ಬಂಟ್ವಾಳ, ಜನವರಿ 07, 2022 (ಕರಾವಳಿ ಟೈಮ್ಸ್) : ತಾಲೂಕಿನ ಕೊಳ್ನಾಡು ಗ್ರಾಮದ ಸಾಲೆತ್ತೂರು ನಿವಾಸಿ ಅಝೀಝ್ ಅವರ ಮಗಳ ಮದುವೆ ಸಮಾರಂಭ ಜನವರಿ 6 ರಂದು ನಡೆದಿದ್ದು, ಈ ಮದುವೆಯಲ್ಲಿ ವರ ಕೇರಳ ರಾಜ್ಯದ ಉಪ್ಪಳದ ಸೋಂಕಳು ನಿವಾಸಿ ಉಮರುಳ್ಳ ಬಾಷಿತ್ ಹಿಂದೂ ಸಮುದಾಯದ ಕೊರಗಜ್ಜ ದೈವದ ವೇಷ ಧರಿಸಿ ಕುಣಿದು ಕುಪ್ಪಳಿಸಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಲ್ಲಿ ವರನ ಹಾಗೂ ಸಂಗಡಿಗರ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.
ವರನು ತನ್ನ ಸಂಗಡಿಗರೊಂದಿಗೆ ವಿವಾಹದ ದಿನ ರಾತ್ರಿ ಸಾಂಪ್ರಾಯಿಕ ಕಟ್ಟುಪಾಡಿಗಾಗಿ ವಧುವಿನ ಮನೆಗೆ ಬರುವ ಸಂದರ್ಭ ಹಿಂದೂ ಹಿಂದೂ ಸಮುದಾಯದವರು ಆರಾಧಿಸುವ ಕೊರಗಜ್ಜ ಧೈವದ ವೇಷ ಧರಿಸಿ ಮತ್ತು ಆತನ ಸಂಗಡಿಗರು ಅಸಭ್ಯವಾಗಿ ಕುಣಿದು ಕುಪ್ಪಳಿಸುತ್ತಾ ಬಂದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಲ್ಲದೆ ಸಮಾಜದಲ್ಲಿ ಅಶಾಂತಿ ಸೃಷ್ಠಿಸುವ ಉದ್ದೇಶದಿಂದ ಅದರ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ದುಷ್ಕೃತ್ಯ ಮೆರೆದಿರುತ್ತಾರೆ. ಈ ಕೃತ್ಯದಿಂದ ಇಡೀ ಹಿಂದೂ ಧಾರ್ಮಿಕ ಭಾವನೆಗಳಿಗೆ ಅಪಮಾನವೆಸಗಿರುತ್ತಾರೆ. ಈ ಅಪಹಾಸ್ಯಕರ ಕೃತ್ಯದಿಂದ ಸಮಾಜದಲ್ಲಿ ಅಶಾಂತಿ ಸೃಷ್ಠಿಯಾಗುವ ಸಾಧ್ಯವಿರುವುದರಿಂದ ಈ ಅವಮಾನಕರ ಹಾಗೂ ಹಿಂದೂಗಳ ಧಾರ್ಮಿಕ ಭಾವನೆಗೆ ಅಪಮಾನಗೊಳಿಸಿ ಧಕ್ಕೆ ತಂದಿರುವುದಲ್ಲದೇ ಧರ್ಮ-ಧರ್ಮಗಳ ನಡುವೆ ವೈರತ್ವ ಉಂಟು ಮಾಡಿರುವ ಪರಸ್ಪರ ಸೌಹಾರ್ದತೆಗೆ ಧಕ್ಕೆ ಉಂಟು ಮಾಡುವ ಕೃತ್ಯದಲ್ಲಿ ತೊಡಗಿರುವ ವರ ಹಾಗೂ ವಧುವಿನ ಮನೆಯವರ ವಿರುದ್ದ ಹಾಗೂ ಈ ಕೃತ್ಯದಲ್ಲಿ ತೊಡಗಿರುವ ವರನ ಸ್ನೇಹಿತರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕಡಂಬು ನಿವಾಸಿ ಚೇತನ್ ಎಂಬವರು ವಿಟ್ಲ ಠಾಣೆಯಲ್ಲಿ ದಾಖಲಿಸಿರುವ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 04/2022 ಕಲಂ 153ಎ, 295 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment