ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಅಮ್ಮೆಂಬಳ ಬಾಳಪ್ಪರ ಬದುಕು ಯುವಕರಿಗೆ ಮಾದರಿ : ಮಾಜಿ ಸಚಿವ ರೈ - Karavali Times ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಅಮ್ಮೆಂಬಳ ಬಾಳಪ್ಪರ ಬದುಕು ಯುವಕರಿಗೆ ಮಾದರಿ : ಮಾಜಿ ಸಚಿವ ರೈ - Karavali Times

728x90

23 February 2022

ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಅಮ್ಮೆಂಬಳ ಬಾಳಪ್ಪರ ಬದುಕು ಯುವಕರಿಗೆ ಮಾದರಿ : ಮಾಜಿ ಸಚಿವ ರೈ

ಬಂಟ್ವಾಳ ಫೆಬ್ರವರಿ 23, 2022 (ಕರಾವಳಿ ಟೈಮ್ಸ್) : ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಅಮ್ಮೆಂಬಳ ಬಾಳಪ್ಪರು ಜಾತಿ-ಭಾಷೆ-ಧರ್ಮಗಳ ಎಲ್ಲೆಯನ್ನು ಮೀರಿ ಸಾಮಾಜಿಕ ಹೋರಾಟಕ್ಕೆ ಮೇಲ್ಪಂಕ್ತಿ ಹಾಕಿದ ಮಹಾನ್ ವ್ಯಕ್ತಿಯಾಗಿದ್ದರು ಎಂದು ಮಾಜಿ ಸಚಿವ ಬಿ ರಮಾನಾಥ ರೈ ಕೊಂಡಾಡಿದರು. 

ಬಂಟ್ವಾಳ ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿ ಬಿ ಸಿ ರೋಡು-ಪೆÇಸಳ್ಳಿ ಸಮುದಾಯ ಭವನದಲ್ಲಿ ಬುಧವಾರ ನಡೆದ ಸ್ವಾತಂತ್ರ್ಯ ಹೋರಾಟಗಾರ ಡಾ ಅಮ್ಮೆಂಬಳ ಬಾಳಪ್ಪ ಅವರ 100ನೇ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಅಮ್ಮೆಂಬಳ ಬಾಳಪ್ಪರು ನನಗೆ ಗುರು ಸಮಾನರಾಗಿದ್ದು, ಸಾಮಾಜಿಕ ಬದುಕಿನ ಬಗ್ಗೆ ನಾವು ಪರಸ್ಪರ ಚರ್ಚೆ ನಡೆಸುತ್ತಿದ್ದೆವು ಎಂದು ನೆನಪಿಸಿಕೊಂಡರು. ಸ್ವಾತಂತ್ರ್ಯ ಹೋರಾಟಗಾರರನ್ನು ನಾವು ಯಾವತ್ತೂ ಮರೆಯುವಂತಿಲ್ಲ. ಅದರಲ್ಲೂ ಬಾಳಪ್ಪರ ಬದುಕು ಯುವಕರಿಗೆ ಆದರ್ಶವಾಗಿದ್ದು, ಅವರ ಬದುಕಿನ ಬಗ್ಗೆ ಯುವ ಸಮೂಹ ಹೆಚ್ಚು ಹೆಚ್ಚು ತಿಳಿದುಕೊಳ್ಳುವ ಅಗತ್ಯವಿದೆ ಎಂದು ಇದೇ ವೇಳೆ ರೈ ಹೇಳಿದರು. 

ನಿವೃತ್ತ ಯೋಧ ಚಂದಪ್ಪ ಮೂಲ್ಯ ಮಾತನಾಡಿ, ಸಂಘಟಕರಾಗಿದ್ದುಕೊಂಡು ಸಾಮಾಜಿಕ ಬದ್ಧತೆ, ಕ್ರಾಂತಿಕಾರಕ ಬದಲಾವಣೆ ಮಾಡಿದ ವ್ಯಕ್ತಿಯಾಗಿರುವ ಅಮ್ಮೆಂಬಳ ಬಾಳಪ್ಪ ಅವರಂತಹ ವ್ಯಕ್ತಿಗಳನ್ನು ಅವರ ಮರಣಾನಂತರವೂ ಗುರುತಿಸಿ ಗೌರವ ನೀಡುವುದು ಮುಂದಿನ ಪೀಳಿಗೆಗೆ ಅವರ ಸಾಧನೆಗಳನ್ನು ನೆನಪಿಸುವ ಉತ್ತಮ ಕಾರ್ಯಕ್ರಮ ಎಂದರು. 

ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ನಾರಾಯಣ ಸಿ ಪೆರ್ನೆ, ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಬಳಕೆದಾರರ ವೇದಿಕೆ ಸಂಚಾಲಕ ಸುಂದರ್ ರಾವ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ನ್ಯಾಯವಾದಿ ಸುರೇಶ್ ಕುಲಾಲ್, ಪ್ರಮುಖರಾದ ರಮೇಶ್ ಪಣೋಲಿಬೈಲು, ಪರಮೇಶ್ವರ ಮೂಲ್ಯ, ಅಮ್ಮೆಂಬಳ ಆನಂದ, ಸುಕುಮಾರ್ ಬಂಟ್ವಾಳ್, ಸತೀಶ್ ಕುಲಾಲ್, ಲಕ್ಷ್ಮಣ ಕುಲಾಲ್ ಅಗ್ರಬೈಲು, ಮಾಧವ ಬಿ ಸಿ ರೋಡು, ಮಚ್ಚೇಂದ್ರ ಸಾಲ್ಯಾನ್, ರಮೇಶ್ ಸಾಲ್ಯಾನ್, ಸುಶೀಲಾ ಲಿಂಗಪ್ಪ, ಎಚ್ ಕೆ ನಯನಾಡು ಮೊದಲಾದವರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಅಮ್ಮೆಂಬಳ ಬಾಳಪ್ಪರ ಬದುಕು ಯುವಕರಿಗೆ ಮಾದರಿ : ಮಾಜಿ ಸಚಿವ ರೈ Rating: 5 Reviewed By: karavali Times
Scroll to Top