ಬಂಟ್ವಾಳ, ಆಗಸ್ಟ್ 31, 2022 (ಕರಾವಳಿ ಟೈಮ್ಸ್) : ಇಲ್ಲಿನ ವಿದ್ಯಾಗಿರಿ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಾದ ಭಾಮೀ ಪ್ರಜ್ವಲ್ ಶೆಣೈ, ಮೊಹಮ್ಮದ್ ನಿಹಾದ್, ಕ್ಯಾನನ್ ಬ್ಯಾಪ್ಟಿಸ್ಟ್, ಪ್ರಥಮ್ ಪೈ ಇವರು ಮಂಗಳೂರು ಮೌಂಟ್ ಕಾರ್ಮೆಲ್ ಸೆಂಟ್ರಲ್ ಶಾಲೆಯಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಿಬಿಎಸ್‍ಇ ಮತ್ತು ಐಸಿಎಸ್‍ಸಿ ಶಾಲೆಗಳ ಒಕ್ಕೂಟವು ಆಯೋಜಿಸಿದ್ದ 14 ವರ್ಷದೊಳಗಿನ ವಯೋಮಿತಿಯ ಬಾಲಕರ ವಿಭಾಗದ ಟೇಬಲ್ ಟೆನ್ನಿಸ್ ಪಂದ್ಯದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ.
ಇವರಿಗೆ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೂಡಿಗೆ ಪಾಂಡುರಂಗ ಶೆಣೈ, ಕಾರ್ಯದರ್ಶಿಗಳಾದ ಕೂಡಿಗೆ ಪ್ರಕಾಶ್ ಶೆಣೈ, ಅನಿರುಧ್ದ ಕಾಮತ್, ಎಸ್ ವಿ ಎಸ್ ಸಮೂಹ ಸಂಸ್ಥೆಗಳ ಸಂಚಾಲಕಿ ಕೆ ರೇಖಾ ಶೆಣೈ ಸಹಿತ ಪ್ರಾಂಶುಪಾಲರು, ಬೋಧಕ-ಬೋಧಕೇತರ ವರ್ಗ ಅಭಿನಂದನೆ ಸಲ್ಲಿಸಿದೆ.
0 comments:
Post a Comment