ಮಂಗಳೂರು, ಮಾರ್ಚ್ 06, 2022 (ಕರಾವಳಿ ಟೈಮ್ಸ್) : ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷರೂ, ಮುಸ್ಲಿಂ ಲೀಗ್ ಕೇರಳ ರಾಜ್ಯಾಧ್ಯಕ್ಷರೂ, ಸುನ್ನೀ ಲೋಕದ ಪ್ರಮುಖ ಪಂಡಿತ ಶಿರೋಮಣಿಯೂ, ಕೇರಳದ ಹಲವು ಮೊಹಲ್ಲಾಗಳ ಖಾಝಿಯೂ ಆಗಿರುವ ಪಾಣಕ್ಕಾಡ್ ಸಯ್ಯದ್ ಹೈದರಾಲಿ ಶಿಹಾಬ್ ತಂಙಳ್ (74) ಭಾನುವಾರ ನಿಧನರಾಗಿದ್ದಾರೆ.
ಅಲ್ಪ ಕಾಲದ ಅನಾರೋಗ್ಯದಿಂದ ಅಂಗಮಾಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ನಿಧನರಾಗಿದ್ದಾರೆ.
ಜೂನ್ 15, 1947ರಂದು ಮಾಳಿಯೆಕ್ಕಲ್ ಸಯ್ಯದ್ ಅಹ್ಮದ್ ಪೂಕೋಯಾ ತಂಙಳ್ ಮತ್ತು ಸಯ್ಯಿದತ್ ಆಯಿಷಾ ಷಾ ಬೀವಿ ಅವರ ಮೂರನೇ ಪುತ್ರರಾಗಿ ಜನಿಸಿದ ಇವರು ಪಟ್ಟಿಕಾಡ್ ಜಮಿಯಾ ನೂರಿಯಾ ಅರೇಬಿಕ್ ಕಾಲೇಜಿನಿಂದ 1974ರಲ್ಲಿ ಪ್ರಮುಖ ಸೂಫಿವರ್ಯ ಚಾಪಜಂಗಾಡಿ ಬಾಪು ಮುಸ್ಲಿಯಾರ್ ಅವರಿಂದ ಮೌಲಾನಾ ಫಾಝಿಲ್ ಫೈಝಿ ಪದವಿಯನ್ನು ಸ್ವೀಕರಿಸಿದರು.
ಜಾಮಿಯಾ ನೂರಿಯಾದಲ್ಲಿ ಮರ್ಹೂಂ ಶಂಸುಲ್ ಉಲಾಮಾ ಇ.ಕೆ. ಅಬೂಬಕ್ಕರ್ ಮುಸ್ಲಿಯಾರ್, ಕೋಟುಮಲ ಅಬೂಬಕರ್ ಮುಸ್ಲಿಯಾರ್, ಕೆ.ಸಿ ಜಮಾಲುದ್ದೀನ್ ಮುಸ್ಲಿಯಾರ್ ಮುಂತಾದವರು ಸಯ್ಯಿದರ ಪ್ರಮುಖ ಗುರುವರ್ಯರಾಗಿದ್ದಾರೆ. 1973ರಲ್ಲಿ ಸಮಸ್ತ ವಿದ್ಯಾರ್ಥಿ ಸಂಸ್ಥೆ ರಚನೆಯಾದಾಗ, ಅವರು ಮೊದಲ ಅಧ್ಯಕ್ಷರಾಗಿದ್ದರು. ಅವರ ಸಹಪಾಠಿ ಮತ್ತು ಈಗ ದಾರುಲ್ ಹುದಾ ವಿಶ್ವವಿದ್ಯಾಲಯದ ವೈಸ್ ಚಾನ್ಸಿಲರ್ ಆಗಿರುವ ಬಹಾವುದ್ದೀನ್ ಮೊಹಮ್ಮದ್ ನದ್ವಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಕೇರಳದಲ್ಲಿ ಅತಿ ಹೆಚ್ಚು ಮೊಹಲ್ಲಾಗಳ ಖಾಝಿ ಸ್ಥಾನವನ್ನು ಹೈದರಾಲಿ ಶಿಹಾಬ್ ತಂಙಳ್ ಅಲಂಕರಿಸಿದ್ದಾರೆ.
1990ರಲ್ಲಿ ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಇವರು 18 ವರ್ಷಗಳ ಕಾಲ ಮುಸ್ಲಿಂ ಲೀಗ್ ಮಲಪ್ಪುರಂ ಜಿಲ್ಲಾಧ್ಯಕ್ಷರಾಗಿದ್ದರು. ಸಯ್ಯಿದ್ ಮುಹಮ್ಮದ್ ಅಲಿ ಶಿಹಾಬ್ ತಂಙಳ್ ಅವರ ನಿಧನದ ಬಳಿಕ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗಿನ ಕೇರಳ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಮುಸ್ಲಿಂ ಲೀಗ್ ಹೈಕಮಿಷನ್ ಸದಸ್ಯ ಮತ್ತು ರಾಜಕೀಯ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಹುದ್ದೆಯನ್ನು ಹೊಂದಿದ್ದರು.
ಸಮಸ್ತ ಕೇರಳ ಜಮಿಯತುಲ್ ಉಲಮಾ ಉಪಾಧ್ಯಕ್ಷರು, ಸುನ್ನಿ ಯುವ ಸಮೂಹ ರಾಜ್ಯಾಧ್ಯಕ್ಷರು, ಸಮಸ್ತ ಕೇರಳ ಇಸ್ಲಾಂ ಧಾರ್ಮಿಕ ಶಿಕ್ಷಣ ಮಂಡಳಿಯ ಕೋಶಾಧಿಕಾರಿ, ವಯನಾಡ್ ಖಾಝಿ, ಎಸ್‍ವೈಎಸ್ ರಾಜ್ಯಾಧ್ಯಕ್ಷರು, ಎಸ್‍ಎಂಎಫ್ ರಾಜ್ಯಾಧ್ಯಕ್ಷರು, ಜಾಮಿಯಾ ನೂರಿಯಾ ಅಧ್ಯಕ್ಷರು, ನಂದಿ ಜಾಮಿಯಾ ದಾರುಸ್ಸಲಾಮ್ ಅಧ್ಯಕ್ಷರು, ಇಸ್ಲಾಮಿಕ್ ಕಾಲೇಜುಗಳ ಸಮನ್ವಯ (ವಾಫಿ, ವಾಫಿಯಾ) ಡೈರೆಕ್ಟರ್, ದಾರುಲ್ ಹುದಾ ಚಾನ್ಸಲರ್, ಎಂಇಎ ಎಂಜಿ£ನಿಯರಿಂಗ್ ಕಾಲೇಜು ಅಧ್ಯಕ್ಷರು, ಸುಪ್ರಭಾತಮ್ ಮುಖ್ಯ ಪೆÇೀಷಕರು ಹೀಗೆ ಹಲವಾರು ಸ್ಥಾನಗಳನ್ನು ಹೊಂದಿದ್ದರು.
ಕೊಯಿಲಾಂಡಿಯ ಅಬ್ದುಲ್ಲಾ ಬಾಫಾಕಿ ತಂಙಳ್ ಅವರ ಪುತ್ರಿ ಸಯ್ಯಿದತ್ ಶರೀಫಾ ಫಾತಿಮಾ ಸುಹ್ರಾ ಬೀವಿ ಅವರನ್ನು ವಿವಾಹವಾಗಿದ್ದರು. ಸಯ್ಯದ್ ನಯೀಮ್ ಅಲಿ ಶಿಹಾಬ್ ತಂಙಳ್, ಸಯ್ಯದ್ ಮುಯೀನ್ ಅಲಿ ಶಿಹಾಬ್ ತಂಙಳ್, ಸಯ್ಯದತ್ ಸಾಜಿದಾ ಬೀವಿ, ಸಯ್ಯದತ್ ಶಾಹಿದಾ ಬೀವಿ ಇವರ ಮಕ್ಕಳಾಗಿದ್ದಾರೆ.
ಮರ್‍ಹೂಂ ಸಯ್ಯಿದ್ ಮುಹಮ್ಮದ್ ಅಲಿ ಶಿಹಾಬ್ ತಂಙಳ್, ಸಯ್ಯಿದ್ ಉಮರಾಲಿ ಶಿಹಾಬ್ ತಂಙಳ್, ಸಯ್ಯಿದ್ ಸ್ವಾದಿಖಲಿ ಶಿಹಾಬ್ ತಂಙಳ್, ಸಯ್ಯಿದ್ ಅಬ್ಬಾಸಲಿ ಶಿಹಾಬ್ ತಂಙಳ್ ಇವರ ಸಹೋದರರಾಗಿದ್ದು, ಸಯ್ಯಿದತ್ ಖದೀಜಾ ಬೀವಿ ಮತ್ತು ಸಯ್ಯಿದತ್ ಮುಲ್ಲಾ ಬೀವಿ ಇವರ ಸಹೋದರಿಯರಾಗಿದ್ದಾರೆ.
ಗಣ್ಯರ ಸಂತಾಪ
ಸಯ್ಯಿದ್ ಪಾಣಕ್ಕಾಡ್ ಶಿಹಾಬ್ ತಂಙಳ್ ಅವರ ನಿಧನಕ್ಕೆ ಮಾಜಿ ಸಚಿವ ಬಿ ರಮಾನಾಥ ರೈ, ಬಂಟ್ವಾಳ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ತಾ ಪಂ ಮಾಜಿ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಸಜಿಪಮುನ್ನೂರು ಗ್ರಾ ಪಂ ಮಾಜಿ ಸದಸ್ಯ ಯೂಸುಫ್ ಕರಂದಾಡಿ, ಪುದು ಗ್ರಾ ಪಂ ಸದಸ್ಯ ಹಾಶೀರ್ ಪೇರಿಮಾರ್, ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖಾಧ್ಯಕ್ಷ ಹನೀಫ್ ಹಾಸ್ಕೋ ಸಹಿತ ಹಲವು ಗಣ್ಯರು ತೀವ್ರ ದುಃಖ ಹಾಗೂ ಸಂತಾಪ ವ್ಯಕ್ತಪಡಿಸಿದ್ದಾರೆ.
0 comments:
Post a Comment