕ್ ಡೈರೆಕ್ಟರ್ ಡಾ ಡೆನ್ನಿಸ್ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸೈಂಟ್ ಎಲೋಶಿಯಸ್ ಕಾಲೇಜು ರಿಜಿಸ್ಟ್ರಾರ್ ಹಾಗೂ ಸಿಇಒ ಡಾ ಆಲ್ವಿನ್ ಡೇಸಾ, ವಾಮಂಜೂರು ಸೈಂಟ್ ರೇಮಂಡ್ಸ್ ಕಾಲೇಜು ಪ್ರಾಂಶುಪಾಲೆ ಸಗಾಯಾ ಸೆಲ್ವಿ ಬಿ ಎಸ್, ಮಂಗಳೂರು ಯೆನಪೋಯ ಆಸ್ಪತ್ರೆಯ ಕ್ರೀಡಾ ಮೆಡಿಕಲ್ ವಿಭಾಗದ ಸರ್ಜನ್ ಡಾ ಜೀವನ್ ಪಿರೇರಾ, ದಕ್ಷಿಣ ಕನ್ನಡ ಜಿಲ್ಲಾ ಟ್ವೆಕಾಂಡೋ ಅಧ್ಯಕ್ಷ ಟಿ ಅಬ್ದುಲ್ ಅಝೀಝ್ ಕೃಷ್ಣಾಪುರ, ಗೌರವಾಧ್ಯಕ್ಷರುಗಳಾದ ಶ್ಯಾಮರಾಯ ಸುವರ್ಣ, ನಾಸಿರ್ ಗೂಡಿನಬಳಿ, ಉಪಾಧ್ಯಕ್ಷೆ ಪ್ರಮೀಳಾ ಯಶವಂತ, ಪ್ರಧಾನ ಕಾರ್ಯದರ್ಶಿ ಹಾಗೂ ಮುಖ್ಯ ತರಬೇತುದಾರ ಇಸಾಕ್ ಇಸ್ಮಾಯಿಲ್ ನಂದಾವರ, ಜೊತೆ ಕಾರ್ಯದರ್ಶಿಗಳಾದ ಸಿರಾಜ್ ಕುಳಾಯಿ, ರಶ್ಮಿ ಕೆ ಮಲ್ಯ ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಸೈಂಟ್ ಎಲೋಶಿಯಸ್ ವಿದ್ಯಾ ಸಂಸ್ಥೆಗಳ ರೆಕ್ಟರ್ ಫಾದರ್ ಮೆಲ್ವಿನ್ ಪಿಂಟೋ ಎಸ್ ಜೆ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಿ ಸಿ ರೋಡು, ಸೈಂಟ್ ಎಲೋಶಿಯಸ್ ಕಾಲೇಜಿನÀ ಫಿಸಿಕಲ್ ಎಜ್ಯುಕೇಶನ್ ಡೈರೆಕ್ಟರ್‍ಗಳಾದ ಡೊನೆಟ್ ಡಿ’ಸೋಜ, ಅರುಣ್ ಎಂ ಡಿ’ಸೋಜ, ಪಿಯು ಕಾಲೇಜು ದೈಹಿಕ ಶಿಕ್ಷಕ ನವೀನ್, ಪವರ್ ಲಿಫ್ಟಿಂಗ್ ಚಾಂಪಿಯನ್ ಇಸ್ರಾರ್ ಪಾಶಾ ಮಂಗಳೂರು, ರಾಷ್ಟ್ರೀಯ ದೇಹದಾಡ್ರ್ಯ ಪಟು ಪಿ ಎಂ ಇಲ್ಯಾಸ್, ಮಿಕ್ಸ್‍ಡ್ ಮಾರ್ಶಲ್ ಆಟ್ರ್ಸ್ ತರಬೇತುದಾರ ಶಿಶಿರ್, ಮುಆತಾಯಿ ಚಾಂಪಿಯನ್ ಶೋಧನ್ ಶೆಟ್ಟಿ, ರಾಜ್ಯ ಮಟ್ಟದ ತೀರ್ಪುಗಾರರಾದ ಶ್ರೀನಿವಾಸ್ ಸಿ, ನಾಗರಾಜ್ ಎಂ, ಫಾತಿಮಾ ಮುಸ್ಕಾನ್, ತನ್ವೀರ್, ಪ್ರೇಕ್ಷಾ ಸುವರ್ಣ, ಮಿಶ್ರಿಯಾ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment