ಮಂಗಳೂರು, ಮಾರ್ಚ್ 07, 2022 (ಕರಾವಳಿ ಟೈಮ್ಸ್) : ಮಂಗಳೂರು ಅಂಚೆ ವಿಭಾಗದ ತ್ರೈಮಾಸಿಕ ಅಂಚೆ ಅದಾಲತ್ ಮಾರ್ಚ್ 14 ರಂದು ಅಪರಾಹ್ನ 3:30ಕ್ಕೆ ಮಂಗಳೂರು-ಬಲ್ಮಠದ ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಛೇರಿಯಲ್ಲಿ ನಡೆಯಲಿದೆ.
ಈ ಅದಾಲತ್ತಿನಲ್ಲಿ ಮಂಗಳೂರು ಅಂಚೆ ವಿಭಾಗಕ್ಕೆ ಸಂಬಂಧಪಟ್ಟ ಎಲ್ಲಾ ರೀತಿಯ ಸಾರ್ವಜನಿಕ ಕುಂದು ಕೊರತೆಗಳನ್ನು, ತಕರಾರುಗಳನ್ನು ಪರಿಶೀಲಿಸಲಾಗುವುದು. ಸಾರ್ವಜನಿಕರು ಮಂಗಳೂರು ಅಂಚೆ ವಿಭಾಗಕ್ಕೆ ಸಂಬಂಧಪಟ್ಟ ದೂರುಗಳನ್ನು ಪತ್ರಮುಖೇನ “ಅಂಚೆ ಅದಾಲತ್” ತಲೆಬರಹದಡಿ ಮಾರ್ಚ್ 12ರೊಳಗೆ “ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ಅಂಚೆ ವಿಭಾಗ, ಬಲ್ಮಠ ಮಂಗಳೂರು 575002” ವಿಳಾಸಕ್ಕೆ ಕಳುಹಿಸಬಹುದು ಅಥವಾ ದೂರುಗಳನ್ನು ವಾಟ್ಸಾಪ್ ಸಂಖ್ಯೆ 9448291072 ಗೂ ಕಳುಹಿಸಬಹುದು. ಮಂಗಳೂರು ಅಂಚೆ ವಿಭಾಗಕ್ಕೆ ಸಂಬಂಧಪಟ್ಟ ದೂರುಗಳನ್ನು ಮಾತ್ರ ಸ್ವೀಕರಿಸುಲಾಗುವುದು ಎಂದು ಮಂಗಳೂರು ಹಿರಿಯ ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment