ಸಾಲೆತ್ತೂರು : ಸಂಘಟನಾ ದ್ವೇಷದಿಂದ ಯುವಕರ ತಂಡದಿಂದ ಬೀದಿಯಲ್ಲಿ ತಲವಾರು ಕಾಳಗ, ವಿಟ್ಲ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲು - Karavali Times ಸಾಲೆತ್ತೂರು : ಸಂಘಟನಾ ದ್ವೇಷದಿಂದ ಯುವಕರ ತಂಡದಿಂದ ಬೀದಿಯಲ್ಲಿ ತಲವಾರು ಕಾಳಗ, ವಿಟ್ಲ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲು - Karavali Times

728x90

20 June 2022

ಸಾಲೆತ್ತೂರು : ಸಂಘಟನಾ ದ್ವೇಷದಿಂದ ಯುವಕರ ತಂಡದಿಂದ ಬೀದಿಯಲ್ಲಿ ತಲವಾರು ಕಾಳಗ, ವಿಟ್ಲ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲು

ಬಂಟ್ವಾಳ, ಜೂನ್ 20, 2022 (ಕರಾವಳಿ ಟೈಮ್ಸ್) : ಸಂಘಟನಾ ದ್ವೇಷದಿಂದ ಎರಡು ತಂಡಗಳ ಮಧ್ಯೆ ಭಾನುವಾರ ಸಾಲೆತ್ತೂರು ಸಮೀಪದ ಅಗರಿ ಎಂಬಲ್ಲಿ ರಸ್ತೆಯಲ್ಲೇ ತಲವಾರು ಕಾಳಗ ನಡೆದಿದ್ದು, ಈ ಬಗ್ಗೆ ಎರಡೂ ತಂಡಗಳಿಂದ ವಿಟ್ಲ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ. 

ಭಾನುವಾರ (ಜೂನ್ 19) ಸಂಜೆ 5.30 ಗಂಟೆ ವೇಳೆಗೆ ಬಂಟ್ವಾಳ ತಾಲೂಕು ಸಾಲೆತ್ತೂರು-ಅಗರಿ ಎಂಬಲ್ಲಿ ಆರೋಪಿಗಳಾದ ಪ್ರಶಾಂತ, ತೇಜಸ್, ಗೀರಿಶ, ಗಣೇಶ್, ಶರತ್, ಧನು, ಮುನ್ನಾ, ಚೇತನ, ವಿನಿತ, ದಿನೇಶ್, ಶಶಿಕುಮಾರ ಹಾಗೂ ಇತರ ಇಬ್ಬರು ಅಕ್ರಮ ಕೂಟ ಸೇರಿಕೊಂಡು ಕೈಯಲ್ಲಿ ಮಾರಕಾಯುಧಗಳನ್ನು ಹಿಡಿದು ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಕರಿಂಬಿನಾಡಿ ನಿವಾಸಿ ಆನಂದ ಬೆಳ್ಚಡ ಅವರ ಪುತ್ರ ಚಂದ್ರಹಾಸ (27) ಅವರನ್ನು ಉದ್ದೇಶಿಸಿ ತುಳು ಭಾಷೆಯಲ್ಲಿ ಆರೋಪಿಗಳ ಪೈಕಿ ಪ್ರಶಾಂತ ಎಂಬವನು “ಈ ಸಂಘಟನೆಡ್ ಭಾರಿ ರಾಪನಾ? ನಿನನ್ ಕೆರಂದೆ ಬುಡಾಯೇ ಎಂದು ಹೇಳಿ ಕೊಲೆ ಮಾಡುವ ಉದ್ದೇಶದಿಂದ ಆತನ ಕೈಯಲ್ಲಿದ್ದ ತಲವಾರಿನಿಂದ ಚಂದ್ರಹಾಸನ ತಲೆಯ ಭಾಗಕ್ಕೆ ಕಡಿದಿದ್ದು, ಆಗ ಆತನೊಂದಿಗಿದ್ದ ಇತರರು ತುಳು ಭಾಷೆಯಲ್ಲಿ “ಚಂದ್ರಹಾಸನ್ ಕೆರ್” ಎಂಬುದಾಗಿ ತುಳು ಬಾಷೆಯಲ್ಲಿ ಹೇಳಿದಾಗ ಆರೋಪಿ ತೇಜಸ್ ಪುನಃ ಆತನ ಕೈಯಲ್ಲಿದ್ದ ತಲವಾರಿನಿಂದ ತಲೆಯ ಭಾಗಕ್ಕೆ ಕಡಿದುದಲ್ಲದೇ ಗಿರೀಶನು ಆತನ ಕೈಯಲ್ಲಿದ್ದ ಚೂರಿಯಿಂದ ಚುಚ್ಚಿದ್ದಾನೆ. ಉಳಿದವರೆಲ್ಲರೂ ಸೇರಿಕೊಂಡು ಚಂದ್ರಹಾಸನಿಗೆ ಕೈಯಿಂದ ಹಾಗೂ ಕಲ್ಲಿನಿಂದ ಹೊಡೆದಿರುತ್ತಾರೆ. ಆ ಸಂದರ್ಭ ನಾಗೇಶನ ಮನೆಯವರು ಬೊಬ್ಬೆ ಹೊಡೆದು ಪೆÇಲೀಸರಿಗೆ ಪೆÇೀನ್ ಮಾಡಿದಾಗ ಆರೋಪಿಗಳೆಲ್ಲರೂ ಚಂದ್ರಹಾಸನನ್ನುದ್ದೇಶಿಸಿ ಇದೇರೀತಿ ಸಂಘಟಣೆಯಲ್ಲಿ ಮೆರೆದರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿ ಬಂದಿದ್ದ ಕಾರು (ನೋಂದಣಿ ಸಂಖ್ಯೆ ಕೆಎ-19 ಎಂಎಚ್3379) ಹಾಗೂ ಮೋಟಾರು ಸೈಕಲ್‍ಗಳಲ್ಲಿ ಪರಾರಿಯಾಗಿರುತ್ತಾರೆ. 

ಚಂದ್ರಹಾಸ ವಿಟ್ಲ ಪ್ರಖಂಡ ಭಜರಂಗದಳ ಸಂಚಾಲಕನಾಗಿದ್ದು, ಈತ ನಂಟು ಹೊಂದಿದ್ದ ಸಂಘಟನೆಯ ದ್ವೇಷದಿಂದಲೇ ಈ ಕೃತ್ಯ ಎಸಗಲಾಗಿದೆ ಎಂದು ಶಂಕಿಸಲಾಗಿದೆ. ತಲವಾರು ಹಲ್ಲೆಯಿಂದ ಗಾಯಗೊಂಡ ಚಂದ್ರಹಾಸನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 101/2022 ಕಲಂ  143, 147, 148, 323, 324, 307, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. 

ಇದೇ ಘಟನೆಗೆ ಸಂಬಂಧಿಸಿದಂತೆ ಮಂಗಳೂರು ತಾಲೂಕು, ಇಡ್ಯಾ ಗ್ರಾಮದ ಸುರತ್ಕಲ್ ಸಮೀಪದ ಕೃಷ್ಣಾಪುರ ನಿವಾಸಿ ಕೃಷ್ಣ ಭಂಡಾರಿ ಅವರ ಪುತ್ರ ಪ್ರಶಾಂತ ಅಲಿಯಾಸ್ @ ಪಚ್ಚು (30) ಎಂಬಾತನ ವಿಟ್ಲ ಠಾಣೆಗೆ ಪ್ರತಿ ದೂರು ನೀಡಿದ್ದು, ಪ್ರಶಾಂತ್ ಅವರು ತಮ್ಮ ಹುಡುಗರ ಮದ್ಯೆ ಇದ್ದ ವೈಮನಸ್ಸಿನ ಬಗ್ಗೆ ಮಾತನಾಡಲು ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ನಾಗೇಶ್ ಅವರ ಮನೆಯ ಬಳಿಗೆ ಭಾನುವಾರ ಸಂಜೆ ಬಂದು ನಾಗೇಶ್, ಚಂದ್ರಹಾಸ, ದೇವದಾಸರವರೊಂದಿಗೆ ಮಾತನಾಡುತ್ತಿರುವಾಗ ಮಾತಿಗೆ ಮಾತು ಬೆಳೆದ ಸಂದರ್ಭ ದೇವದಾಸ ಎಂಬಾತ ಹಿಂದಿನಿಂದ ಬಿಗಿಯಾಗಿ ಹಿಡಿದುಕೊಂಡ ಸಮಯ ನಾಗೇಶನು ಪ್ರಶಾಂತನನ್ನು ಕೊಲೆ ಮಾಡು ಎಂದು ಚಂದ್ರಹಾಸನಿಗೆ ಚಾಕು ಕೊಟ್ಟಿದ್ದು, ಚಂದ್ರಹಾಸನು ಅದೇ ಚಾಕುವಿನಿಂದ ಪ್ರಶಾಂತನ ಹೊಟ್ಟೆಯ ಭಾಗಕ್ಕೆ ಮತ್ತು ಕುತ್ತಿಗೆಗೆ ಚುಚ್ಚಿರುತ್ತಾನೆ, ಆ ಸಮಯ ಯಾರೋ ಮತ್ತೊಬ್ಬ ಚಾಕುವಿನಿಂದ ಪ್ರಶಾಂತನ  ಬೆನ್ನಿಗೆ ಚುಚ್ಚಿರುತ್ತಾನೆ, ಉಳಿದ ಇಬ್ಬರು ಕೈಯಿಂದ ಹೊಡೆದು ದೂಡಿ ಹಾಕಿ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಹೊರಟು ಹೋಗಿರುತ್ತಾರೆ. ಈ ಕೃತ್ಯಕ್ಕೆ ಯಾವುದೋ ದ್ವೇಷವೇ ಕಾರಣವಾಗಿರುತ್ತದೆ ಎಂದು ಪ್ರಶಾಂತ್ ಪೊಲೀಸರಿಗೆ ದೂರು ನೀಡಿದ್ದು, ಹಲ್ಲೆಯಿಂದ ಗಾಯಗೊಂಡ ಪ್ರಶಾಂತನನ್ನು ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಕೆಎಂಸಿ ಆಸ್ಪತ್ರೆಗೆ ಸಾಗಿಸಲಾಗಿ ಚಿಕಿತ್ಸೆ ನೀಡಲಾಗುತ್ತಿದೆ. 

ಈ ಬಗ್ಗೆ ವಿಟ್ಲ ಠಾಣಾ ಅಪರಾಧ ಕ್ರಮಾಂಕ 102/2022 ಕಲಂ 143, 144, 147, 148, 323, 307, 506 ಜೊತೆಗೆ 149 ಐಪಿಯಂತೆ ಪ್ರಕರಣ ದಾಖಲಾಗಿದೆ. 

ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ವಿಟ್ಲ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಂತೆ ಓರ್ವನನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಸಾಲೆತ್ತೂರು : ಸಂಘಟನಾ ದ್ವೇಷದಿಂದ ಯುವಕರ ತಂಡದಿಂದ ಬೀದಿಯಲ್ಲಿ ತಲವಾರು ಕಾಳಗ, ವಿಟ್ಲ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲು Rating: 5 Reviewed By: karavali Times
Scroll to Top