ಸಿಇಟಿ ಫಲಿತಾಂಶ ಪ್ರಕಟ : ಇಂಜಿನಿಯರಿಂಗ್ ನಲ್ಲಿ ಅಪೂರ್ವ ಟಂಡನ್ ಗೆ ಪ್ರಥಮ ರ್ಯಾಂಕ್ - Karavali Times ಸಿಇಟಿ ಫಲಿತಾಂಶ ಪ್ರಕಟ : ಇಂಜಿನಿಯರಿಂಗ್ ನಲ್ಲಿ ಅಪೂರ್ವ ಟಂಡನ್ ಗೆ ಪ್ರಥಮ ರ್ಯಾಂಕ್ - Karavali Times

728x90

30 July 2022

ಸಿಇಟಿ ಫಲಿತಾಂಶ ಪ್ರಕಟ : ಇಂಜಿನಿಯರಿಂಗ್ ನಲ್ಲಿ ಅಪೂರ್ವ ಟಂಡನ್ ಗೆ ಪ್ರಥಮ ರ್ಯಾಂಕ್

ಬೆಂಗಳೂರು, ಜುಲೈ 30, 2022 (ಕರಾವಳಿ ಟೈಮ್ಸ್) : ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ-2022) ಫಲಿತಾಂಶ ಜುಲೈ 30 ರ ಶನಿವಾರ ಪ್ರಕಟಗೊಂಡಿದ್ದು, ಉನ್ನತ ಶಿಕ್ಷಣ ಸಚಿವ ಡಾ ಅಶ್ವತ್ಥ ನಾರಾಯಣ ಅವರು ಬೆಂಗಳೂರಿನ ಕೆಇಎ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು.

ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಮಾರತಹಳ್ಳಿಯ ನ್ಯಾಶನಲ್ ಪಬ್ಲಿಕ್ ಶಾಲೆಯ ಅಪೂರ್ವ ಟಂಡನ್ ಮೊದಲಿಗರಾಗಿದ್ದಾರೆ. ಈ ಬಾರಿ 1,71,656 ಅಭ್ಯರ್ಥಿಗಳು ಇಂಜಿನಿಯರಿಂಗ್ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ. ಈ ಬಾರಿ 7 ಅಂಕ ಗ್ರೇಸ್ ನೀಡಲಾಗಿದೆ. ಗಣಿತಕ್ಕೆ 5, ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರಕ್ಕೆ ತಲಾ 1 ಗ್ರೇಸ್ ಅಂಕ ನೀಡಲಾಗಿದೆ. ಆಗಸ್ಟ್ 5 ರಿಂದ ದಾಖಲಾತಿ ಪರಿಶೀಲನೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಸಂಪೂರ್ಣ ಆನ್ ಲೈನ್ ಮೂಲಕ ಪ್ರಕ್ರಿಯೆ ನಡೆಯಲಿದೆ. ಈ ವರ್ಷ ಸುಮಾರು 1.08 ಲಕ್ಷ ಸೀಟುಗಳು ಎಂಜಿನಿಯರಿಂಗ್ ನಲ್ಲಿ ಲಭ್ಯವಿದ್ದು, 57 ಸಾವಿರಕ್ಕೂ ಹೆಚ್ಚು ಸೀಟು ಸರಕಾರದ ಕೋಟಾಗೆ ಸಿಗಲಿವೆ ಎಂದು ಸಚಿವ ಅಶ್ವಥ್ ನಾರಾಯಣ ತಿಳಿಸಿದರು.

ಒಟ್ಟು 83 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, 88 ಸಾವಿರಕ್ಕೂ ಅಧಿಕ ವಿದ್ಯಾರ್ಥಿನಿಯರು ಈ ಭಾರಿ ಸಿಇಟಿ ಫಲಿತಾಂಶದಲ್ಲಿ ತೇರ್ಗಡೆ ಹೊಂದಿದ್ದಾರೆ. ಇಂಜಿನಿಯರಿಂಗ್ ಕೋರ್ಸ್‍ಗೆ 1,71,656 ರ್ಯಾಂಕ್, ಕೃಷಿ ಕೋರ್ಸಿಗೆ 1,39,968 ರ್ಯಾಂಕ್, ಪಶುಸಂಗೋಪನೆ 1,42,2820, ಯೋಗ ಮತ್ತು ನ್ಯಾಚುರೋಪತಿ 1,42,750 ರ್ಯಾಂಕ್, ಬಿ.ಫಾರ್ಮ್ ಕೋರ್ಸ್ ಮತ್ತು ಫಾರ್ಮ-ಡಿ ಕೋರ್ಸಿಗೆ 1,74,568 ರ್ಯಾಂಕ್ ಬಂದಿದೆ. 

ಮಾರತ್ತಹಳ್ಳಿ ಶ್ರೀ ಚೈತನ್ಯ ಟೆಕ್ನೊ ಸ್ಕೂಲ್  ವಿದ್ಯಾರ್ಥಿ  ಸಿದ್ದಾರ್ಥ ಸಿಂಗ್ ಇಂಜಿನಿಯರಿಂಗ್ ನಲ್ಲಿ 96%  ಅಂಕ ಪಡೆದು ದ್ವಿತೀಯ ರ್ಯಾಂಕ್ ಪಡೆದಿದ್ದಾರೆ. ಅತ್ಮಕುರಿ ವೆಂಕಟ ತೃತೀಯ ರ್ಯಾಂಕ್ ಪಡೆದುಕೊಂಡಿದ್ದಾರೆ.

ನ್ಯಾಚುರೋಪರಿ ಮತ್ತು ಯೋಗ ವಿಭಾಗದಲ್ಲಿ ನ್ಯಾಷನಲ್ ಸೆಂಟರ್ ಫಾರ್ ಎಕ್ಸ್ಲೆನ್ಸ್ ಸಂಸ್ಥೆಯ ಹೃಷಿಕೇಶ್ 98% ಅಂಕ ಪಡೆದು ಪ್ರಥಮ ರ್ಯಾಂಕ್ ಪಡೆದರೆ, ಉಡುಪಿಯ ಮಾದವ ಕೃಪ ಇಂಗ್ಲೀಷ್ ಸ್ಕೂಲ್ ವಿದ್ಯಾರ್ಥಿ ವ್ರಜೇಶ್ 96% ಅಂಕ ಪಡೆದು ದ್ವಿತೀಯ ರ್ಯಾಂಕ್ ಪಡೆದಿದ್ದಾರೆ. ಶ್ರೀ ಚೈತನ್ಯ ಟೆಕ್ನೊ ಸ್ಕೂಲ್ ವಿದ್ಯಾರ್ಥಿ ಕೃಷ್ಣ 96% ಅಂಕ ಪಡೆದು ತೃತೀಯ ರ್ಯಾಂಕ್ ಪಡೆದುಕೊಂಡಿದ್ದಾರೆ.

ಬಿ.ಎಸ್.ಸಿ. ಅಗ್ರಿಕಲ್ಚರ್ ವಿಭಾಗದಲ್ಲಿ ಹಾಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿ ಅರ್ಜುನ್ 93% ಅಂಕ, ಶ್ರೀ ಚೈತನ್ಯ ಟೆಕ್ನೊ ಸ್ಕೂಲ್, ಉಲ್ಲಾಳ ಇಲ್ಲಿನ ವಿದ್ಯಾರ್ಥಿ ಸುಮೀತ್ 92% ಅಂಕ, ತುಮಕೂರು ವಿದ್ಯಾನಿಕೇತನ ಪಿಯು ಕಾಲೇಜ್ ವಿದ್ಯಾರ್ಥಿ ಸುದೀಪ್ 92% ಅಂಕ ಪಡೆದಿದ್ದಾರೆ. 

ಬಿ.ವಿ.ಎಸ್ಸಿ ವೆಟರ್ನರಿ ಸೈನ್ಸ್ ವಿಭಾಗದಲ್ಲಿ ನ್ಯಾಷನಲ್ ಸೆಂಟರ್ ಫಾರ್ ಎಕ್ಸ್ಲೆನ್ಸ್, ಬೆಂಗಳೂರು ಇಲ್ಲಿನ ವಿದ್ಯಾರ್ಥಿ ಹೃಷಿಕೇಶ್ 98% ಅಂಕ ಪಡೆದು ಪ್ರಥಮ ರ್ಯಾಂಕ್ ಪಡೆದಿದ್ದು, ಶ್ರೀ ಚೈತನ್ಯ ಟೆಕ್ನೊ ಸ್ಕೂಲ್, ಕೆ.ಆರ್. ಪುರ ಇಲ್ಲಿನ ವಿದ್ಯಾರ್ಥಿ ಮನೀಶ್, 97% ಅಂಕ ಪಡೆದು ದ್ವಿತೀಯ ರ್ಯಾಂಕ್, ಶುಭಾ ಕೌಶಿಕ್ ಅವರು 96% ಅಂಕ ಪಡೆದು ತೃತೀಯ ರ್ಯಾಂಕ್ ಸಂಪಾದಿಸಿದ್ದಾರೆ. ಸೆಪ್ಟೆಂಬರ್ 1 ರಿಂದ ದಾಖಲೆಗಳ ಪರಿಶೀಲನೆ ಪ್ರಕ್ರಿಯೆ ಆರಂಭವಾಗಲಿದೆ.


  • Blogger Comments
  • Facebook Comments

0 comments:

Post a Comment

Item Reviewed: ಸಿಇಟಿ ಫಲಿತಾಂಶ ಪ್ರಕಟ : ಇಂಜಿನಿಯರಿಂಗ್ ನಲ್ಲಿ ಅಪೂರ್ವ ಟಂಡನ್ ಗೆ ಪ್ರಥಮ ರ್ಯಾಂಕ್ Rating: 5 Reviewed By: karavali Times
Scroll to Top