ಬಂಟ್ವಾಳ, ಮೇ 02, 2022 (ಕರಾವಳಿ ಟೈಮ್ಸ್) : ತಾಲೂಕಿನ ವಿಟ್ಲ ಸಮೀಪದ ಕನ್ಯಾನದಲ್ಲಿ ನೀರು ಕುಡಿಯಲು ನಾಡಿಗೆ ಬಂದ ಕಾಡು ಕೋಣ ನೀರಿನ ಕೊಳದಲ್ಲಿ ಬಿದ್ದು ಒದ್ದಾಡಿದ ಘಟನೆ ಬೆಳಕಿಗೆ ಬಂದಿದೆ.
ಇಲ್ಲಿಗೆ ಸಮೀಪದ ಕಳೆಂಜೆಮಲೆ ರಕ್ಷಿತಾರಣ್ಯದಿಂದ ಈ ಕಾಡು ಕೋಣ ನೀರು ಅರಸಿಕೊಂಡು ನಾಡಿಗೆ ಬಂದಿದ್ದ ವೇಳೆ ಕನ್ಯಾನ ಭಾರತ ಸೇವಾಶ್ರಮದ ನೀರಿನ ಕೊಳದಲ್ಲಿ ನೀರು ಕುಡಿಯಲು ಯತ್ನಿಸಿದಾಗ ಆಯತಪ್ಪಿ ಕೊಳದೊಳಗೆ ಬಿದ್ದು ಒದ್ದಾಡಿದೆ. ರಾತ್ರಿ ವೇಳೆ ಘಟನೆ ನಡೆದಿದ್ದರೂ ಬೆಳಗ್ಗಿನ ವೇಳೆ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ವಿಟ್ಲ ಅರಣ್ಯಾಧಿಕಾರಿಗಳು ಭೇಟಿ ನೀೀಡಿ, ಕಾರ್ಯಾಚರಣೆ ನಡೆಸಿದ್ದಾರೆ.
0 comments:
Post a Comment