ಬಂಟ್ವಾಳ, ಆಗಸ್ಟ್ 12, 2022 (ಕರಾವಳಿ ಟೈಮ್ಸ್) : ಮಾಜಿ ಸಚಿವ ಬಿ ರಮಾನಾಥ ರೈ ಹಾಗೂ ರಾಜ್ಯ ಪರಿಸರ ಮಾಲಿನ್ಯ ಮಂಡಳಿ ಮಾಜಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್ ನೇತೃತ್ವದಲ್ಲಿ ಕಳೆದ ಎಪ್ರಿಲ್ 17 ರಂದು ನಾವೂರು ಗ್ರಾಮದ ಕೂಡಿಬೈಲು ಎಂಬಲ್ಲಿ ಆಯೋಜಿಸಲಾದ ಮೂಡೂರು-ಪಡೂರು ಬಂಟ್ವಾಳ ಕಂಬಳ ಯಶಸ್ವೀ ಮುಕ್ತಾಯ ಕಂಡ ಬಳಿಕ ಇದೀಗ ಮತ್ತೆ ಅವರದೇ ನೇತೃತ್ವದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಆಟಿದ ಕೂಟ ಸಮಿತಿ ವತಿಯಿಂದ ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಪ್ರಯುಕ್ತ ಆಟಿಡ್ ಕೆಸರ್ಡ್ ಒಂಜಿ ದಿನ ವಿನೂತನ ಕಾರ್ಯಕ್ರಮಕ್ಕೆ ವೇದಿಕೆ ಸಿದ್ದಗೊಂಡಿದೆ.
ಆಗಸ್ಟ್ 14 ರಂದು ಪಂಜಿಕಲ್ಲು ಗ್ರಾಮದ ಪಂಜಿಕಲ್ಲು ಬಾಲೇಶ್ವರ ಗರಡಿ ಗದ್ದೆಯಲ್ಲಿ ಈ ಆಟಿದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ವಿವಿಧ ಆಟೋಟ ಸ್ಪರ್ಧೆಗಳು, ತುಳುನಾಡಿನ ಸಾಂಪ್ರದಾಯಿಕ ತಿಂಡಿ- ತಿನಿಸುಗಳು ಕಾರ್ಯಕ್ರಮದ ವಿಶೇಷತೆಯಾಗಿದೆ. ಸುಮಾರು 3,000 ಮಂದಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿರುವ ಕಾರ್ಯಕ್ರಮಕ್ಕೆ ಗದ್ದೆಯಲ್ಲಿ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ.
ಕಾರ್ಯಕ್ರಮದ ವೇಳೆ ಪ್ರಾಥಮಿಕ ಶಾಲಾ ಮಕ್ಕಳು, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಪ್ರಮುಖವಾಗಿ ಸಂಗೀತ ಕುರ್ಚಿ, ಕೆಸರು ಗದ್ದೆ ಓಟ, ಲಿಂಬೆ ಚಮಚ, ಪಾಡ್ದನ ಹೇಳುವ ಸ್ಪರ್ಧೆ, ಹಿಮ್ಮುಖ ಓಟ, ನೀರಿನ ಕೊಡ ಸೊಂಟದಲ್ಲಿಟ್ಟು ಓಟ, ಮಡಲ್ ಹೆಣೆಯುವುದು, ಮಡಕೆ ಒಡೆಯುವುದು, ಕಾರು ಕಂಬ್ಳ ಓಟ, ಹಗ್ಗ-ಜಗ್ಗಾಟ, ತ್ರೋಬಾಲ್, ಬಾಲ್ ಎಸೆತ, ಉರಾಳ್ ಹಾಕುವುದು, ಕಬಡ್ಡಿ, ವಾಲಿಬಾಲ್, ಅಡಿಕೆ ಹಾಳೆಯಲ್ಲಿ ಏಳೆತ, ದಂಪತಿಗೆ ಕ್ರೇಜಿ ಗೇಮ್, ತಪ್ಪಂಗಾಯಿ ಆಟ, ತೆಂಗಿನಕಾಯಿ ಉರುಳಿಸುವುದು ಸ್ಪರ್ಧೆಗಳು ನಡೆಯಲಿದೆ ಎಂದು ಕಾರ್ಯಕ್ರಮದ ನೇತೃತ್ವ ವಹಿಸಿರು ರಮಾನಾಥ ರೈ ಹಾಗೂ ಪಿಯುಸ್ ಎಲ್ ರೋಡ್ರಿಗಸ್ ತಿಳಿಸಿದ್ದಾರೆ.
ಇಬ್ಬರು ನಾಯಕರ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಸಮಿತಿ ಪದಾಧಿಕಾರಿಗಳಾದ ಸುದರ್ಶನ್ ಜೈನ್, ಪ್ರಕಾಶ್ ಕುಮಾರ್ ಜೈನ್, ಪದ್ಮಶೇಖರ್ ಜೈನ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ರಾಜೀವ ಶೆಟ್ಟಿ, ಸುರೇಶ್ ಜೋರ, ಪದ್ಮನಾಭ ರೈ, ಸೀತಾರಾಮ ಶೆಟ್ಟಿ, ಕೃಷ್ಣರಾಜ್ ಜೈನ್, ರವಿ ಆರ್. ಪೂಜಾರಿ, ದೇವಪ್ಪ ಕುಲಾಲ್, ದಿನೇಶ್ ಶೆಟ್ಟಿ, ಕೇಶವ ಪೂಜಾರಿ, ಸದಾನಂದ ಶೆಟ್ಟಿ, ರಾಜೇಶ್ ಗೌಡ, ರಾಧಾಕೃಷ್ಣ ಆಚಾರ್ಯ, ಚೇತನ್, ವೆಂಕಪ್ಪ ಪೂಜಾರಿ ಮೊದಲಾದವರು ಸಾಥ್ ನೀಡಲಿದ್ದಾರೆ.
0 comments:
Post a Comment