ಬಂಟ್ವಾಳ, ಆಗಸ್ಟ್ 15, 2022 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಸಿ ರೋಡು ಸಮೀಪದ ಮೊಡಂಕಾಪು ಇನ್ಫೆಂಟ್ ಜೀಸಸ್ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು 320 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇನ್ಫೆಂಟ್ ಜೀಸಸ್ ಹಿರಿಯ ವಿದ್ಯಾರ್ಥಿಗಳ ಸಂಘವು ಆಗಸ್ಟ್ 14 ರಂದು ಅಸ್ತಿತ್ವಕ್ಕೆ ಬಂದಿದ್ದು, ಪ್ರಥಮ ಅಧ್ಯಕ್ಷರಾಗಿ ಬಂಟ್ವಾಳ ನಗರಾಭಿವೃದ್ದಿ ಪ್ರಾಧಿಕಾರ (ಬುಡಾ) ಮಾಜಿ ಅಧ್ಯಕ್ಷ, ಬಂಟ್ವಾಳ ಪುರಸಭಾ ಮಾಜಿ ಸದಸ್ಯ ಸದಾಶಿವ ಬಂಗೇರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಸುಹಾಸ್, ಕಾರ್ಯದರ್ಶಿಯಾಗಿ ಡೊನಾಲ್ಡ್ ಡಿ'ಸೋಜ, ಜೊತೆ ಕಾರ್ಯದರ್ಶಿಯಾಗಿ ರಶ್ಮಿ, ಕೋಶಾಧಿಕಾರಿಯಾಗಿ ಕ್ಯಾಮಿಲ್ ಥಾರ್ಸಿಯಸ್ ಡಿ ಕುನ್ಹಾ, ಪಿ ಆರ್ ಒ ಆಗಿ ಪೃಥ್ವಿ ಆಚಾರ್ಯ ಹಾಗೂ ಸದಸ್ಯರುಗಳಾಗಿ ರಾಮಚಂದ್ರ ರಾವ್, ಮೊಹಮ್ಮದ್ ಶರೀಫ್, ಅಕ್ಷಯ ಸೋಮಯಾಜಿ, ಅಶ್ವಿನಿ, ದೀಕ್ಷಿತ್, ಪ್ರಶಾಂತ್ ಫ್ರಾಂಕ್, ರೊನಾಲ್ಡ್ ಬಿ ಡಿ'ಸೋಜಾ, ಚಂದ್ರಶೇಖರ್, ಮ್ಯಾಕ್ಸಿಮ್ ಲಸ್ರಾದೋ, ರಿಚರ್ಡ್ ಪ್ಯಾಸ್ಕಲ್, ಅನಿಲ್ ಪಿಂಟೋ, ಪದ್ಮನಾಭ ಸೋಮಯಾಜಿ, ಮೇಧಾ, ಸಚಿನ್ ನೊರೊನ್ಹಾ ಅವರನ್ನು ಆರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
0 comments:
Post a Comment