ಬಂಟ್ವಾಳ, ಫೆಬ್ರವರಿ 22, 2022 (ಕರಾವಳಿ ಟೈಮ್ಸ್) : ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ದ ಮಾರ್ಚ್ 28 ಹಾಗೂ 29ರಂದು ಅಖಿಲ ಭಾರತ ಮುಷ್ಕರಕ್ಕೆ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಕರೆ ನೀಡಿದ್ದು, ಈ ಮುಷ್ಕರ ಯಶಸ್ಸಿಗೆ ಬಂಟ್ವಾಳ ಸಿಐಟಿಯು ಕರೆ ನೀಡಿದೆ.
ಬಿ ಸಿ ರೋಡಿನಲ್ಲಿ ನಡೆದ ಸಿಐಟಿಯು ಕಾರ್ಯಕರ್ತರ ಬಂಟ್ವಾಳ ತಾಲೂಕು ಸಮಾವೇಶದಲ್ಲಿ ಈ ಕರೆ ನೀಡಲಾಗಿದೆ. ಸಮಾವೇಶದಲ್ಲಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಜೆ ಬಾಲಕೃಷ್ಣ ಶೆಟ್ಟಿ ಅವರು, ಕೇಂದ್ರ ಸರಕಾರವು ಕಾರ್ಮಿಕ ವಿರೋಧಿ ಕಾನೂನನ್ನು ಜಾರಿಗೊಳಿಸುತ್ತಿದ್ದು, ಇದರಿಂದ ದೇಶದ ಕಾರ್ಮಿಕ ವರ್ಗ ಸಂಕಷ್ಟವನ್ನು ಎದುರಿಸುವಂತಾಗಿದೆ. ಈ ನಿಟ್ಟಿನಲ್ಲಿ ಸರಕಾರವನ್ನು ಎಚ್ಚರಿಸಲು ಕಾರ್ಮಿಕ ಸಂಘಟನೆಗಳಿಂದ ಮಾರ್ಚ್ 28 ಮತ್ತು 29 ರಂದು ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಲಾಗಿದ್ದು ಮುಷ್ಕರ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಕಾರ್ಮಿಕ ಮುಖಂಡ ಉದಯಕುಮಾರ್ ಬಂಟ್ವಾಳ, ಸಿಐಟಿಯು ಬಂಟ್ವಾಳ ತಾಲೂಕು ಕಾರ್ಯದರ್ಶಿ ರಾಮಣ್ಣ ವಿಟ್ಲ, ಅಕ್ಷರ ದಾಸೋಹ ನೌಕರರ ಮುಖಂಡ ವಿನಯ ನಡುಮುಗೇರು ಮೊದಲಾದವರು ಸಮಾವೇಶದ ನೇತೃತ್ವ ವಹಿಸಿದ್ದರು.
0 comments:
Post a Comment