ಪುತ್ತೂರು, ಜೂನ್ 16, 2022 (ಕರಾವಳಿ ಟೈಮ್ಸ್) : ತಾಲೂಕಿನ ದರ್ಬೆಯ ಹಿತ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ಆವರಣದಲ್ಲಿದ್ದ ಜನರೇಟರ್ ಬ್ಯಾಟರಿಯನ್ನು ಹಾಡಹಗಲೇ ಅಟೋ ರಿಕ್ಷಾದಲ್ಲಿ ಬಂದ ಅಪರಿಚಿತರು ಕಳವುಗೈದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಈ ಬಗ್ಗೆ ಆಸ್ಪತ್ರೆಯ ಆಡಳಿತ ಪಾಲುದಾರ ಡಾ ಅಜಿತ್ ಕೆ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆಸ್ಪತ್ರೆಯ ಉಪಯೋಗಕ್ಕೋಸ್ಕರ ಆಸ್ಪತ್ರೆಯ ಹೊರಗಿನ ಆವರಣದಲ್ಲಿ ಜನರೇಟರ್ ಅಳವಡಿಸಿದ್ದು, ಬುಧವಾರ ಮಧ್ಯಾಹ್ನ ಸುಮಾರು 20.30ರವೇಳೆಗೆ ಆಸ್ಪತ್ರೆಯಲ್ಲಿ ಕರೆಂಟ್ ಹೋದ ಸಮಯ ಜನರೇಟರ್ ಆನ್ ಆಗದೇ ಇದ್ದಾಗ ಹೋಗಿ ಪರಿಶೀಲಿಸಿದಾಗ ಜನರೇಟರ್‍ಗೆ ಅಳವಡಿಸಲಾಗಿದ್ದ ಬ್ಯಾಟರಿ ಕಳವಾಗಿರುವುದು ಗಮನಕ್ಕೆ ಬಂದಿದೆ. ಈ ಸಂದರ್ಭ ಆಸ್ಪತ್ರೆಯ ಆವರಣದ ಸಿ ಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಮಂಗಳವಾರ ಮಧ್ಯಾಹ್ನ ಸುಮಾರು 2.30 ರ ವೇಳೆಗೆ ಯಾರೋ ಕಳ್ಳರು ಜನರೇಟ್ ಬ್ಯಾಟರಿಯನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡುಬಂದಿದೆ. ಕಳವಾಗಿರುವ ಬ್ಯಾಟರಿಯ ಮೌಲ್ಯ ಸುಮಾರು 8 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಪುತ್ತೂರು ನಗರ ಠಾಣಾ ಅಪರಾಧ ಕ್ರಮಾಂಕ 46/2022 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.
0 comments:
Post a Comment