ಪುತ್ತೂರು, ಜುಲೈ 11, 2022 (ಕರಾವಳಿ ಟೈಮ್ಸ್) :ಇಲ್ಲಿನ ನಗರ ಠಾಣಾ ವ್ಯಾಪ್ತಿಯ ದರ್ಭೆಯ ಹಿತ ಆಸ್ಪತ್ರೆ ಹಾಗೂ ಪುತ್ತೂರು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿಯ ಶ್ರೀ ಸಾಯಿ ಲಾಡ್ಜ್ ಇಲ್ಲಿನ ಜನರೇಟರ್ ಬ್ಯಾಟರಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆರೋಪಿ ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಇಟ್ಟಿ ಪನ್ನಿಕರ್ ಬಿನ್ ಮ್ಯಾಥ್ಯು ಪನ್ನಿಕರ್ ಎಂಬಾತನನ್ನು ಪುತ್ತೂರು ನಗರ ಠಾಣೆ ಪಿ.ಎಸ್.ಐ. ನೇತೃತ್ವದ ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿಯನ್ನು ವಶಪಡಿಸಿಕೊಂಡ ಸೊತ್ತುಗಳ ಸಹಿತ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪುತ್ತೂರು ನಗರ ಠಾಣೆಯಲ್ಲಿ ದಾಖಲಾದ ಅಪರಾಧ ಕ್ರಮಾಂಕ 46/2022 U/S 379 IPC ಮತ್ತು 58/2022 U/S 379 IPC ರಂತೆ ಕಾರ್ಯಪ್ರವೃತ್ತರಾಗಿದ್ದ ಪೊಲೀಸರು ಆರೋಪಿಯನ್ನು ಕಳವಾಗಿರುವ ಬ್ಯಾಟರಿ ಸಹಿತ ಬಂಧಿಸಿದ್ದಾರೆ.
ಪತ್ತೆ ಕಾರ್ಯದಲ್ಲಿ ಪುತ್ತೂರು ಪೊಲೀಸ್ ಉಪಾಧೀಕ್ಷಕರವರ ನಿರ್ದೆಶನದಂತೆ ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ರಾಜೇಶ್ ಕೆ.ವಿ. ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಚ್.ಸಿ. ಸ್ಕರಿಯಾ, ಜಗದೀಶ್, ಸುಬ್ರಮಣ್ಯ, ಪಿ.ಸಿ. ಕಿರಣ್ ಕುಮಾರ್ ಭಾಗವಹಿಸಿರುತ್ತಾರೆ.
0 comments:
Post a Comment