ಮಂಗಳೂರು, ಸೆಪ್ಟೆಂಬರ್ 08, 2022 (ಕರಾವಳಿ ಟೈಮ್ಸ್) : ದೇರಳಕಟ್ಟೆ ಹೃದಯ ಭಾಗದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಡೈಮಂಡ್ ಅವೆನ್ಯೂ ವಸತಿ ಸಮುಚ್ಚಯದ ಕರಪತ್ರ ಬಿಡುಗಡೆ ಕಾರ್ಯಕ್ರಮ ಗುರುವಾರ ದೇರಳಕಟ್ಟೆಯ ಹೋಟೇಲ್ ಪ್ಲಾಝಾ ಅವೆನ್ಯೂದಲ್ಲಿ ನಡೆಯಿತು.
ವಿಧಾನಸಭಾ ವಿಪಕ್ಷ ನಾಯಕ, ಮಂಗಳೂರು ಶಾಸಕ ಯು ಟಿ ಖಾದರ್ ಕರಪತ್ರ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ತಬೂಕ್ ದಾರಿಮಿ ದುವಾಶೀರ್ವಚನಗೈದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಜಿ ಟಿ ಎಸ್ ಅಬ್ದುಲ್ಲಾ, ಯುಸುಫ್ ಬಾವಾ ಬೆಲ್ಮ, ಅಲಿ ಕುಂಞ ಪಾರೆ, ಆಲ್ವಿನ್ ಡಿ’ಸೋಜ, ಸಿರಾಜ್ ಕಿನ್ಯ, ಮುಹಮ್ಮದ್ ಅಸೈ, ರಝಾಕ್ ಕಾನಕೆರೆ, ರಶೀದ್ ಡೈಮಂಡ್, ಹಮಿದ್ ದೇರಳಕಟ್ಟೆ. ರಿಶಾನ್ ಢೈಮಂಡ್, ಇಂಜಿನಿಯರ್ ಜಾರ್ಜ್ ಹಾಗೂ ಹರ್ಷವರ್ಧನ್ ಮೊದಲಾದವರು ಭಾಗವಹಿಸಿದ್ದರು. ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಸಾಮಣಿಗೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment