ಬಂಟ್ವಾಳ, ಸೆಪ್ಟೆಂಬರ್ 20, 2022 (ಕರಾವಳಿ ಟೈಮ್ಸ್) : ಕ್ಯಾಲಿಕಟ್ ಜಾಮಿಆ ದಾರುಸ್ಸಲಾಂ ಅಲ್ ಇಸ್ಲಾಮಿಯ ಇದರ ಪೂರ್ವ ವಿದ್ಯಾರ್ಥಿ ಸಂಘಟನೆಯಾದ ದಾರಿಮೀಸ್ ಅಸೋಸಿಯೇಷನ್ ದ ಕ ಜಿಲ್ಲಾ ಸಮಿತಿಯ 20ನೇ ವಾರ್ಷಿಕೋತ್ಸವದ ಅಂಗವಾಗಿ ನವೆಂಬರ್ 13 ರಂದು ಶೈಖುನಾ ಶಂಸುಲ್ ಉಲಮಾರವರ ಆಂಡ್ ನೇರ್ಚೆ, ದರ್ಸ್ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ವಿದ್ವಾಂಸರಿಗೆ ಶಂಸುಲ್ ಉಲಮಾ ಅವಾರ್ಡ್, ಮುತಅಲ್ಲಿಮರ ಕಲೆ ಮತ್ತು ಸಾಂಸ್ಕೃತಿಕ ಸ್ಪರ್ಧೆ ಮೊದಲಾದ ಕಾರ್ಯಕ್ರಮಗಳನ್ನು ನಡೆಸುವುದಾಗಿ ದಾರಿಮೀಸ್ ಅಸೋಸಿಯೇಶನ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತೀರ್ಮಾನಿಸಿದೆ.
ನೇರಳಕಟ್ಟೆಯ ಸಮಸ್ತ ಮಹಲ್ಲಿನಲ್ಲಿ ದಾರಿಮೀಸ್ ಜಿಲ್ಲಾಧ್ಯಕ್ಷ ಕೆ ಬಿ ಅಬ್ದುಲ್ ಖಾದರ್ ದಾರಿಮಿ ಕೊಡುಂಗಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ವಾರ್ಷಿಕೋತ್ಸವದ ಯಶಸ್ವಿಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಗಿದ್ದು, ಅಬೂಬಕ್ಕರ್ ಸಿದ್ದೀಕ್ ದಾರಿಮಿ ಒಮಾನ್ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಉಳಿದಂತೆ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ದಾರಿಮಿ ಕೊಡಾಜೆ, ಕೋಶಾಧಿಕಾರಿಯಾಗಿ ಅಬ್ದುಲ್ ಮಜೀದ್ ದಾರಿಮಿ ಬುಡೋಳಿ, ಉಪಾಧ್ಯಕ್ಷರುಗಳಾಗಿ ಕೆ ಎಲ್ ದಾರಿಮಿ ಪಟ್ಟೋರಿ, ಶರೀಫ್ ದಾರಿಮಿ ಉದ್ದಬೆಟ್ಟು, ಕಾರ್ಯದರ್ಶಿಯಾಗಿ ಕೆ ಐ ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ನಿರ್ದೇಶಕರುಗಳಾಗಿ ಹನೀಫ್ ದಾರಿಮಿ ಸವಣೂರು, ಶಂಸುದ್ದೀನ್ ದಾರಿಮಿ, ಕೆ ಬಿ ಅಬ್ದುಲ್ ಖಾದರ್ ದಾರಿಮಿ, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಅಬ್ದುಲ್ ಕರೀಂ ದಾರಿಮಿ ಕುಂಬ್ರ, ಅಹ್ಮದ್ ದಾರಿಮಿ ಕಂಬಳಬೆಟ್ಟು ಅವರನ್ನು ನೇಮಿಸಲಾಯಿತು.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಸಮಿತಿಗಳನ್ನು ರಚಿಸಲಾಗುತ್ತಿದ್ದು, ಅದಕ್ಕಾಗಿ ಕೋ-ಆರ್ಡಿನೇಟರುಳನ್ನು ನೇಮಿಸಲಾಗಿದ್ದು, ಪುತ್ತೂರು ತಾಲೂಕು ಅಬ್ದುಲ್ ಕರೀಂ ದಾರಿಮಿ, ಕಡಬ ತಾಲೂಕು ಅಬೂಬಕರ್ ಸಿದ್ದೀಖ್ ದಾರಿಮಿ ಒಮಾನ್, ಸುಳ್ಯ ತಾಲೂಕು ಶಾಫಿ ದಾರಿಮಿ ಅಜ್ಜಾವರ, ಬೆಳ್ತಂಗಡಿ ತಾಲೂಕು ಶಂಸುದ್ದೀನ್ ದಾರಿಮಿ ಕನ್ನಡಿಕಟ್ಟೆ, ಬಂಟ್ವಾಳ ತಾಲೂಕು ಕೆ ಬಿ ಅಬ್ದುಲ್ ಖಾದರ್ ದಾರಿಮಿ, ಮಂಗಳೂರು ತಾಲೂಕು ಫಾರೂಕ್ ದಾರಿಮಿ ಫಜೀರ್, ಮೂಡುಬಿದಿರೆ ತಾಲೂಕು ಅಬ್ದುಲ್ ಮಜೀದ್ ದಾರಿಮಿ ತೋಡಾರ್ ಅವರನ್ನು ಕೋ-ಆರ್ಡಿನೇಟರುಗಳನ್ನಾಗಿ ನೇಮಿಸಲಾಗಿದೆ.
ಚುನಾವಣಾಧಿಕಾರಿಗಳನ್ನಾಗಿ ಕೆ ಐ ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ, ಕೆ ಎಲ್ ಉಮರ್ ದಾರಿಮಿ ಪಟ್ಟೋರಿ, ಖಾಸಿಂ ದಾರಿಮಿ ನಂದಾವರ, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಎಸ್ ಐ ಮುಹಮ್ಮದ್ ಹನೀಫ್ ದಾರಿಮಿ ಸವಣೂರು, ಹನೀಫ್ ದಾರಿಮಿ ನೆಕ್ಕಿಲಾಡಿ ಅವರನ್ನು ನೇಮಕ ಮಾಡಲಾಯಿತು.
ದಾರಿಮಿ ಉಲಮಾ ಒಕ್ಕೂಟದ ಕಾರ್ಯದರ್ಶಿ ಯು ಕೆ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಸಭೆಯನ್ನು ಉದ್ಘಾಟಿಸಿದರು. ಅಬ್ದುಲ್ ಹಮೀದ್ ದಾರಿಮಿ ಸಂಪ್ಯ ಪ್ರಾರ್ಥನೆ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಕರೀಂ ದಾರಿಮಿ ಕುಂಬ್ರ ಸ್ವಾಗತಿಸಿ, ಹನೀಫ್ ದಾರಿಮಿ ನೆಕ್ಕಿಲಾಡಿ ವಂದಿಸಿದರು.
ಅಬ್ದುಲ್ ರಹ್ಮಾನ್ ದಾರಿಮಿ ಕಡಬ, ಮುಹಮ್ಮದಲಿ ದಾರಿಮಿ ಕುಕ್ಕಾಜೆ, ಅಬೂಬಕ್ಕರ್ ದಾರಿಮಿ ಕುಪ್ಪೆಟ್ಟಿ, ಸಿರಾಜ್ ದಾರಿಮಿ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.
0 comments:
Post a Comment