ಹಳೆ ವಾಹನ ರಿ-ರಿಜಿಸ್ಟ್ರೇಶನ್ ಇನ್ನು ಭಾರೀ ದುಬಾರಿ : ಸಾರಿಗೆ ಇಲಾಖೆಯ ಹೊಸ ನಿಯಮ ಎಪ್ರಿಲ್ 1 ರಿಂದ ಜಾರಿ - Karavali Times ಹಳೆ ವಾಹನ ರಿ-ರಿಜಿಸ್ಟ್ರೇಶನ್ ಇನ್ನು ಭಾರೀ ದುಬಾರಿ : ಸಾರಿಗೆ ಇಲಾಖೆಯ ಹೊಸ ನಿಯಮ ಎಪ್ರಿಲ್ 1 ರಿಂದ ಜಾರಿ - Karavali Times

728x90

15 March 2022

ಹಳೆ ವಾಹನ ರಿ-ರಿಜಿಸ್ಟ್ರೇಶನ್ ಇನ್ನು ಭಾರೀ ದುಬಾರಿ : ಸಾರಿಗೆ ಇಲಾಖೆಯ ಹೊಸ ನಿಯಮ ಎಪ್ರಿಲ್ 1 ರಿಂದ ಜಾರಿ

ನವದೆಹಲಿ, ಮಾರ್ಚ್ 15, 2022 (ಕರಾವಳಿ ಟೈಮ್ಸ್) : ನಿಗದಿತ ವರ್ಷಕ್ಕಿಂತ ಹಳೇ ವಾಹನಗಳನ್ನು ಗುಜುರಿಗೆ ಹಾಕುವ ನೀತಿಯನ್ನು ಸಾರಿಗೆ ಇಲಾಖೆ ದೇಶಾದ್ಯಂತ ಜಾರಿಗೆ ತರಲಾಗಿದೆ. ಇದು ನಗರ ಪ್ರದೇಶಗಳಲ್ಲಿನ ವಾಯು ಮಾಲಿನ್ಯ ತಗ್ಗಿಸಲು ಹಾಗೂ ಇಂಧನ ಪೆÇೀಲಾಗುವುದನ್ನು ತಪ್ಪಿಸಲು ಮಹತ್ವದ ಹೆಜ್ಜೆ ಎಂದೇ ಬಣ್ಣಿಸಲಾಗಿದೆ. ಇದೀಗ ನಿಗದಿತ ವರ್ಷಕ್ಕಿಂತ ಹಳೇ ವಾಹನಗಳನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಆದರೆ ಈ ವಾಹನಗಳ ಮರು ನೋಂದಣಿ ಶುಲ್ಕವನ್ನು 8 ಪಟ್ಟು ಹೆಚ್ಚಿಸಲಾಗಿದ್ದು, ಹೊಸ ನಿಯಮ ಎಪ್ರಿಲ್ 1 ರಿಂದ ಜಾರಿಗೆ ಬರಲಿದೆ.

ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಈ ಹೊಸ ನೀತಿ ಜಾರಿಗೆ ತರುತ್ತಿದೆ. ಈ ನಿಯಮಕ್ಕನುಗುಣವಾಗಿ ದೇಶದ ಎಲ್ಲಾ ರಾಜ್ಯಗಳಲ್ಲೂ ಶುಲ್ಕ ಹೆಚ್ಚಳವಾಗಲಿದೆ. ಸದ್ಯ ನಾಲ್ಕು ಚಕ್ರದ ಹಳೇ ವಾಹನ ಮರು ನೋಂದಣಿಗೆ 600 ರೂಪಾಯಿ 600 ಇದ್ದು, ಇದು ಎಪ್ರಿಲ್ 1 ರಿಂದ 5 ಸಾವಿರ ರೂಪಾಯಿಗೆ ಏರಿಕೆಯಾಗುತ್ತಿದೆ. ದ್ವಿಚಕ್ರ ವಾಹನ ಮರು ನೋಂದಣಿ ಶುಲ್ಕ 300 ರೂಪಾಯಿ ಇದ್ದುದು ಹೊಸ ನಿಯಮದಂತೆ ಎಪ್ರಿಲ್ 1 ರಿಂದ 1 ಸಾವಿರ ರೂಪಾಯಿ ಆಗಲಿದೆ. 15 ಸಾವಿರ ರೂಪಾಯಿ ಇದ್ದ ಆಮದು ಮಾಡಿಕೊಂಡ ಕಾರಿನ ಮರು ನೋಂದಣಿ ಶುಲ್ಕ ಎಪ್ರಿಲ್ 1 ರಿಂದ 40 ಸಾವಿರ ರೂಪಾಯಿಗೆ ಏರಿಕೆಯಾಗಲಿದೆ. 

ಕಾರು ಮರು ನೋಂದಣಿಯಲ್ಲಿ ವಿಳಂಬವಾದರೆ ಖಾಸಗಿ ವಾಹನ ಮಾಲೀಕರು ಪ್ರತಿ ತಿಂಗಳು 300 ರೂಪಾಯಿಯಂತೆ ಹೆಚ್ಚುವರಿಯಾಗಿ ದಂಡ ಕಟ್ಟಬೇಕು. ವಾಣಿಜ್ಯ ವಾಹನಗಳ ಮಾಲೀಕರು 500 ರೂಪಾಯಿ ದಂಡ ಕಟ್ಟಬೇಕು. 15 ವರ್ಷಕ್ಕಿಂತ ಮೇಲ್ಪಟ್ಟ ವಾಹನಗಳು ಪ್ರತಿ ವರ್ಷಕ್ಕೊಮ್ಮೆ ವಾಹನ ಮರು ನೋಂದಣಿ ಮಾಡಿಸಿಕೊಳ್ಳಬೇಕು.

ಮರು ನೋಂದಣಿ ದರ ಹೆಚ್ಚಳದ ಜೊತೆಗೆ ಫಿಟ್ನೆಸ್ ಸರ್ಟಿಫಿಕೇಟ್ ದರ ಕೂಡ ಹೆಚ್ಚಿಸಲಾಗಿದೆ. ಸದ್ಯ ವಾಣಿಜ್ಯ ವಾಹನಗಳ ಫಿಟ್ನೆಸ್ ಸರ್ಟಿಫಿಕೇಟ್ ಬೆಲೆ 1 ಸಾವಿರ ರೂಪಾಯಿ. ಆದರೆ ಎಪ್ರಿಲ್ 1 ರಿಂದ ಹೊಸ ನಿಯಮದಂತೆ ಈ ದರ 7 ಸಾವಿರ ರೂಪಾಯಿಗೆ ಏರಿಕೆಯಾಗಲಿದೆ. ಬಸ್ ಹಾಗೂ ಟ್ರಕ್ ಫಿಟ್ನೆಸ್ ಸರ್ಟಿಫಿಕೇಟ್ ಬೆಲೆ ಸದ್ಯ ಒಂದೂವರೆ ಸಾವಿರ ರೂಪಾಯಿ ಇದ್ದು, ಎಪ್ರಿಲ್ 1 ರಿಂದ ಇದು ಹನ್ನೆರಡುವರೆ ಸಾವಿರ ರೂಪಾಯಿಗೆ ಏರಿಕೆಯಾಗಲಿದೆ. 8 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ವಾಣಿಜ್ಯ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ಅತ್ಯವಶ್ಯಕವಾಗಿದೆ.

ಹಸಿರು ನ್ಯಾಯಾಧಿಕರಣದ ಆದೇಶದಂತೆ ದೆಹಲಿಯಲ್ಲಿ 10 ವರ್ಷ ಮೀರಿದ 1 ಲಕ್ಷ ವಾಹನಗಳ ನೋಂದಣಿಯನ್ನು ರದ್ದು ಮಾಡಲಾಗಿದೆ. ಹೀಗಾಗಿ ಈ ವಾಹನಗಳು ದೆಹಲಿಯಲ್ಲಿ ಇನ್ನು ಬಳಕೆಗೆ ನಿಷ್ಕ್ರಿಯವಾಗಲಿದೆ. ಆದರೆ ಇವುಗಳನ್ನು ಎಲೆಕ್ಟ್ರಿಕ್ ಮಾದರಿಗೆ ಬದಲಾಯಿಸಬಹುದು ಅಥವಾ ಇತರೆ ರಾಜ್ಯಗಳ ಜನರಿಗೆ ಮಾರಾಟ ಮಾಡಬಹುದು. ರದ್ದಾದ ವಾಹನಗಳ ಪೈಕಿ 87,000 ಕಾರು, ಉಳಿದವು ವಾಣಿಜ್ಯ ವಾಹನಗಳಾಗಿವೆ. ಜೊತೆಗೆ 15 ವರ್ಷ ಮೀರಿದ ಪೆಟ್ರೋಲ್ ವಾಹನಗಳ ನೋಂದಣಿಯನ್ನು ರದ್ದು ಮಾಡುವ ಯೋಜನೆ ಇದೆ ಎಂದು ಹೇಳಲಾಗುತ್ತಿದೆ.  15 ವರ್ಷ ಮೀರಿದ 32 ಲಕ್ಷ ದ್ವಿಚಕ್ರ ವಾಹನಗಳು ಮತ್ತು 11 ಲಕ್ಷ ಕಾರುಗಳು ಸೇರಿದಂತೆ 43 ಲಕ್ಷಕ್ಕೂ ಅಧಿಕ ಪೆಟ್ರೋಲ್ ವಾಹನಗಳನ್ನು ಗುರುತಿಸಲಾಗಿದೆ.

ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ಬ್ಯಾಟರಿ ಚಾಲಿತ ವಾಹನಗಳಿಗೆ ನೋಂದಣಿ ಮತ್ತು ನೋಂದಣಿ ಪ್ರಮಾಣಪತ್ರ ಪರಿಷ್ಕರಣೆ ಶುಲ್ಕದಿಂದ ವಿನಾಯಿತಿ ನೀಡಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಸದ್ಯ ಎಲೆಕ್ಟ್ರಿಕ್ ವಾಹನಗಳಿಗೆ ಒಂದೊಂದು ರಾಜ್ಯಗಳಲ್ಲಿ ಒಂದೊಂದು ರೀತಿಯ ನೋಂದಣಿ ಶುಲ್ಕವನ್ನು ವಿಧಿಸಲಾಗುತ್ತಿದೆ. ಹೀಗಾಗಿ ನೂತನ ಅಧಿಸೂಚನೆ ಎಲೆಕ್ಟ್ರಿಕ್ ವಾಹನಗಳ ದರವನ್ನು ಕಡಿಮೆ ಮಾಡುವುದರ ಜೊತೆ ದೇಶದಲ್ಲಿ ಏಕರೂಪದ ದರವನ್ನು ನಿಗದಿಪಡಿಸಲು ನೆರವಾಗಲಿದೆ. ಈ ಸಂಬಂಧ ಸಚಿವಾಲಯ 2021ರ ಮೇ ತಿಂಗಳಲ್ಲಿ ಕರಡು ಪ್ರಸ್ತಾವನೆಯನ್ನು ಸಿದ್ಧಪಡಿಸಿತ್ತು. ಇದೀಗ ಈ ಪ್ರಸ್ತಾವನೆ ಜಾರಿಗೆ ಬಂದಿದೆ.

  • Blogger Comments
  • Facebook Comments

0 comments:

Post a Comment

Item Reviewed: ಹಳೆ ವಾಹನ ರಿ-ರಿಜಿಸ್ಟ್ರೇಶನ್ ಇನ್ನು ಭಾರೀ ದುಬಾರಿ : ಸಾರಿಗೆ ಇಲಾಖೆಯ ಹೊಸ ನಿಯಮ ಎಪ್ರಿಲ್ 1 ರಿಂದ ಜಾರಿ Rating: 5 Reviewed By: karavali Times
Scroll to Top