ಬಂಟ್ಚಾಳ, ಸೆಪ್ಟೆಂಬರ್ 02, 2022 (ಕರಾವಳಿ ಟೈಮ್ಸ್) : ತಾಲೂಕಿನ ಅಮ್ಮುಂಜೆ ಗ್ರಾಮದ ಕಲಾಯಿ-ತಾಳಿಪ್ಪಾಡಿ ನಿವಾಸಿ ಹಕೀಂ ಎಂಬವರ ಪುತ್ರ ಮಾಝಿನ್ (9) ಹೆಜ್ಜೇನು (ಪಿಲಿಗುಂಡೊಲು ಎಂಬ ಪ್ರಬೇಧಕ್ಕೆ ಸೇರಿದ ವಿಷಕಾರಿ ನೊಣ) ಚುಚ್ಚಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಗುರುವಾರ ರಾತ್ರಿ ವರದಿಯಾಗಿದೆ.
ಸ್ಥಳೀಯ ಸೈಂಟ್ ಅಂಟನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿರುವ ಮಾಝಿನ್ ಗುರುವಾರ ಸಂಜೆ ಶಾಲೆ ಬಿಟ್ಟು ಮನೆಗೆ ಬಂದ ಬಳಿಕ ಅಂಗಡಿಗೆಂದು ತೆರಳಿದ್ದ ವೇಳೆ ಈ ನೊಣ ದಾಳಿ ನಡೆಸಿ ಬಾಲಕನ ದೇಹದ ವಿವಿಧ ಭಾಗಗಳಿಗೆ ಚುಚ್ಚಿ ಗಾಯಗೊಳಿಸಿತ್ತು. ಸಂಜೆಯೇ ಮನೆ ಮಂದಿ ಬಾಲಕನನ್ನು ಸ್ಥಳೀಯ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ಸ್ಥಳೀಯ ವೈದ್ಯರು ನೊಣದ ವಿಷಕಾರಿ ಅಪಾಯದ ಬಗ್ಗೆ ತಿಳಿಸದೆ ಇದ್ದುದರಿಂದ ಮನೆ ಮಂದಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಗಮನ ಹರಿಸದೆ ವೈದ್ಯರು ನೀಡಿದ ಮುಲಾಮು ಹಚ್ಚಿ ಸುಮ್ಮನಾಗಿದ್ದರು ಎನ್ನಲಾಗಿದೆ. ಆದರೆ ರಾತ್ರಿ ಹತ್ತು ಗಂಟೆಯ ಬಳಿಕ ಗಾಯ ಉಲ್ಭಣಗೊಂಡು ಬಾಲಕ ತೀವ್ರ ಅಸ್ವಸ್ಥಗೊಂಡ ಹಿನ್ನಲೆಯಲ್ಲಿ ತಡರಾತ್ರಿಯ ಬಳಿಕ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಬಾಲಕ ಮಾಝಿನ್ ಮೃತಪಟ್ಟಿದ್ದಾನೆ ಎನ್ನಲಾಗಿದೆ.
0 comments:
Post a Comment