ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಟೆಲಿ ಐಸಿಯು ವ್ಯವಸ್ಥೆ ಮಂಜೂರು : ಶಾಸಕ ನಾಯಕ್ - Karavali Times ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಟೆಲಿ ಐಸಿಯು ವ್ಯವಸ್ಥೆ ಮಂಜೂರು : ಶಾಸಕ ನಾಯಕ್ - Karavali Times

728x90

31 March 2022

ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಟೆಲಿ ಐಸಿಯು ವ್ಯವಸ್ಥೆ ಮಂಜೂರು : ಶಾಸಕ ನಾಯಕ್

ಬಂಟ್ವಾಳ, ಮಾರ್ಚ್ 31, 2022 (ಕರಾವಳಿ ಟೈಮ್ಸ್) : ಇಲ್ಲಿನ ತಾಲೂಕು ಆಸ್ಪತ್ರೆಗೆ 1.66 ಕೋಟಿ ರೂಪಾಯಿ ವೆಚ್ಚದಲ್ಲಿ 25 ಐಸಿಯು ಬೆಡ್‍ಗಳು ಮಂಜೂರಾಗಿ ಅನುಷ್ಠಾನ ಹಂತದಲ್ಲಿದ್ದು, ಇದರ ಜೊತೆಗೆ  ರಾಜ್ಯದ 41 ತಾಲೂಕು ಆಸ್ಪತ್ರೆಗೆ ಮಂಜೂರಾದ ಟೆಲಿ ಐಸಿಯು ವ್ಯವಸ್ಥೆ ಬಂಟ್ವಾಳದಲ್ಲೂ ಶೀಘ್ರದಲ್ಲೇ ಕಾರ್ಯಾರಂಭಗೊಳ್ಳಲಿದೆ ಎಂದು ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಹೇಳಿದ್ದಾರೆ.

ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ  25 ಐಸಿಯು ಬೆಡ್‍ಗಳ ಅನುಷ್ಠಾನ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು ಈ ಮೊದಲು ಬಂಟ್ವಾಳದಲ್ಲಿ 3 ಐಸಿಯು ಬೆಡ್‍ಗಳು ಮಾತ್ರ ಇತ್ತು. ಇನ್ನು ಮುಂದಕ್ಕೆ ಆಸ್ಪತ್ರೆಯಲ್ಲಿ 25 ಐಸಿಯು ಬೆಡ್‍ಗಳ ಲಭ್ಯತೆ ಇರಲಿದ್ದು, ಇದು ಸಾರ್ವಜನಿಕರಿಗೆ ಅತ್ಯಂತ ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂದರು. 

ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುವ ಉದ್ದೇಶದಿಂದ ಆಸ್ಪತ್ರೆಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ನೀಡಲಾಗುತ್ತಿದ್ದು, ಅಮೃತ್ ಆರೋಗ್ಯ ಯೋಜನೆಯಡಿ ಬಂಟ್ವಾಳ ತಾಲೂಕಿನ ಬೆಂಜನಪದವು, ರಾಯಿ, ನಾವೂರು ದೈವಸ್ಥಳ ಹಾಗೂ ಪುಣಚ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲಾ 20 ಲಕ್ಷ ರೂಪಾಯಿಯಂತೆÉ ಒಟ್ಟು 1 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ ಎಂದು ಇದೇ ವೇಳೆ ಶಾಸಕರು ತಿಳಿಸಿದರು. 

ಬಂಟ್ಬಾಳ ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ ಪುಷ್ಪಲತಾ ಮಾತನಾಡಿ, ಆಸ್ಪತ್ರೆ ಇದೀಗ ಸುಸಜ್ಜಿತ ಆಸ್ಪತ್ರೆಯಾಗಿದ್ದು,  ಕಳೆದ ಎರಡೂವರೆ ವರ್ಷಗಳಿಂದ ಎಲ್ಲಾ ಮೂಲಭೂತ ಅಗತ್ಯಗಳನ್ನು ಒದಗಿಸಲು ಶಾಸಕರು ವಿಶೇಷ ಮುತುವರ್ಜಿಯಿಂದ ಕೆಲಸ ಮಾಡುತ್ತಿದ್ದಾರೆ, ಆಸ್ಪತ್ರೆಗೆ ಅತೀ ಅಗತ್ಯವಾಗಿರುವ ಸಿಸಿ ಕ್ಯಾಮೆರ, ಹೆಚ್ಚುವರಿ ಬೆಡ್, ಜನರೇಟರ್ ವ್ಯವಸ್ಥೆ, ಶಸ್ತ್ರ ಚಿತ್ಸೆಗೆ ಅಗತ್ಯವಿರುವ ಎಲ್ಲಾ ಸಲಕರಣೆಗಳನ್ನೂ ಕೂಡ ಒದಗಿಸಲಾಗಿದೆ ಎಂದರು.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಟೆಲಿ ಐಸಿಯು ವ್ಯವಸ್ಥೆ ಮಂಜೂರು : ಶಾಸಕ ನಾಯಕ್ Rating: 5 Reviewed By: karavali Times
Scroll to Top