ಬಂಟ್ವಾಳ, ಆಗಸ್ಟ್ 25, 2022 (ಕರಾವಳಿ ಟೈಮ್ಸ್) : ಇಲ್ಲಿನ ಲಯನ್ಸ್ ಕ್ಲಬ್, ಲಿಯೋ ಕ್ಲಬ್ ಗೋಲ್ಡ್ ಹಾಗೂ ಬಿ ಸಿ ರೋಡು ಯುನಿಕ್ ಎಜುಕೇರ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಸೆಟ್, ನೀಟ್, ಜೆಇಇ, ಕೆವಿಪಿವೈ ಹಾಗೂ ಇತರ ಪರೀಕ್ಷೆಗಳಾದ ಎನ್‍ಟಿಎಸ್‍ಇ ಜೊತೆಗೆ ಐಪಿಎಸ್, ಐಎಎಸ್, ಕೆಎಎಸ್ ಪರೀಕ್ಷೆಗಳನ್ನು ಎದುರಿಸುವ ಬಗ್ಗೆ ಮಾಹಿತಿ ಕಾರ್ಯಾಗಾರ ಆಗಸ್ಟ್ 28 ರಂದು ಭಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಬಿ ಸಿ ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ.
ಕಾರ್ಯಾಗಾರದಲ್ಲಿ ಗಣಿತಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಕವಿತಾ, ರಾಸಾಯನಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಹರ್ಷಿತಾ ಮತ್ತು ಸಂಶೋಧಕರಾಗಿರುವ ಚೇತನ್ ಮುಂಡಾಜೆಯವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಲಿದ್ದಾರೆ.
ಕಾರ್ಯಕ್ರಮವನ್ನು ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಆಚಾರ್ಯ ಉದ್ಘಾಟಿಸಲಿದ್ದು, ಲಿಯೋ ಅಧ್ಯಕ್ಷೆ ಭುವಿ ಕಾರಂತ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಲಿಯೋ ಕೋರ್ಡಿನೇಟರ್ ಪ್ರೀತಮ್ ಪೆÇನ್ನಪ್ಪ ಎನ್ ಜಿ, ಜಿಲ್ಲಾ ಲಿಯೋ ಅಧ್ಯಕ್ಷ ಕವನ ಕುಬೆವೂರು, ಜಿಲ್ಲಾ ಲಿಯೋ ಎಡ್ವೈಸರ್ ಡಾ ದಿವ್ಯ ವಿ ಶೆಟ್ಟಿ ಭಾಗವಹಿಸಲಿದ್ದಾರೆ.
ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬಹುದಾಗಿದ್ದು, ಭಾಗವಹಿಸುವ ವಿದ್ಯಾರ್ಥಿಗಳಿಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಭಾಗವಹಿಸುವ ಶಿಬಿರಾರ್ಥಿಗಳಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಗಿದ್ದು, ಭಾಗವಹಿಸಲಿಚ್ಚಿಸುವವರು ಆಗಸ್ಟ್ 26ರೊಳಗೆ ಲಯನ್ ಲಕ್ಷ್ಮಣ್ ಅಗ್ರಬೈಲು ಅವರ ಮೊಬೈಲ್ ಸಂಖ್ಯೆ 9535673976ಯನ್ನು ಸಂಪರ್ಕಿಸಬಹುದು ಎಂದು ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಆಚಾರ್ಯ ತಿಳಿಸಿದ್ದಾರೆ.
0 comments:
Post a Comment