ಬಂಟ್ವಾಳ, ಜನವರಿ 26, 2022 (ಕರಾವಳಿ ಟೈಮ್ಸ್) : ತಾಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ದೇಶದ 73ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಪ್ರೌಢ ಶಾಲಾ ಹಿರಿಯ ವಿದ್ಯಾರ್ಥಿ, ಕಾಂಪ್ರಬೈಲ್ ಶ್ರೀ ಉಳ್ಳಾಲ್ತಿ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯಾನಂದ ಆಚಾರ್ಯ ಧ್ವಜಾರೋಹಣಗೈದರು. ಕಾರ್ಯಕ್ರಮದಲ್ಲಿ ಪ್ರೌಢ ಶಾಲಾ ಎನ್.ಸಿ.ಸಿ ವಿದ್ಯಾರ್ಥಿಗಳು ಘೋಷ್ ವಾದನದೊಂದಿಗೆ ಪಥಸಂಚಲನ ನಡೆಸಿದರು.
ಇದೇ ವೇಳೆ ಗಣ್ಯರು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಬಳಿಕ ಪದವಿ ಕಾಲೇಜಿನ ಪ್ರಾಧ್ಯಾಪಕ ಯತಿರಾಜ್ ಪೆರಾಜೆ ಮಾತನಾಡಿ, ಇಂದು ಜಯಂತಿ, ಉತ್ಸವಗಳ ಆಚರಣೆ ನಾಟಕೀಯವಾಗಿದ್ದು, ಉದ್ದೇಶಿತ ತತ್ವಗಳು ಜೀವನದಲ್ಲಿ ಅಳವಡಿಕೆಯಾಗದಿರುವುದು ಖೇದಕರ. ಅಂಬೇಡ್ಕರರ ಜಯಂತಿಯಂತಹ ಕಾರ್ಯಕ್ರಮಗಳನ್ನು ಕಳೆದ 75 ವರ್ಷಗಳಿಂದ ಮಾಡುತ್ತಿದ್ದರೂ, ಜೀವನದಲ್ಲಿ ಅಳವಡಿಸುವ ಪ್ರಯತ್ನಗಳು ಆಗಲೇ ಇಲ್ಲ, ಈ ಹಿನ್ನೆಲೆಯಲ್ಲಿ ಯೋಚಿಸಬೇಕಾದ ಅಗತ್ಯತೆ ಮತ್ತು ಕಾರ್ಯಕ್ರಮಗಳು ವರದಿಗೆ ಸೀಮಿತವಾಗದೆ ಕಾರ್ಯರೂಪಕ್ಕೆ ಬರಬೇಕು ಎಂದರು.
ವಿದ್ಯಾ ಕೇಂದ್ರದ ಸಹ ಸಂಚಾಲಕ ರಮೇಶ್ ಎನ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶಾಂಭವಿ ಮಾತಾಜಿ, ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲ ವಸಂತ ಬಲ್ಲಾಳ್, ಪದವಿ ವಿಭಾಗದ ಪ್ರಾಂಶುಪಾಲ ಕೃಷ್ಣಪ್ರಸಾದ್ ಹಾಗೂ ಶಿಕ್ಷಕರು, ಶಿಕ್ಷಕೇತರರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ.ಪೂ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಕರುಣಾಕರ ಶ್ರೀಮಾನ್ ಮತ್ತು ಪ್ರೌಢಶಾಲಾ ಶಾರೀರಿಕ ಶಿಕ್ಷಣ ಶಿಕ್ಷಕ ಪುರುಷೋತ್ತಮ ಶ್ರೀಮಾನ್ ಹಾಗೂ ಗೋಪಾಲ್ ಶ್ರೀಮಾನ್ ಮತ್ತು ಜಿನ್ನಪ್ಪ ಶ್ರೀಮಾನ್ ಕಾರ್ಯಕ್ರಮ ನಿರ್ವಹಿಸಿದರು.
0 comments:
Post a Comment