ಏಶ್ಯಾ ಕಪ್ ಟೂರ್ನಿ ಈ ಬಾರಿ ಟಿ-20 ಮಾದರಿಯಲ್ಲಿ : ಆಗಸ್ಟ್ 27 ರಿಂದ ಶ್ರೀಲಂಕಾದಲ್ಲಿ ಆರಂಭ? - Karavali Times ಏಶ್ಯಾ ಕಪ್ ಟೂರ್ನಿ ಈ ಬಾರಿ ಟಿ-20 ಮಾದರಿಯಲ್ಲಿ : ಆಗಸ್ಟ್ 27 ರಿಂದ ಶ್ರೀಲಂಕಾದಲ್ಲಿ ಆರಂಭ? - Karavali Times

728x90

19 March 2022

ಏಶ್ಯಾ ಕಪ್ ಟೂರ್ನಿ ಈ ಬಾರಿ ಟಿ-20 ಮಾದರಿಯಲ್ಲಿ : ಆಗಸ್ಟ್ 27 ರಿಂದ ಶ್ರೀಲಂಕಾದಲ್ಲಿ ಆರಂಭ?

ಮುಂಬೈ, ಮಾರ್ಚ್ 19, 2022 (ಕರಾವಳಿ ಟೈಮ್ಸ್) : 2022ರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಟಿ-20 ಮಾದರಿಯಲ್ಲಿ ನಡೆಯಲಿದ್ದು, ಶ್ರೀಲಂಕಾದಲ್ಲಿ ಆಗಸ್ಟ್ 27 ರಿಂದ ಆರಂಭಿಸಲು ಏಷ್ಯಾ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ. 

ಏಷ್ಯಾ ಖಂಡದ ದೇಶಗಳ ನಡುವೆ ನಡೆಯುವ ಈ ಕ್ರಿಕೆಟ್ ಟೂರ್ನಿ 2 ವರ್ಷಗಳಿಗೊಮ್ಮೆ ನಡೆಯುತ್ತಿತ್ತು. 2020ರಿಂದ ಕೊರೊನಾ ಕಾರಣದಿಂದ ಟೂರ್ನಿ ನಡೆದಿರಲಿಲ್ಲ. ಇದೀಗ 2022ರಲ್ಲಿ ಮತ್ತೆ ಟೂರ್ನಿ ಆಯೋಜಿಸಲು ಎಸಿಸಿ ತೀರ್ಮಾನಿಸಿದೆ. ಏಷ್ಯಾದ ತಂಡಗಳಾದ ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಹಾಗೂ ಕ್ವಾಲಿಫೈಯರ್ ಆಗಿ ಟೂರ್ನಿಗೆ ಆಯ್ಕೆಯಾಗುವ ತಂಡ ಸಹಿತ ಒಟ್ಟು 6 ತಂಡಗಳ ಮಧ್ಯೆ ಟೂರ್ನಿ ನಡೆಯಲಿದೆ.

ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡ ಒಟ್ಟು 7 ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ. ಉಳಿದಂತೆ ಶ್ರೀಲಂಕಾ 5 ಬಾರಿ, ಪಾಕಿಸ್ತಾನ 2 ಬಾರಿ ಏಷ್ಯಾ ಕಪ್ ಗೆದ್ದುಕೊಂಡಿದೆ.

  • Blogger Comments
  • Facebook Comments

0 comments:

Post a Comment

Item Reviewed: ಏಶ್ಯಾ ಕಪ್ ಟೂರ್ನಿ ಈ ಬಾರಿ ಟಿ-20 ಮಾದರಿಯಲ್ಲಿ : ಆಗಸ್ಟ್ 27 ರಿಂದ ಶ್ರೀಲಂಕಾದಲ್ಲಿ ಆರಂಭ? Rating: 5 Reviewed By: karavali Times
Scroll to Top