ಬಂಟ್ವಾಳ, ಸೆಪ್ಟೆಂಬರ್ 08, 2022 (ಕರಾವಳಿ ಟೈಮ್ಸ್) : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಬಂಟ್ವಾಳ ಹಾಗೂ ರೋಟರಿ ಕ್ಲಬ್ ಬಂಟ್ವಾಳ ಇವುಗಳ ಜಂಟಿ ಆಶ್ರಯದಲ್ಲಿ ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಸಾರ್ವಜನಿಕ ರುದ್ರ ಭೂಮಿಯಲ್ಲಿ ಸಾಮಾಜಿಕ ಅರಣ್ಯ ಕಾರ್ಯಕ್ರಮದಡಿ ಗಿಡ ನಾಟಿ ನಡೆಸಲಾಯಿತು.
ಗ್ರಾಮಾಭಿವೃದ್ದಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕರು ಗಿಡ ನಾಟಿ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುಮಾರು 100 ಗಿಡ ನಾಟಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ವಸಂತ ಪೂಜಾರಿ, ಕೇಂದ್ರ ಒಕ್ಕೂಟದ ಮಾಜಿ ಅದ್ಯಕ್ಷ ಸದಾನಂದ ಗೌಡ, ಗ್ರಾಮಾಭಿವೃದ್ದಿ ಯೋಜನಾಧಿಕಾರಿ ಜಯಾನಂದ್ ಪಿ, ಗ್ರಾ ಪಂ ಸದಸ್ಯರಾದ ಜನಾರ್ದನ ಕೊಂಬೆಟ್ಟು, ಯೋಗಿಶ್ ಪಡೀಲ್ ಬೈಲು, ಒಕ್ಕೂಟದ ಅದ್ಯಕ್ಷ ವಸಂತ ಮೂಲ್ಯ, ಸಂತೋಷ, ಬಂಟ್ವಾಳ ಪುರಸಭಾ ಸದಸ್ಯ ಜನಾರ್ದನ ಚಂಡ್ತಿಮಾರ್, ಜನ ಜಾಗೃತಿ ಸದಸ್ಯೆ ರಾಜೀವಿ, ಕೃಷಿ ಮೇಲ್ವಿಚಾರಕ ಜನಾರ್ದನ, ಸೇವಾ ಪ್ರತಿನಿಧಿ ಅಂಬಿಕಾ ಮೊದಲಾದವರು ಭಾಗವಹಿಸಿದ್ದರು. ಮೇಲ್ವಿಚಾರಕ ಕೇಶವ ಕೆ ಸ್ವಾಗತಿಸಿ, ಸೇವಾ ಪ್ರತಿನಿಧಿ ವಿಜಯ ವಂದಿಸಿದರು.
0 comments:
Post a Comment