ಮಕ್ಕಳಿಗೆ ಬಾಲ್ಯದಲ್ಲಿಯೇ ಓದುವ, ಬರೆಯುವ ಹವ್ಯಾಸ ಮೂಡಿಸಿ : ನಿವೃತ್ತ ಶಿಕ್ಷಕ ಹೆಬ್ಬಾರ್ ಕರೆ - Karavali Times ಮಕ್ಕಳಿಗೆ ಬಾಲ್ಯದಲ್ಲಿಯೇ ಓದುವ, ಬರೆಯುವ ಹವ್ಯಾಸ ಮೂಡಿಸಿ : ನಿವೃತ್ತ ಶಿಕ್ಷಕ ಹೆಬ್ಬಾರ್ ಕರೆ - Karavali Times

728x90

16 July 2022

ಮಕ್ಕಳಿಗೆ ಬಾಲ್ಯದಲ್ಲಿಯೇ ಓದುವ, ಬರೆಯುವ ಹವ್ಯಾಸ ಮೂಡಿಸಿ : ನಿವೃತ್ತ ಶಿಕ್ಷಕ ಹೆಬ್ಬಾರ್ ಕರೆ

ಬಂಟ್ವಾಳ, ಜುಲೈ 16, 2022 (ಕರಾವಳಿ ಟೈಮ್ಸ್) : ಮೈಯಲ್ಲಿ ಹರಕು ಬಟ್ಟೆ ಇದ್ದರೂ ಚಿಂತೆಯಿಲ್ಲ, ಆದರೆ ಕೈಯಲ್ಲೊಂದು ಪುಸ್ತಕ ಇರಲಿ ಎಂಬ ಬಂಕಿಮಚಂದ್ರ ಚಟರ್ಜಿ ಅವರ ಮಾತಿನಂತೆ ಬಾಲ್ಯದಲ್ಲಿಯೇ ಮಕ್ಕಳಿಗೆ ಪುಸ್ತಕ ಓದುವ ಹಾಗೂ ಬರೆಯುವ ಹವ್ಯಾಸವನ್ನು ಮೂಡಿಸಬೇಕು ಎಂದು ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಹೆಬ್ಬಾರ್ ಹೇಳಿದರು.

ನಲ್ಕೆಮಾರ್ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಮಕ್ಕಳೇ ಬರೆದ ಅಭ್ಯುದಯ ವಿಶೇಷಾಂಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿಜಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಬಿ ಸಿ ರೋಡು ಸಿಟಿ ಅಧ್ಯಕ್ಷ ಸತೀಶ್ ಕುಮಾರ್ ಭಾಗವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿ ಸದಸ್ಯ ಜಯರಾಮ್ ಶಾಲಾ ಮಕ್ಕಳಿಗೆ ಐಡ್ ಕಾರ್ಡ್ ವಿತರಿಸಿದರು. ಶಾಲಾಭಿವೃದ್ಧಿ ಸಮಿತಿ ಸದಸ್ಯ ಯಾದವ ಅಗ್ರಬೈಲು  ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಪ್ರಜ್ಞಾ, ಶರಣ್ಯ, ವೈಷ್ಣವಿ, ರತನ್, ಭವಿಷ್ ಪ್ರಾರ್ಥನೆ ಗೀತೆ ಹಾಡಿದರು. ಮುಖ್ಯ ಶಿಕ್ಷಕಿ ಜ್ಯೋತಿ ಸ್ವಾಗತಿಸಿದರು. ಶಿಕ್ಷಕಿಯರಾದ ಮೋಹಿನಿ ವಂದಿಸಿ, ರೇಖಾ ಬಿ ಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಯರಾದ ಶಶಿಕಲಾ, ಮಮತಾ, ಸೌಮ್ಯ, ಅಕ್ಷತಾ, ಜಗನ್ನಾಥ ಸಹಕರಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಮಕ್ಕಳಿಗೆ ಬಾಲ್ಯದಲ್ಲಿಯೇ ಓದುವ, ಬರೆಯುವ ಹವ್ಯಾಸ ಮೂಡಿಸಿ : ನಿವೃತ್ತ ಶಿಕ್ಷಕ ಹೆಬ್ಬಾರ್ ಕರೆ Rating: 5 Reviewed By: karavali Times
Scroll to Top