ಬಂಟ್ವಾಳ, ಜೂನ್ 08, 2022 (ಕರಾವಳಿ ಟೈಮ್ಸ್) : ಮಕ್ಕಳನ್ನು ತಮ್ಮ ನಿಯಂತ್ರಣದಲ್ಲಿಡುವ ಸಮಯದಲ್ಲಿ ನಿಯಂತ್ರಿಸಿ, ಶಿಕ್ಷಣ ನೀಡುವ ಸಮಯದಲ್ಲಿ ಸಮರ್ಪಕವಾದ ಶಿಕ್ಷಣ ನೀಡಿ ಅವರನ್ನು ಮಾನಸಿಕವಾಗಿಯೂ, ದೈಹಿಕವಾಗಿಯೂ ಹಾಗೂ ಸಾಮಾಜಿಕವಾಗಿಯೂ ಸಮಾಜಕ್ಕೆ ಪೂರಕವಾಗಿ ಬೆಳೆಸದೆ ಇದ್ದಲ್ಲಿ ಪೋಷಕರೇ ಮಕ್ಕಳ ಮೊದಲ ಶತ್ರುಗಳಾಗಿ ಪರಿಗಣಿಸಲ್ಪಡುತ್ತಾರೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಅಭಿಪ್ರಾಯಪಟ್ಟರು.
ರಮಾನಾಥ ರೈ ಅಭಿಮಾನಿ ಬಳಗ ಮಲ್ಲೇಶ್ವರಂ-ಬೆಂಗಳೂರು ಇದರ ಆಶ್ರಯದಲ್ಲಿ ಬೋಳಂತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ (ಜೂನ್ 8) ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ಪುಸ್ತಕ ಹಾಗೂ ವಿದ್ಯಾರ್ಥಿಗಳ ಐಡಿ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಿ ಪಂ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ತಾ ಪಂ ಮಾಜಿ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಆಲಿ, ಮಾಣಿ ಗ್ರಾ ಪಂ ಸದಸ್ಯ ಸುದೀಪ್ ಶೆಟ್ಟಿ, ಪ್ರಮುಖರಾದ ಯಾಕೂಬ್ ದಂಡೆಮಾರ್, ಇಸ್ಮಾಯಿಲ್ ಕೊಕ್ಕಪುಣಿ, ಚಂದ್ರಹಾಸ ರೈ, ಮೊಹಮ್ಮದ್ ಬಶೀರ್ ನಾರಂಕೋಡಿ, ಶಾಲಾ ಮುಖ್ಯ ಶಿಕ್ಷಕಿ ಗೀತಾ, ಸಹ ಶಿಕ್ಷಕಿಯರಾದ ಸಂಧ್ಯಾ, ಮಹಾಲಕ್ಷ್ಮಿ, ರಮಾನಾಥ ರೈ ಅಭಿಮಾನಿ ಬಳಗ ಮಲ್ಲೇಶ್ವರಂ-ಬೆಂಗಳೂರು ಇದರ ಅಧ್ಯಕ್ಷ ಹಮೀದ್, ಕಾರ್ಯದರ್ಶಿ ಮೊಹಮ್ಮದ್ ಬಶೀರ್, ಪದಾಧಿಕಾರಿಗಳಾದ ಸಲೀಂ, ಸಮೀರ್, ನಿಸಾರ್ ಬೋಳಿಯಾರ್, ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರು, ಶಾಲಾ ವಿದ್ಯಾರ್ಥಿಗಳು ಹಾಗೂ ಪೆÇೀಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ವೇಳೆ ಮಾಜಿ ಸಚಿವ ಬಿ ರಮಾನಾಥ ರೈ ಹಾಗೂ ಬೋಳಂತೂರು ಶಾಲೆಯಲ್ಲಿ ಕಳೆದ 19 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ದೈಹಿಕ ಶಿಕ್ಷಕ ಹರೀಶ್ ಮಾಸ್ಟರ್ ಅವರನ್ನು ಗೌರವಿಸಲಾಯಿತು. ಮಹಮ್ಮದ್ ಮುಸ್ತಫಾ ಸ್ವಾಗತಿಸಿ, ಅಬ್ದುಲ್ ಹಮೀದ್ ಗೋಳ್ತಮಜಲು ವಂದಿಸಿದರು.
0 comments:
Post a Comment