ಬಿ.ಸಿ.ರೋಡು ಫ್ಲೈ ಓವರ್ ಮೇಲೆ ಭಿತ್ತಿ ಪತ್ರ, ಬ್ಯಾನರ್ ಹಚ್ಚಿದರೆ ದಂಡನೆ ಜೊತೆ ಕಠಿಣ ಕ್ರಮ : ಮುಖ್ಯಾಧಿಕಾರಿ ಎಚ್ಚರಿಕೆ - Karavali Times ಬಿ.ಸಿ.ರೋಡು ಫ್ಲೈ ಓವರ್ ಮೇಲೆ ಭಿತ್ತಿ ಪತ್ರ, ಬ್ಯಾನರ್ ಹಚ್ಚಿದರೆ ದಂಡನೆ ಜೊತೆ ಕಠಿಣ ಕ್ರಮ : ಮುಖ್ಯಾಧಿಕಾರಿ ಎಚ್ಚರಿಕೆ - Karavali Times

728x90

20 June 2022

ಬಿ.ಸಿ.ರೋಡು ಫ್ಲೈ ಓವರ್ ಮೇಲೆ ಭಿತ್ತಿ ಪತ್ರ, ಬ್ಯಾನರ್ ಹಚ್ಚಿದರೆ ದಂಡನೆ ಜೊತೆ ಕಠಿಣ ಕ್ರಮ : ಮುಖ್ಯಾಧಿಕಾರಿ ಎಚ್ಚರಿಕೆ

ಬಂಟ್ವಾಳ, ಜೂನ್ 20, 2022 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಮುಖ್ಯ ಪೇಟೆಯಾಗಿರುವ ಬಿ ಸಿ ರೋಡಿನ ಫ್ಲೈ ಓವರ್ ಪಿಲ್ಲರ್ ಗಳ ಮೇಲೆ ಸಾರ್ವಜನಿಕರು ಭಿತ್ತಿ ಪತ್ರಗಳನ್ನು ಅಂಟಿಸುವುದು, ಫ್ಲೆಕ್ಸ್-ಬ್ಯಾನರ್ ಗಳನ್ನು ಅಳವಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಪುರಸಭಾ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಸೂಚಿಸಿದ್ದಾರೆ. 

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಬಿ ಸಿ ರೋಡಿನ ಫ್ಲೈ ಓವರ್ ಮೇಲೆ ಹಾಗೂ ಕೆಳಗೆ ಅಥವಾ ಪಿಲ್ಲರ್ ಗಳ ಮೇಲೆ ಭಿತ್ತಿ ಪತ್ರ ಅಂಟಿಸುವುದು, ಬ್ಯಾನರ್-ಫ್ಲೆಕ್ಸ್ ಅಳವಡಿಸುವುದು, ಸಾರ್ವಜನಿಕರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆಯಾಗುವ ರೀತಿಯಲ್ಲಿ ಟೆಂಟ್ ಅಳವಡಿಸುವುದು ಇತ್ಯಾದಿ ಕೆಲಸಗಳ ಮೂಲಕ ನಗರವನ್ನು ವಿರೂಪಗೊಳಿಸುತ್ತಿರುವುದು ಪುರಸಭಾ ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳನ್ನು ಪುರಸಭೆ ನಿಷೇಧಿಸಿದೆ. ಸಾರ್ವಜನಿಕರು ನಗರವನ್ನು ಶುಚಿತ್ವದಲ್ಲಿಡುವಂತೆ ಈ ಮೂಲಕ ಸೂಚಿಸಲಾಗಿದೆ. ತಪ್ಪಿದಲ್ಲಿ ಅಂತಹ ವ್ಯಕ್ತಿಗಳ ವಿರುದ್ದ ಪುರಸಭಾ ಸೊತ್ತಿಗೆ ಹಾನಿ ಮಾಡಿದ ಆರೋಪದಲ್ಲಿ ಪುರಸಭಾ ಕಾಯ್ದೆ 1964 ಪ್ರಕರಣ 280 ರಡಿ ದಂಡನೆ ವಿಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಆದೇಶಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಬಿ.ಸಿ.ರೋಡು ಫ್ಲೈ ಓವರ್ ಮೇಲೆ ಭಿತ್ತಿ ಪತ್ರ, ಬ್ಯಾನರ್ ಹಚ್ಚಿದರೆ ದಂಡನೆ ಜೊತೆ ಕಠಿಣ ಕ್ರಮ : ಮುಖ್ಯಾಧಿಕಾರಿ ಎಚ್ಚರಿಕೆ Rating: 5 Reviewed By: karavali Times
Scroll to Top