ಮಂಗಳೂರು, ಸೆಪ್ಟೆಂಬರ್ 19, 2022 (ಕರಾವಳಿ ಟೈಮ್ಸ್) : ಸಂತ ಅಲೋಶಿಯಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಹಾಗೂ ಜರ್ನಿ ಥಿಯೇಟರ್ ಗ್ರೂಪ್ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಬಿ ವಿ ಕಾರಂತರ ಜನ್ಮ ದಿನದ ಪ್ರಯುಕ್ತ ನಾ ಕಂಡ ಬಿ ವಿ ಕಾರಂತರು ಎಂಬ ವಿಷಯದಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ರಂಗಾಯಣ ಕಲಾವಿದ ಎಸ್ ರಾಮು ಮಾತನಾಡಿ, ರಂಗಾಯಣದ ಬಹುತೇಕ ಕಲಾವಿದರ ಪಾಲಿಗೆ ಕಾರಂತರು, ಎರಡನೆಯ ತಂದೆ ಇದ್ದಂತೆ. ವಿವಿಧ ಜಿಲ್ಲೆಗಳ ಕಲಾವಿದರ ನಡುವಿನ ಕೊಡುಕೊಳ್ಳುವಿಕೆ, ಜೊತೆಗೆ ಕೂಡಿ ಬದುಕುವುದು, ಹೊಂದಾಣಿಕೆ ಎಲ್ಲವನ್ನೂ ನಮಗೆ ಕಲಿಸಿಕೊಟ್ಟವರು. ಜೊತೆಗೆ ಕಲಾವಿದರಲ್ಲಿ ಓದುವ ಹವ್ಯಾಸ ಹಾಗೂ ಓದಲು ಪ್ರೇರೆಪಿಸಿದವರೆಂದರೆ ಬಿ ವಿ ಕಾರಂತರು ಎಂದರು.
ರಂಗಭೂಮಿಗೆ ಇವರು ನೀಡಿರುವ ಸಂಗೀತದ ಕೊಡುಗೆಗೆ ಸೆಪ್ಟಂಬರ್ 19, ಅವರ ಜನ್ಮದಿವನ್ನು ರಂಗ ಸಂಗೀತ ದಿನಾಚರಣೆಯಾಗಿ ಸಂಭ್ರಮಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಜರ್ನಿ ಥಿಯೇಟರ್ ಗ್ರೂಪ್ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಕಾಲೇಜಿನ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
0 comments:
Post a Comment