ಶಿವಮೊಗ್ಗ, ಮೇ 24, 2022 (ಕರಾವಳಿ ಟೈಮ್ಸ್) : ಜಿಲ್ಲೆಯ ಭದ್ರಾವತಿ ತಾಲೂಕಿನ ತಡಸಾ ಗ್ರಾಮದ ನಿವಾಸಿ ಆರೀಫ್ ಅವರ ಪತ್ನಿ 22 ವರ್ಷ ಪ್ರಾಯದ ಅಲ್ಮಾಜಾ ಬಾನು ಎಂಬ ಯುವತಿ ಸೋಮವಾರ ಬೆಳಿಗ್ಗೆ ನಾಲ್ಕು ಶಿಶುಗಳಿಗೆ ಜನ್ಮನೀಡಿ ಅಚ್ಚರಿ ಹುಟ್ಟಿಸಿದ್ದಾರೆ.
ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಎರಡು ಗಂಡು ಹಾಗೂ ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದು ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಸಿಸೇರಿಯನ್ ಮೂಲಕ ವೈದ್ಯರು ಈ ಕ್ಲಿಷ್ಟಕರ ಹೆರಿಗೆ ನಡೆಸಿದ್ದಾರೆ.
ನಾಲ್ಕು ಮಕ್ಕಳು ಕ್ರಮವಾಗಿ 1.1 ಕೆಜಿ , 1.2 ಕೆಜಿ, 1.3 ಕೆಜಿ 1.8 ಕೆಜಿ ತೂಕ ಹೊಂದಿವೆ.
0 comments:
Post a Comment