ಬೈಕ್ ಕಳವು ಪ್ರಕರಣ ಬೇಧಿಸಿ ಮೂವರು ಆರೋಪಿಗಳ ದಸ್ತಗಿರಿ ಮಾಡಿದ ಬಂಟ್ವಾಳ ಪೊಲೀಸ್ - Karavali Times ಬೈಕ್ ಕಳವು ಪ್ರಕರಣ ಬೇಧಿಸಿ ಮೂವರು ಆರೋಪಿಗಳ ದಸ್ತಗಿರಿ ಮಾಡಿದ ಬಂಟ್ವಾಳ ಪೊಲೀಸ್ - Karavali Times

728x90

18 May 2022

ಬೈಕ್ ಕಳವು ಪ್ರಕರಣ ಬೇಧಿಸಿ ಮೂವರು ಆರೋಪಿಗಳ ದಸ್ತಗಿರಿ ಮಾಡಿದ ಬಂಟ್ವಾಳ ಪೊಲೀಸ್

ಬಂಟ್ವಾಳ, ಮೇ 18, 2022 (ಕರಾವಳಿ ಟೈಮ್ಸ್) : ಇಲ್ಲಿನ ನಗರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಎಪ್ರಿಲ್ ತಿಂಗಳಲ್ಲಿ ದಾಖಲಾಗಿದ್ದ ಎರಡು ಬೈಕ್ ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು ಸೊತ್ತುಗಳ ಸಹಿತ ಮೂವರು ಆರೋಪಿಗಳಾದ ಬೆಳ್ತಂಗಡಿ ತಾಲೂಕು, ಕುವೆಟ್ಟು ಗ್ರಾಮದ ಸಬರಬೈಲು ನಿವಾಸಿ ಹಮೀದ್ ಅವರ ಪುತ್ರ ಸಿದ್ದೀಕ್ ಅಲಿಯಾಸ್ ಅಬೂಬಕ್ಕರ್ ಸಿದ್ದೀಕ್ (27), ಬೆಳ್ತಂಗಡಿ ತಾಲೂಕು, ಮಾಲಾಡಿ ಗ್ರಾಮದ ಉರ್ಕೆದಬೈಲು ನಿವಾಸಿ ಶರೀಫ್ ಮುಹಮ್ಮದ್ ಬಾವಾ ಅವರ ಪುತ್ರ ಸಮೀರ್ ಅಲಿಯಾಸ್ ಮೊಹಮ್ಮದ್ ಸಮೀರ್ (23) ಹಾಗೂ ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ನೆಹರುನಗರ ನಿವಾಸಿ ಯೂಸುಫ್ ಅವರ ಪುತ್ರ ಅಕ್ಬರ್ (32) ಎಂಬವರನ್ನು ಬಂಧಿಸಿದ್ದಾರೆ. 

ಎಪ್ರಿಲ್ 27 ರಂದು ರಾತ್ರಿ ಬಂಟ್ವಾಳ ತಾಲೂಕು ಬಂಟ್ವಾಳ ಕಸಬಾ ಗ್ರಾಮದ ಮಣಿಹಳ್ಳ ಎಂಬಲ್ಲಿ  ಮುಖೇಶ್ ಅವರು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸುಮಾರು 1 ಲಕ್ಷ ರೂಪಾಯಿ ಮೌಲ್ಯದ ಕೆಎ-19 ಎಚ್ 8075 ನೋಂದಣಿ ಸಂಖ್ಯೆಯ ಬೈಕ್ ಕಳವಾಗಿದ್ದು, ಈ ಬಗ್ಗೆ  ಬಂಟ್ವಾಳ ನಗರ ಪೆÇಲೀಸ್ ಠಾಣೆಯಲ್ಲಿ ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. ಎಪ್ರಿಲ್ 23 ರಂದು ಮಧ್ಯ ರಾತ್ರಿ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ರೈಲ್ವೇ ಸ್ಟೇಷನ್ ಬಳಿ ನಿಲ್ಲಿಸಿದ್ದ  ರೈಲ್ವೇ ಇಲಾಖೆಯ ಸಿಬ್ಬಂದಿ ಅನೂಫ್ ಅವರಿಗೆ ಸೇರಿದ್ದ ಕೆಎಲ್-60 ಇ-4280 ನೋಂದಣಿ ಸಂಖ್ಯೆಯ ಬೈಕ್ ಕಳವಾಗಿದ್ದು, ಈ ಬಗ್ಗೆ ಮಂಗಳೂರು ರೈಲ್ವೇ ಪೆÇಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿತ್ತು. 

ಈ ಎರಡೂ ಪ್ರಕರಣಗಳ ಬಗ್ಗೆ ಕಾರ್ಯಾಚರಣೆ ನಡೆಸಿದ ಬಂಟ್ವಾಳ ನಗರ ಪೊಲೀಸರ ತಂಡ ಆರೋಪಿಗಳನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡುವಲ್ಲಿ ಸಫಲರಾಗಿದ್ದು, ಆರೋಪಿಗಳಿಂದ ಕಳವು ಮಾಡಲಾದ ಬೈಕುಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಕೆಎ-21 ಪಿ 3990 ನೋಂದಣಿ ಸಂಖ್ಯೆಯ ಇಯೊನ್ ಕಾರನ್ನು ವಶಪಡಿಸಿಕೊಂಡಿದ್ದಾರೆ. 

ಆರೋಪಿಗಳ ಪತ್ತೆ ಕಾರ್ಯದಲ್ಲಿ ಜಿಲ್ಲಾ ಎಸ್ಪಿ ಹಾಗೂ ಎಡಿಶನಲ್ ಎಸ್ಪಿ ಅವರ ಮಾರ್ಗದರ್ಶನದಂತೆ, ಬಂಟ್ವಾಳ ಎಎಸ್ಪಿ ಶಿವಾಂಸು ರಜಪೂತ್ ಮತ್ತು ಪೆÇಲೀಸ್ ಇನ್ಸ್‍ಪೆಕ್ಟರ್ ವಿವೇಕಾನಂದ ಅವರ ನಿರ್ದೇಶನದಂತೆ ಪಿಎಸ್‍ಐಗಳಾದ  ಅವಿನಾಶ್ ಹಾಗೂ ಕಲೈಮಾರ್ ಅವರ ನೇತೃತ್ವದಲ್ಲಿ ವಿಶೇಷ ತಂಡದ ಸಿಬ್ಬಂದಿಗಳಾದ  ನಾರಾಯಣ, ಇರ್ಷಾದ್ ಪಿ, ಗಣೇಶ್, ಮನೋಹರ, ಪ್ರವೀಣ್, ಮೋಹನ, ನಾಗರಾಜ್, ಗಣಕಯಂತ್ರ ವಿಭಾಗದ  ಸಿಬ್ಬಂದಿಗಳಾದ ಸಂಪತ್ ಹಾಗೂ ದಿವಾಕರ ಅವರು ಭಾಗವಹಿಸಿದ್ದರು.   • Blogger Comments
  • Facebook Comments

0 comments:

Post a Comment

Item Reviewed: ಬೈಕ್ ಕಳವು ಪ್ರಕರಣ ಬೇಧಿಸಿ ಮೂವರು ಆರೋಪಿಗಳ ದಸ್ತಗಿರಿ ಮಾಡಿದ ಬಂಟ್ವಾಳ ಪೊಲೀಸ್ Rating: 5 Reviewed By: karavali Times
Scroll to Top