ಮಂಚಿ : ಕಾಡು ಹಂದಿಗೆ ಇರಿಸಿದ ಉರುಳಿಗೆ ಬಿದ್ದ ಚಿರತೆ ರಕ್ಷಿಸಿದ ಅರಣ್ಯಾಧಿಕಾರಿಗಳು - Karavali Times ಮಂಚಿ : ಕಾಡು ಹಂದಿಗೆ ಇರಿಸಿದ ಉರುಳಿಗೆ ಬಿದ್ದ ಚಿರತೆ ರಕ್ಷಿಸಿದ ಅರಣ್ಯಾಧಿಕಾರಿಗಳು - Karavali Times

728x90

20 November 2021

ಮಂಚಿ : ಕಾಡು ಹಂದಿಗೆ ಇರಿಸಿದ ಉರುಳಿಗೆ ಬಿದ್ದ ಚಿರತೆ ರಕ್ಷಿಸಿದ ಅರಣ್ಯಾಧಿಕಾರಿಗಳು

ಬಂಟ್ವಾಳ, ನವೆಂಬರ್ 20, 2021 (ಕರಾವಳಿ ಟೈಮ್ಸ್) : ತಾಲೂಕಿನ ಮಂಚಿ ಗ್ರಾಮದ ಹೆಗಡೆಗುಳಿಯಲ್ಲಿ ಕಾಡು ಹಂದಿಗೆ ಇರಿಸಲಾಗಿದ್ದ ಉರುಳಿಗೆ ಶುಕ್ರವಾರ ರಾತ್ರಿ ಚಿರತೆ ಸಿಲುಕಿದ್ದು, ಬಂಟ್ವಾಳ ಅರಣ್ಯಾಧಿಕಾರಿಗಳು ಚಿರತೆಯನ್ನು ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಡುವ ವ್ಯವಸ್ಥೆ ಮಾಡಿದ್ದಾರೆ. 

ಸ್ಥಳೀಯರು ಕಾಡು ಹಂದಿಯ ಉಪಟಳಕ್ಕಾಗಿ ಉರುಳು ಇರಿಸಿದ್ದು, ಆದರೆ ನಾಡಿಗೆ ಪ್ರಾಣಿ ಬೇಟೆ ಅರಸಿ ಬಂದಿದ್ದ ಚಿರತೆ ಈ ಉರುಳಿಗೆ ಸಿಕ್ಕಿ ಬಿದ್ದಿದೆ. ಈ ಬಗ್ಗೆ ಸುದ್ದಿ ತಿಳಿದ ಸಾರ್ವಜನಿಕರು ಅರಣ್ಯಾಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಬಂಟ್ವಾಳ ವಲಯ ಅರಣ್ಯಧಿಕಾರಿ ಹಾಗೂ ಸಿಬ್ಬಂದಿಗಳು ಸುದೀರ್ಘ ಅವಧಿಯ ಯಶಸ್ವಿ ಕಾಯಾಚರಣೆ ನಡೆಸಿ ಚಿರತೆಯ ಪ್ರಜ್ಞೆ ತಪ್ಪಿಸುವಲ್ಲಿ ಸಫಲರಾಗಿದ್ದು, ಚಿರತೆಯನ್ನು ರಕ್ಷಿಸಿದ್ದಾರೆ. 

ಉರುಳಿಗೆ ಬಿದ್ದ ಚಿರತೆ ಸುಮಾರು 60 ಕೆ ಜಿ ತೂಕವಿದೆ ಎಂದು ಹೇಳಲಾಗಿದ್ದು, ಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಪ್ರಜ್ಞೆ ತಪ್ಪಿಸಿದ ಬಳಿಕ ಬೋನಿನಲ್ಲಿ ಬಂಧಿಸಿ ಪಿಕಪ್ ವಾಹನದ ಮೂಲಕ ವಲಯ ಅರಣ್ಯಾಧಿಕಾರಿ ಕಚೇರಿಗೆ ತರಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮಂಚಿ : ಕಾಡು ಹಂದಿಗೆ ಇರಿಸಿದ ಉರುಳಿಗೆ ಬಿದ್ದ ಚಿರತೆ ರಕ್ಷಿಸಿದ ಅರಣ್ಯಾಧಿಕಾರಿಗಳು Rating: 5 Reviewed By: karavali Times
Scroll to Top