ಚಿಕ್ಕಮಗಳೂರು, ಸೆಪ್ಟೆಂಬರ್ 10, 2022 (ಕರಾವಳಿ ಟೈಮ್ಸ್) : ಆದಿಚುಂಚನಗಿರಿ ಇನ್ಸ್ಟಿಟ್ಯೂಟ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ (ಎಐಬಿಎಂ) ಕಾಲೇಜಿನ ವಿಧ್ಯಾರ್ಥಿನಿ ಆಝ್ರ ನೇಹಾ ಬಿಬಿಎ ಪದವಿಯ 6ನೇ ಸೆಮಿಸ್ಟರಿನಲ್ಲಿ 594 ಅಂಕ ಪಡೆದು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಚಿಕ್ಕಮಗಳೂರು ಆದಿಚುಂಚನಗಿರಿ ಇನ್ಸ್ಟಿಟ್ಯೂಟ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ (ಎಐಬಿಎಂ) ಇದರ ವತಿಯಿಂದ ನಡೆದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಇವರಿಗೆ ಪ್ರಶಸ್ತಿ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
2016ರಲ್ಲಿ 10ನೇ ತರಗತಿ ಪರೀಕ್ಷೆಯಲ್ಲಿ ಸಂತ ಜೋಸೆಫ್ ಬಾಲಕಿಯರ ಪ್ರೌಢ ಶಾಲೆಯಲ್ಲಿ ಶೇಕಡಾ 80 ಅಂಕ ಪಡೆದು ತೇರ್ಗಡೆಯಾಗಿದ್ದು, 2018ರಲ್ಲಿ ದ್ವಿತೀಯ ಪಿಯುಸಿಯಲ್ಲಿ ಮಲ್ನಾಡ್ ಎಜುಕೇಷನಲ್ ಸೊಸೈಟಿಯಲ್ಲಿ ಶೇ 86% ಅಂಕ ಪಡೆದು ಉತ್ತೀರ್ಣರಾಗಿರುತ್ತಾರೆ.
ಆಝ್ರ ನೇಹಾ ಮಂಗಳೂರು ಕಾಟಿಪಳ್ಳದ ಡೈಮಂಡ್ ಅಬ್ಬು ಅವರ ಮೊಮ್ಮಗಳು ಹಾಗೂ ಡೈಮಂಡ್ ಖಾಲಿದ್ ಮತ್ತು ಝೈನಬ ದಂಪತಿಯ ತೃತಿಯ ಪುತ್ರಿಯಾಗಿದ್ದಾರೆ.
0 comments:
Post a Comment