ಬಂಟ್ವಾಳದ ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ, ಮಗು ಜನನ ಪ್ರಕರಣ : ಆರೋಪಿ ಕಿನ್ನಿಗೋಳಿ ಯುವಕ ಅರೆಸ್ಟ್ - Karavali Times ಬಂಟ್ವಾಳದ ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ, ಮಗು ಜನನ ಪ್ರಕರಣ : ಆರೋಪಿ ಕಿನ್ನಿಗೋಳಿ ಯುವಕ ಅರೆಸ್ಟ್ - Karavali Times

728x90

20 May 2022

ಬಂಟ್ವಾಳದ ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ, ಮಗು ಜನನ ಪ್ರಕರಣ : ಆರೋಪಿ ಕಿನ್ನಿಗೋಳಿ ಯುವಕ ಅರೆಸ್ಟ್

ಬಂಟ್ವಾಳ, ಮೇ 20, 2022 (ಕರಾವಳಿ ಟೈಮ್ಸ್) : ಇಲ್ಲಿನ ನಗರ ಠಾಣಾ ವ್ಯಾಪ್ತಿಯ ನಿವಾಸಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಆಕೆ ಮಗುವಿಗೆ ಜನ್ಮ ನೀಡಲು ಕಾರಣನಾದ ಆರೋಪಿ ಕಿನ್ನಿಗೋಳಿ ಸಮೀಪದ ಕೊಲ್ಲೂರು ನಿವಾಸಿ ಅಶ್ವಥನನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ. 

ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡಿಕೊಂಡಿರುವ ಬಾಲಕಿ 2 ವರ್ಷಗಳ ಹಿಂದೆ ಸ್ನೇಹಿತೆಯ ಮದುವೆ ಕಾರ್ಯಕ್ರಮಕ್ಕೆ ಕಿನ್ನಿಗೋಳಿಗೆ ಹೋಗಿದ್ದ ವೇಳೆ ಅಶ್ವಥನ ಪರಿಚಯವಾಗಿ ಇಬ್ಬರೂ ಮೊಬೈಲ್ ಮೂಲಕ ಅನ್ಯೋನ್ಯವಾಗಿ ಮಾತನಾಡಿಕೊಂಡಿದ್ದರು. 2021 ರ ಜುಲೈ ತಿಂಗಳಲ್ಲಿ ಭಾನುವಾರ ಬಾಲಕಿ ಕಿನ್ನಿಗೋಳಿಗೆ ಹೋಗಿದ್ದ ವೇಳೆ ಮದ್ಯಾಹ್ನ ಸಮಯ 2.30ರ ವೇಳೆಗೆ ಆರೋಪಿ ಪಕ್ಕದಲ್ಲೇ ಇರುವ ಆತನ ಅಣ್ಣನ ಖಾಲಿ ಮನೆಗೆ ಕರೆದುಕೊಂಡು ಹೋಗಿ ಮದುವೆಯಾಗುತ್ತೇನೆಂದು ನಂಬಿಸಿ ದೈಹಿಕ ಸಂಭೋಗ ನಡೆಸಿರುತ್ತಾನೆ. 

ಬಳಿಕವೂ ಇಬ್ಬರೂ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದು, 2021 ರ ಅಕ್ಟೋರ್ 24 ರಂದು ಕಾಲೇಜಿಗೆ ರಜೆ ಇದ್ದುದರಿಂದ ಬಾಲಕಿ ಮತ್ತೆ ಅಶ್ವಥನ ಮನೆಗೆ ಹೋಗಿದ್ದು, ಆ ಸಂದರ್ಭದಲ್ಲೂ ಆತ ಬಾಲಕಿಯನ್ನು ಮದುವೆಯಾಗುತ್ತೇನೆಂದು ನಂಬಿಸಿ ಮತ್ತೆ ದೈಹಿಕ ಸಂಭೋಗ ಮಾಡಿರುತ್ತಾನೆ. 

ಮದುವೆಯಾಗುತ್ತೇನೆ ಎಂದು ನಂಬಿಸಿ ದೈಹಿಕ ಸಂಪರ್ಕ ಮಾಡಿದ್ದರಿಂದ ನೊಂದ ಬಾಲಕಿಯು ಗರ್ಭಿಣಿಯಾಗಿ ಗಂಡು ಮಗುವಿಗೆ ಜನ್ಮ ನೀಡಲು ಅಶ್ವಥನು  ಕಾರಣನಾಗಿದ್ದು ಆತನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತ ಬಾಲಕಿ ಗುರುವಾರ (ಮೇ 19, 2022) ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣಾ ಪೊಲೀಸರು ಆರೋಪಿ ಅಶ್ವಥನ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.   • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದ ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ, ಮಗು ಜನನ ಪ್ರಕರಣ : ಆರೋಪಿ ಕಿನ್ನಿಗೋಳಿ ಯುವಕ ಅರೆಸ್ಟ್ Rating: 5 Reviewed By: karavali Times
Scroll to Top