ಬಂಟ್ವಾಳ, ಆಗಸ್ಟ್ 21, 2022 (ಕರಾವಳಿ ಟೈಮ್ಸ್) : ಉನ್ನತ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳೂ ಕೂಡಾ ಇಂದು ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಸಿಇಟಿ ಮೂಲಕ ಉನ್ನತ ವ್ಯಾಸಂಗದ ಕನಸನ್ನು ನನಸಾಗಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದರು.
ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್ ಎಸ್ ಯು ಐ) ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಿ ಸಿ ರೋಡಿನಲ್ಲಿ ಹಮ್ಮಿಕೊಳ್ಳಲಾದ ‘ನಮ್ಮೂರ ಹೆಮ್ಮೆ’ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣಕ್ಕೆ ಕಾಂಗ್ರೆಸ್ ಸರಕಾರ ಹಿಂದಿನಿಂದಲೇ ಉತ್ತಮ ಪ್ರೇರಣೆ ನೀಡುವ ಯೋಜನೆಗಳನ್ನೇ ಜಾರಿಗೆ ತರುವ ಮೂಲಕ ವಿದ್ಯಾರ್ಥಿ ಸಮುದಾಯ ದೇಶದ ಸಂಪತ್ತು ಎಂಬ ನಿಟ್ಟಿನಲ್ಲಿ ಉತ್ತಮ ಗುರಿಯೊಂದಿಗೆ ಮುನ್ನಡೆಯಲು ಪ್ರೇರೇಪಿಸಿದೆ. ಆದರೆ ಅದೇ ಶಿಕ್ಷಣ ಕ್ಷೇತ್ರವನ್ನು ಇಂದು ಕೋಮುವಾದಿ ಪಕ್ಷಗಳು ಕೋಮು ಆಧಾರಿತವಾಗಿ ವಿಭಜಿಸುವ ಮೂಲಕ ದೇಶದ ಸಾಮರಸ್ಯದ ಸಂಕೇತ ಹಾಗೂ ದೇಶದ ಅಭಿವೃದ್ದಿಯ ಭವಿಷ್ಯದ ಕುಡಿಗಳಾದ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಮೂಲಕ ಕೋಮು ವಿಷಬೀಜ ಬಿತ್ತುವ ಆತಂಕದ ಪರಿಸ್ಥಿತಿ ಉಂಟಾಗಿರುವುದು ಅತ್ಯಂತ ಖೇದಕರ ಎಂದು ವಿಷಾದಿಸಿದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಮೇಶ್ ನಾಯ್ಕ್, ಪ್ರಮುಖರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಬಿ ಎಂ ಅಬ್ಬಾಸ್ ಅಲಿ, ಸುದರ್ಶನ್ ಜೈನ್, ಪದ್ಮಶೇಖರ್ ಜೈನ್, ಮಲ್ಲಿಕಾ ವಿ ಶೆಟ್ಟಿ, ಇಬ್ರಾಹೀಂ ನವಾಝ್, ಜಯಂತಿ ಪೂಜಾರಿ, ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ, ಉಪಾಧ್ಯಕ್ಷ ಅಂಕುಶ್, ಪದಾಧಿಕಾರಿಗಳಾದ ಪವನ್ ಸಾಲಿಯಾನ್, ಅಂಕುಶ್, ಅನ್ವಿತ್ ಕಟೀಲ್, ನಜೀಬ್, ಸುಹಾನ್ ಆಳ್ವ, ಬಾತಿಶ್ ಅಳಕೆಮಜಲು ಮೊದಲಾದವರು ಭಾಗವಹಿಸಿದ್ದರು.
0 comments:
Post a Comment