ಪುತ್ತೂರು ನಗರ ಪೊಲೀಸರ ಗಾಂಜಾ ದಾಳಿಯಲ್ಲಿ ಸೊತ್ತುಗಳ ಸಹಿತ ಮೂವರ ಸೆರೆ - Karavali Times ಪುತ್ತೂರು ನಗರ ಪೊಲೀಸರ ಗಾಂಜಾ ದಾಳಿಯಲ್ಲಿ ಸೊತ್ತುಗಳ ಸಹಿತ ಮೂವರ ಸೆರೆ - Karavali Times

728x90

23 May 2022

ಪುತ್ತೂರು ನಗರ ಪೊಲೀಸರ ಗಾಂಜಾ ದಾಳಿಯಲ್ಲಿ ಸೊತ್ತುಗಳ ಸಹಿತ ಮೂವರ ಸೆರೆ

ಪುತ್ತೂರು, ಮೇ 23, 2022 (ಕರಾವಳಿ ಟೈಮ್ಸ್) : ಇಲ್ಲಿನ ನಗರ ಠಾಣಾ ಪಿಎಸ್ಸೈ ಶ್ರೀಮತಿ ನಸ್ರೀನ್ ತಾಜ್ ನೇತೃತ್ವದ ಪೊಲೀಸರು ಭಾನುವಾರ ನಡೆಸಿದ ಗಾಂಜಾ ದಾಳಿಯಲ್ಲಿ ಮೂರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. 

ಪುತ್ತೂರು ತಾಲೂಕು ಶಾಂತಿಗೋಡು ಗ್ರಾಮದ ವೀರಮಂಗಲ ರೈಲ್ವೇ ಹಳಿಗಳ ಸಮೀಪ ಮಾದಕ ವಸ್ತು ಮಾರಾಟ ಮಾಡುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದು, ಗಾಂಜಾ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ಆರೋಪಿಗಳಾದ ಕಡಬ ತಾಲೂಕು, ಪೆರಾಬೆ ಗ್ರಾಮದ ಕುಂತೂರು-ಕೋಚಕಟ್ಟೆ ನಿವಾಸಿ ಉಮ್ಮರಬ್ಬ ಅವರ ಪುತ್ರ ಶಫೀಕ್ ಕೆ ವಿ (24) ಹಾಗೂ ಎರ್ಮಲ ನಿವಾಸಿ ಅಬ್ದುಲ್ಲ ಅವರ ಪುತ್ರ ರಾಝಿಕ್ (28) ಅವರನ್ನು ದಸ್ತಗಿರಿ ಮಾಡಿದ್ದಾರೆ.

ಆರೋಪಿಗಳಿಂದ 21,50/- ರೂಪಾಯಿ ಮೌಲ್ಯದ 1.850 ಗ್ರಾಂ ತೂಕದ ಗಾಂಜಾ ಮತ್ತು ಎರಡು ಮೊಬೈಲ್ ಪೆÇೀನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಈ ಬಗ್ಗೆ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 38/2022 ಕಲಂ 8ಬಿ ಆರ್/ಡಬ್ಲ್ಯು 20(ಬಿ) (11), ಬಿ ಎನ್ ಡಿ ಪಿಎಸ್ ಕಾಯಿದೆಯಂತೆ ಪ್ರಕರಣ ದಾಖಲಾಗಿದೆ. 

ಮೇಲಿನ ಪ್ರಕರಣದ ಆರೋಪಿ ಶಫೀಕ್ ಕೆ.ವಿ ಎಂಬಾತನ ವಿಚಾರಣೆ ವೇಳೆ ಆತ ನೀಡಿದ ಮಾಹಿತಿಯಂತೆ ಆತನ ಸ್ನೇಹಿತ ವಿಟ್ಲದ ಕುಂಡಡ್ಕ ಶಾಂತಿಮಾರು ನಿವಾಸಿ ಇಬ್ರಾಹಿಂ ಅವರ ಪುತ್ರ ಮಹಮ್ಮದ್ ಮುವಾಝ್ (30) ಎಂಬಾತನ ಬಳಿ ಹೆಚ್ಚಿನ ಗಾಂಜಾ ಇರುವ ಬಗ್ಗೆ ಖಚಿತಪಡಿಸಿಕೊಂಡು ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಪೇರಮೊಗರು ಎಂಬಲ್ಲಿ ಕಾರನ್ನು ತಡೆದು ಆತನನ್ನು ಬೆನ್ನಟ್ಟಿ ಬಂಧಿಸುವಲ್ಲಿ ಅದೇ ದಿನ ರಾತ್ರಿ ಸಫಲರಾಗಿದ್ದಾರೆ. 

ಈತನ ಕಾರಿನಲ್ಲಿದ್ದ 20 ಸಾವಿರ ರೂಪಾಯಿ ಮೌಲ್ಯದ 2.075 ಕೆ.ಜಿ ಗಾಂಜಾ, 500 ರೂಪಾಯಿ ಮೌಲ್ಯದ ಮಡಚುವ ಒಂದು ಸ್ಟೀಲ್ ಸ್ಟಿಕ್, 500/- ರೂಪಾಯಿ ಮೌಲ್ಯದ ಗಾಂಜಾ ತುಂಬಿದ 50 ಗ್ರಾಂ ತೂಕದ 5 ಪ್ಯಾಕೆಟುಗಳು, 5 ಸಾವಿರ ರೂಪಾಯಿ ಮೌಲ್ಯದ 3 ಮೊಬೈಲ್ ಫೆÇೀನುಗಳು, 200 ರೂಪಾಯಿ ಮೌಲ್ಯದ ಪಿಸ್ತೂಲ್ ಮಾದರಿಯ ಸಿಗಾರ ಲೈಟ್, ಡ್ಯಾಶ್ ಬೋರ್ಡನಲ್ಲಿದ್ದ ಮಾತ್ರೆಗಳು, ಆರೋಪಿಯ ಪ್ಯಾಂಟಿನ ಕಿಸೆಯಲ್ಲಿದ್ದ 50 ಸಾವಿರ ರೂಪಾಯಿ ಮೌಲ್ಯದ ಪಿಸ್ತೂಲ್ ಹಾಗೂ ಎರಡು ಸಜೀವ ಗುಂಡುಗಳು, 330/- ರೂಪಾಯಿ ನಗದು ಹಣ, ಮುಹಮ್ಮದ್ ಮುಹಾದ್ ಎಂಬವರ ಹೆಸರಿನ 2 ಪಾನ್ ಕಾರ್ಡ್‍ಗಳು, ಜಗದೀಶ್ ಪ್ರಸಾದ್ ಎಂಬವರ ಬ್ಯಾಂಕ್ ಆಫ್ ಬರೋಡ ಎಟಿಎಂ ಕಾರ್ಡ್, ಕರ್ನಾಟಕ ಬ್ಯಾಂಕಿನ ಎಟಿಎಂ ಕಾರ್ಡ್, ಹೊಟೇಲ್ ಸಾಯಿ ಸಿದ್ದಾರ್ಥ ಲಾಡ್ಜ್ ನ 10 ವಿಸಿಟಿಂಗ್ ಕಾರ್ಡ್‍ಗಳು, 5 ಲಕ್ಷ ರೂಪಾಯಿ ಮೌಲ್ಯದ ಕೆಎಲ್-13-ಎಪಿ-1609 ನೋಂದಣಿ ಸಂಖ್ಯೆಯ ಪರ್ಪಲ್ ಗ್ರೇ ಬಣ್ಣದ ಹುಂಡೈ ಐ-20 ಕಾರು ಸಹಿತ ಒಟ್ಟು 5,86,530/- ರೂಪಾಯಿ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಈ ಬಗ್ಗೆ ಪುತ್ತೂರು ನಗರ ಪೆÇಲೀಸ್ ಠಾಣೆಯ ಅಪರಾಧ ಕ್ರಮಾಂಕ 39/2022 ಕಲಂ 8(ಸಿ) ಆರ್/ಡಬ್ಲ್ಯು 20(ಬಿ) (11), ಬಿ ಎನ್ ಡಿ ಪಿಎಸ್ ಕಾಯಿದೆ ಮತ್ತು 3 ಜೊತೆಗೆ 25 ಬಾರತೀಯ ಸಶಸ್ತ್ರ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಪುತ್ತೂರು ನಗರ ಪೊಲೀಸರ ಗಾಂಜಾ ದಾಳಿಯಲ್ಲಿ ಸೊತ್ತುಗಳ ಸಹಿತ ಮೂವರ ಸೆರೆ Rating: 5 Reviewed By: karavali Times
Scroll to Top