ಭಕ್ತಿಯ ಮೂಲಕ ಭಗವಂತನ ಒಲಿಸಿಕೊಳ್ಳಬಹದು ಎಂದು ಸಾರಿದವರು ಕನಕದಾಸರು : ರಾಜೇಶ್ ನಾಯ್ಕ್ - Karavali Times ಭಕ್ತಿಯ ಮೂಲಕ ಭಗವಂತನ ಒಲಿಸಿಕೊಳ್ಳಬಹದು ಎಂದು ಸಾರಿದವರು ಕನಕದಾಸರು : ರಾಜೇಶ್ ನಾಯ್ಕ್ - Karavali Times

728x90

22 November 2021

ಭಕ್ತಿಯ ಮೂಲಕ ಭಗವಂತನ ಒಲಿಸಿಕೊಳ್ಳಬಹದು ಎಂದು ಸಾರಿದವರು ಕನಕದಾಸರು : ರಾಜೇಶ್ ನಾಯ್ಕ್

 ಬಂಟ್ವಾಳ, ನವೆಂಬರ್ 22, 2021 (ಕರಾವಳಿ ಟೈಮ್ಸ್) : ಕನ್ನಡದ ಪ್ರಸಿದ್ಧ ಕೀರ್ತನಕಾರ ಕನಕದಾಸರು ಕರ್ನಾಟಕ ಸಂಗೀತಕ್ಕೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಸಮಾಜದ ಸಮಾನತೆಯನ್ನು ಸಾರಿದ ಇವರು ಭಕ್ತಿಯ ಮೂಲಕ ದೇವರನ್ನು ಒಲಿಸಿಕೊಳ್ಳಬಹುದು ಎಂದು ಸಾರಿದವರು ಎಂದು ಬಂಟ್ವಾಳ ತಾಲೂಕು ಕಚೇರಿ ಉಪತಹಶೀಲ್ದಾರ್ ರಾಜೇಶ್ ನಾಯ್ಕ್  ಹೇಳಿದರು. 

ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬಂಟ್ವಾಳ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಸೋಮವಾರ (ನ 22) ನಡೆದ ಕನಕ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಂದಾಯ ನಿರೀಕ್ಷಕ ಕುಮಾರ್ ಟಿ ಸಿ ಮಾತಾನಾಡಿ, ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಭಕ್ತ ಎಂದರೆ ಕನಕದಾಸರು ಎಂದರೆ ತಪ್ಪಾಗಲಾರದು. ತಮ್ಮ ಸರಳ ರಚನೆಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಿದವರು ಕನಕದಾಸರು ಎಂದರು. 

ಉಪತಹಶೀಲ್ದಾರ್ ದಿವಾಕರ ಮುಗುಳಿಯ, ತಾಲೂಕು ಕಚೇರಿ ಸಿಬ್ಬಂದಿಗಳು, ಗ್ರಾಮ ಲೆಕ್ಕಾಧಿಕಾರಿಗಳು, 

ಗ್ರಾಮ ಸಹಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಶುಕುಮಾರ್ ಸ್ವಾಗತಿಸಿ, ವಂದಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಭಕ್ತಿಯ ಮೂಲಕ ಭಗವಂತನ ಒಲಿಸಿಕೊಳ್ಳಬಹದು ಎಂದು ಸಾರಿದವರು ಕನಕದಾಸರು : ರಾಜೇಶ್ ನಾಯ್ಕ್ Rating: 5 Reviewed By: karavali Times
Scroll to Top