ಬೆಳ್ತಂಗಡಿ : ಮಾನಸಿಕ ಅಸ್ವಸ್ಥ ಪತ್ನಿಯಿಂದ ಪತಿಯ ತಲೆಗೆ ಕಡಿದು ಕೊಲೆ - Karavali Times ಬೆಳ್ತಂಗಡಿ : ಮಾನಸಿಕ ಅಸ್ವಸ್ಥ ಪತ್ನಿಯಿಂದ ಪತಿಯ ತಲೆಗೆ ಕಡಿದು ಕೊಲೆ - Karavali Times

728x90

5 July 2022

ಬೆಳ್ತಂಗಡಿ : ಮಾನಸಿಕ ಅಸ್ವಸ್ಥ ಪತ್ನಿಯಿಂದ ಪತಿಯ ತಲೆಗೆ ಕಡಿದು ಕೊಲೆ

ಬೆಳ್ತಂಗಡಿ, ಜುಲೈ 05, 2022 (ಕರಾವಳಿ ಟೈಮ್ಸ್) : ತಾಲೂಕಿನ ನಾವೂರು ಗ್ರಾಮದ ಅಬ್ಬನ್ ಕೆರೆ ನಿವಾಸಿ ಯೋಹನಾನ್ ಅಲಿಯಾಸ್ ಬೇಬಿ ಅವರನ್ನು ಮಂಗಳವಾರ (ಜುಲೈ 5) ಬೆಳಿಗ್ಗೆ ಮಲಗಿದ್ದ ವೇಳೆ ಅವರ ಪತ್ನಿ ಮಾನಸಿಕ ಅಸ್ವಸ್ಥೆ ಎಲಿಯಮ್ಮ ಅವರು ತಲೆಗೆ ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ನಡೆದಿದೆ. 

ಯೋಹನಾನ್ @ ಬೇಬಿ ಅವರ ಹೆಂಡತಿ ಎಲಿಯಮ್ಮರವರು ಸುಮಾರು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಮಂಗಳೂರಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಮಂಗಳವಾರ ಬೆಳಿಗ್ಗೆ 5.30 ಗಂಟೆ ಸಮಯಕ್ಕೆ ಮನೆಯ ಕೋಣೆಯ ಒಳಗೆ ಮಂಚದಲ್ಲಿ ಮಲಗಿದ್ದ ಗಂಡ ಯೋಹನಾನ್ @ ಬೇಬಿ ಅವರ ತಲೆಯ ಭಾಗಕ್ಕೆ ಕತ್ತಿಯಿಂದ ಕಡಿದು ಕೊಲೆ ಮಾಡಿರುವುದಾಗಿದೆ. 

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 44/2022 ಕಲಂ 302 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬೆಳ್ತಂಗಡಿ : ಮಾನಸಿಕ ಅಸ್ವಸ್ಥ ಪತ್ನಿಯಿಂದ ಪತಿಯ ತಲೆಗೆ ಕಡಿದು ಕೊಲೆ Rating: 5 Reviewed By: karavali Times
Scroll to Top