ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ವತಿಯಿಂದ ಕಿಡ್ನಿ ರೋಗಿಗಳಿಗೆ ಸಹಾಯಧನ ವಿತರಣೆ
ಬಂಟ್ವಾಳ, ಸೆಪ್ಟೆಂಬರ್ 09, 2022 (ಕರಾವಳಿ ಟೈಮ್ಸ್) : ಮನುಷ್ಯನ ಜೀವನದಲ್ಲಿ ಶಿಕ್ಷಣ ಮತ್ತು ಆರೋಗ್ಯ ಅತ್ಯಾವಶ್ಯಕವಾಗಿದ್ದು, ಇವೆರಡು ಸಕಾಲದಲ್ಲಿ ದೊರೆತಾಗ ಮಾತ್ರ ಮನುಷ್ಯ ಪರಿಪೂರ್ಣವಾಗಿ ಕಾರ್ಯನಿರ್ವಹಿಸಬಲ್ಲ. ಈ ನಿಟ್ಟಿನಲ್ಲಿ ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ವತಿಯಿಂದ ಜಾಗೃತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಜಿ ಮುಹಮ್ಮದ್ ಹನೀಫ್ ಗೋಳ್ತಮಜಲು ಹೇಳಿದರು.
ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕಮಿಟಿ ವತಿಯಿಂದ ಗೋಳ್ತಮಜಲು ಹಜಾಜ್ ಸ್ಪೋರ್ಟ್ಸ್ ಕ್ಲಬ್ ಕಛೇರಿಯಲ್ಲಿ ಸೆ 9 ರಂದು ಶುಕ್ರವಾರ ಸಂಜೆ ನಡೆದ ತಾಲೂಕಿನ ಡಯಾಲಿಸಿಸಿಗೊಳಗಾದ ಬಡ ಕಿಡ್ನಿ ಸಂಬಂಧಿ ರೋಗಿಗಳಿಗೆ ಮಾಸಿಕ ಸಹಾಯಧನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಯಾಲಿಸಿಸಿಗೆ ಒಳಗಾದ ತಾಲೂಕಿನ ಬಡ ಕಿಡ್ನಿ ರೋಗಿಗಳಿಗೆ ಮಾಸಿಕ ತಲಾ 3 ಸಾವಿರ ರೂಪಾಯಿ ಸಹಾಯಧನ ನೀಡುವ ಯೋಜನೆ ರೂಪಿಸಲಾಗಿದ್ದು, ಈ ಸಂಬಂಧ 23 ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ ಮುಬಶ್ಶಿರ್, ಹಾಜಿ ಮುಹಮ್ಮದ್ ಅಲಿ ಎ ಆರ್, ಹಾಜಿ ಬಿ ಮುಹಮ್ಮದ್ ರಫೀಕ್ ಕೊಡಾಜೆ, ಬಿ ಕೆ ಮುನೀರ್ ಬೈರಿಕಟ್ಟೆ, ಅಬೂಬಕ್ಕರ್ ವಿಟ್ಲ, ಬಿ ಎಂ ಅಬ್ಬಾಸ್ ಅಲಿ, ರಫೀಕ್ ಹಾಜಿ ಸುರಿಬೈಲು, ಆಸಿಫ್ ಇಕ್ಬಾಲ್ ಫರಂಗಿಪೇಟೆ, ಹಾಜಿ ಬಿ ಎ ಮುಹಮ್ಮದ್ ನೀಮಾ, ರಫೀಕ್ ಹಾಜಿ ಆಲಡ್ಕ, ಪಿ ಎಂ ಹಕೀಂ ಪರ್ತಿಪಾಡಿ, ಕೆ ಎಸ್ ಮುಹಮ್ಮದ್ ಕಡೇಶ್ವಾಲ್ಯ, ಹಕೀಂ ಕಲಾಯಿ, ಶೇಖ್ ರಹ್ಮತ್ತುಲ್ಲಾಹ್, ಬಿ ಎಂ ತುಂಬೆ, ಮುಹಮ್ಮದ್ ಇಕ್ಬಾಲ್ ಜೆಟಿಟಿ, ಅಬ್ದುಲ್ ರಝಾಕ್ ಮಾಸ್ಟರ್ ಅನಂತಾಡಿ, ಪಿ ಮುಹಮ್ಮದ್ ಪಾಣೆಮಂಗಳೂರು, ಎಂ ಎಸ್ ಮುಹಮ್ಮದ್, ಮುಹಮ್ಮದ್ ಅಶ್ರಫ್ ಕನ್ಯಾನ, ರಶೀದ್ ವಿಟ್ಲ, ಲತೀಫ್ ನೇರಳಕಟ್ಟೆ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment