ಬಂಟ್ವಾಳ, ಆಗಸ್ಟ್ 31, 2022 (ಕರಾವಳಿ ಟೈಮ್ಸ್) : ಮಾಜಿ ಸಚಿವ ಬಿ ರಮಾನಾಥ ರೈ ಅವರ ಗೌರವಾಧ್ಯಕ್ಷತೆಯಲ್ಲಿ ಹಾಗೂ ಜಿ ಪಂ ಮಾಜಿ ಸದಸ್ಯ ಬಿ ಪದ್ಮಶೇಖರ್ ಜೈನ್ ಅವರ ಅದ್ಯಕ್ಷತೆಯಲ್ಲಿ ನಡೆಯುವ ಜಕ್ರಿಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಬುಧವಾರ ಅದ್ದೂರಿ ಚಾಲನೆ ನೀಡಲಾಯಿತು.
ಬೆಳಿಗ್ಗೆ ಮೆರವಣಿಗೆ ಮೂಲಕ ಶ್ರೀ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದ್ದು, ಬಳಿಕ ವಿವಿಧ ವೈದಿಕ ಹಾಗೂ ಸಭಾ ಕಾರ್ಯಕ್ರಮಗಳೊಂದಿಗೆ ಐದು ದಿನಗಳ ವಿಜೃಂಭಣೆಯ ಬಂಟ್ವಾಳ ಗಣೇಶೋತ್ಸವ ಆರಂಭಗೊಂಡಿದೆ. ಮುಂದಿನ ಐದು ದಿನಗಳ ಕಾಲ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಸೆಪ್ಟೆಂಬರ್ 4 ರಂದು ವಿಜೃಂಭಣೆಯ ಶೋಭಾಯಾತ್ರೆಯೊಂದಿಗೆ ಸಂಪನ್ನಗೊಳ್ಳಲಿದೆ.
ಜಕ್ರಿಬೆಟ್ಟು ಗಣೇಶೋತ್ಸವ ಕಳೆದ 18 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದ್ದು, ಈ ಬಾರಿ 19ನೇ ಗಣೇಶೋತ್ಸವ ಸಂಭ್ರಮದಿಂದ ಆರಂಭಗೊಂಡಿದೆ. ಯಾವುದೇ ಜಾತಿ, ಧರ್ಮ, ಭಾಷೆ, ವರ್ಗಗಳ ಬೇಧ ಭಾವ ಇಲ್ಲದೆ ಎಲ್ಲ ವರ್ಗದ ಜನರನ್ನು ಪ್ರೀತಿಯಿಂದ ಆಹ್ವಾನಿಸಿ ಬಾಲಗಂಗಾಧರ ತಿಲಕ್ ಅವರ ಆಶಯದಂತೆ ಸಮಾಜದಲ್ಲಿ ಸೌಹಾರ್ದತೆ ಹಾಗೂ ಒಗ್ಗಟ್ಟನ್ನು ಉಂಟುಮಾಡುವ ನಾಡಿಗೆ ಮಾದರಿಯಾಗುವ ನಿಟ್ಟಿನಲ್ಲಿ ಜಕ್ರಿಬೆಟ್ಟು ಗಣೇಶೋತ್ಸವ ಅಥವಾ ಬಂಟ್ವಾಳ ಗಣೇಶೋತ್ಸವ ಸಾಗಿ ಬರುತ್ತಿದೆ.
ಕೊರೋನಾ ವೈರಸ್ ಹಾಗೂ ಲಾಕ್ ಡೌನ್ ಕಾರಣದಿಂದ ಕಳೆದೆರಡು ವರ್ಷಗಳಿಂದ ಸರಳ ರೀತಿಯಲ್ಲಿ ಗಣೇಶೋತ್ಸವ ಆಚರಿಸಲಾಗಿದ್ದು, ಈ ಬಾರಿ ಮತ್ತೆ ವೈಭವ ಪಡೆದುಕೊಂಡು ನಡೆಯುತ್ತಿದೆ.
ಬಂಟ್ವಾಳ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಅನ್ನಪ್ರಸಾದ ಮುಖ್ಯವಾದ ಕಾರ್ಯಕ್ರಮವಾಗಿದ್ದು, ಬೆಳಿಗ್ಗಿನ ಉಪಾಹಾರದಿಂದ ಹಿಡಿದು ರಾತ್ರಿವರೆಗೆ ಅನ್ನದಾನ ನಿರಂತರವಾಗಿ ನಡೆಯಲಿದ್ದು, ಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ, ತಾಳಮದ್ದಲೆ ನಡೆಯಲಿದ್ದು, ಭಕ್ತರಿಂದ ಹೊರೆ ಕಾಣಿಕೆ ಹಾಗೂ ಜಿಲ್ಲೆಯ ಪ್ರಸಿದ್ದ ಭಜನಾ ತಂಡಗಳಿಂದ ನಿರಂತರ ಭಜನಾ ಕಾರ್ಯಕ್ರಮ ಈ ಬಾರಿಯ ವಿಶೇಷ ಕಾರ್ಯಕ್ರಮವಾಗಿದೆ.
ಈ ಸಂದರ್ಭ ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಿ ಪದ್ಮಶೇಖರ ಜೈನ್ ಬಲ್ಲೋಡಿಗುತ್ತು, ಪ್ರಮುಖರಾದ ಪಿಯೂಸ್ ಎಲ್ ರೋಡ್ರಿಗಸ್, ಬೇಬಿ ಕುಂದರ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಎಂ ಅಬ್ಬಾಸ್ ಅಲಿ, ಸುದೀಪ್ ಕುಮಾರ್ ಶೆಟ್ಟಿ, ಕೆ ಪದ್ಮನಾಭ ರೈ, ಜನಾರ್ದನ ಚೆಂಡ್ತಿಮಾರ್, ರಾಜೀವ್ ಶೆಟ್ಟಿ ಎಡ್ತೂರು, ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಸಂಪತ್ ಕುಮಾರ್ ಶೆಟ್ಟಿ, ಲೋಲಾಕ್ಷ ಶೆಟ್ಟಿ, ಪ್ರವೀಣ್ ಬಿ ಜಕ್ರಿಬೆಟ್ಟು, ಸುರೇಶ್ ಜೋರಾ, ಜಯಂತಿ ಪೂಜಾರಿ, ಶಬೀರ್ ಸಿದ್ದಕಟ್ಟೆ, ವೆಂಕಪ್ಪ ಪೂಜಾರಿ, ಸುಧಾಕರ ಶೆಣೈ, ಮಹಾಬಲ ಬಂಗೇರ, ಮಲ್ಲಿಕಾ ಶೆಟ್ಟಿ, ಉಮೇಶ್ ಕುಲಾಲ್, ಚಂದ್ರಹಾಸ ಶೆಟ್ಟಿ, ರಾಜೀವ್ ಕಕ್ಕೆಪದವು, ಡೆಂಝಿಲ್ ನೊರೊನ್ಹಾ, ಪದ್ಮನಾಭ ಸಾಮಂತ್, ಬಿ ವಾಸು ಪೂಜಾರಿ, ಮಾಯಿಲಪ್ಪ ಸಾಲ್ಯಾನ್, ಜಗದೀಶ್ ಕುಂದರ್, ಪ್ರಕಾಶ್ ಶೆಟ್ಟಿ ಶ್ರೀ ಶೈಲ ತುಂಬೆ, ಗಂಗಾಧರ ಪೂಜಾರಿ ಮೊದಲಾದವರು ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
0 comments:
Post a Comment