ಬಂಟ್ವಾಳ, ಮೇ 15, 2022 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಮೆಲ್ಕಾರ್-ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಹಝ್ರತ್ ಶೈಖ್ ಮೌಲವಿ (ಖ.ಸಿ) ಅವರ 42ನೇ ವರ್ಷದ ಉದಯಾಸ್ತಮಾನ ಉರೂಸ್ ಭಾನುವಾರ ಸಮಾಪ್ತಿಗೊಂಡಿತು.
ಸುಬುಹಿ ನಮಾಝ್ ಬಳಿಕ ಎ ಎ ಇಬ್ರಾಹಿಂ ಮುಸ್ಲಿಯಾರ್ ನೇತೃತ್ವದಲ್ಲಿ ಖತಮುಲ್ ಕುರ್ ಆನ್, ಲುಹ್ರ್ ನಮಾಝ್ ಬಳಿಕ ಸಯ್ಯಿದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ ಅವರ ನೇತೃತ್ವದಲ್ಲಿ ಮೌಲಿದ್ ಪಾರಾಯಣ ನಡೆಯಿತು. ಬಳಿಕ ಸಾರ್ವಜನಿಕ ಅನ್ನದಾನ ನಡೆಯಿತು.
ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಸಚಿವ ಬಿ ರಮಾನಾಥ ರೈ ಹಝ್ರತ್ ಶೈಖ್ ಮೌಲವಿ ದರ್ಗಾಕ್ಕೆ ಚಾದರ ಅರ್ಪಿಸಿದರು. ಈ ಸಂದರ್ಭ ದ ಕ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್, ಪತ್ರಕರ್ತ ಪಿ ಎಂ ಅಶ್ರಫ್ ಪಾಣೆಮಂಗಳೂರು, ಮಸೀದಿ ಅಧ್ಯಕ್ಷ ಹಾಜಿ ಎಸ್ ಮುಹಮ್ಮದ್, ಖತೀಬ್ ಕೆ ಪಿ ಮುಹಮ್ಮದ್ ಹಸ್ವೀಫ್ ದಾರಿಮಿ ಕಾಜಿನಡ್ಕ, ಮಸೀದಿ ಪದಾಧಿಕಾರಿಗಳಾದ ಬಿ ಎ ಮುಹಮ್ಮದ್ ನೀಮಾ, ಪಿ ಬಿ ಹಾಮದ್ ಹಾಜಿ, ಉಮ್ಮರ್ ಫಾರೂಕ್, ಅಬೂಬಕ್ಕರ್ ಮೆಲ್ಕಾರ್, ಹನೀಫ್ ಸಫಾ ಗೋಲ್ಡ್, ಅಬ್ದುಲ್ ರಹ್ಮಾನ್ ಹದ್ದಾದಿ, ಅಬೂಬಕ್ಕರ್ ಮದನಿ, ಮದ್ರಸ ಅಧ್ಯಾಪಕರಾದ ರಶೀದ್ ಹನೀಫಿ, ಉಸ್ಮಾನ್ ಮುಸ್ಲಿಯಾರ್, ಮುಹಮ್ಮದ್ ಇಸ್ಮಾಯಿಲ್ ಮುಸ್ಲಿಯಾರ್, ಅಬ್ದುಲ್ ರಝಾಕ್ ಮುಸ್ಲಿಯಾರ್, ಪ್ರಮುಖರಾದ ಮಜೀದ್ ಬೋಗೋಡಿ, ರಫೀಕ್ ಕೊಚ್ಚಿ,, ಹನೀಫ್ ಬೋಗೋಡಿ, ಅಬ್ದುಲ್ ಮಜೀದ್, ಮುತ್ತಲಿಬ್ ಬಂಗ್ಲೆಗುಡ್ಡೆ, ಅಬ್ದುಲ್ ಹಮೀದ್ ಗುಡ್ಡೆಅಂಗಡಿ, ಯಾಕೂಬ್, ಮಜೀದ್ ಬೋಳಂಗಡಿ, ಮುಹಮ್ಮದ್ ಇರ್ಶಾದ್ ಗುಡ್ಡೆಅಂಗಡಿ, ಶರೀಫ್ ಭೂಯಾ, ರಿಯಾಝ್ ಬೆಂಗಳೂರು, ರವೂಫ್ ಗುಡ್ಡೆಅಂಗಡಿ, ಬಶೀರ್ ಬೋಗೋಡಿ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment