ಬಂಟ್ವಾಳ, ಜೂನ್ 16, 2022 (ಕರಾವಳಿ ಟೈಮ್ಸ್) : ಕಳೆದ ಹಲವು ಸಮಯಗಳಿಂದ ವಿಟ್ಲ ಪೇಟೆಯಲ್ಲಿ ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿ ಅಶೋಕ್ ಭಟ್ ಅವರನ್ನು ವೆಲೆಂಟೈನ್ ವಿಲ್‍ಫ್ರೆಡ್ ಪಿಂಟೋ ಎಂಬವರು ಉಪಚರಿಸಿ ಹೃದಯ ವೈಶಾಲ್ಯತೆ ತೋರಿದ್ದಾರೆ.
ಅಶೋಕ್ ಭಟ್ ಅವರನ್ನು ಸ್ನಾನ ಮಾಡಿಸಿ, ತಲೆ ಕೂದಲು, ಗಡ್ಡ ಎಲ್ಲವನ್ನೂ ತೆಗೆಸಿ ಶುಚಿತ್ವಗೊಳಿಸಿ ಆಹಾರ ಒದಗಿಸಿಕೊಟ್ಟು ಉಪಚರಿಸಿರುವ ವೆಲೆಂಟೈನ್ ಶೇವಿಂಗ್, ಹೇರ್ ಕಟ್ಟಿಂಗ್ ಮಾಡಿಸಿ ಊಟೋಪಾಚಾರ ಮಾಡಿಸಿದ್ದಾರೆ. ವೆಲೆಂಟೈನ್ ಮಾನವೀಯ ಹೃದಯಕ್ಕೆ ಸಾರ್ವಜನಿಕ ವಲಯದಿಂದ ಶ್ಲಾಘನೆ ಹಾಗೂ ಮೆಚ್ಚುಗೆ ವ್ಯಕ್ತವಾಗಿದೆ.
0 comments:
Post a Comment