ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಹೈ ವೋಲ್ಟೇಜ್ ಪಂದ್ಯ ವೀಕ್ಷಿಸುವ ಅವಕಾಶ
ಶಾರ್ಜಾ, ಸೆಪ್ಟೆಂಬರ್ 03, 2022 (ಕರಾವಳಿ ಟೈಮ್ಸ್) : ಏಷ್ಯಾ ಕಪ್-2022 ಕ್ರಿಕೆಟ್ ಕೂಟದ ಲೀಗ್ ಹಂತದ ಕೊನೆಯ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ಹಾಂಕಾಂಗ್ ತಂಡವನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸಿ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಅತಿ ದೊಡ್ಡ ಜಯ ಸಂಪಾದಿಸಿ ದಾಖಲೆ ಬರೆದಿದೆ. ಈ ಮೂಲಕ ಕೂಟದ ಸೂಪರ್-4 ಹಂತಕ್ಕೆ ತೇರ್ಗಡೆ ಹೊಂದಿದ್ದು, ಕೂಟದಲ್ಲಿ ಎರಡನೇ ಬಾರಿಗೆ ಭಾನುವಾರ (ಸೆ 4) ಇಂಡೋ-ಪಾಕ್ ಮುಖಾಮುಖಿಯಾಗಲಿದೆ. ಕಳೆದ ಭಾನುವಾರ ನಡೆದ ಲೀಗ್ ಹಂತದ ದ್ವಿತಿಯ ಪಂದ್ಯದಲ್ಲಿ ಇಂಡೋ-ಪಾಕ್ ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ರೋಚಕ ಹೋರಾಟದಲ್ಲಿ ಭಾರತ ಜಯ ಗಳಿಸಿತ್ತು.
ಶುಕ್ರವಾರ ನಡೆದ ಏಷ್ಯಾಕಪ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಹಾಂಕಾಂಗ್ ತಂಡವನ್ನು ಪಾಕಿಸ್ತಾನ ಕೇವಲ 38 ರನ್‌ಗೆ ಆಲೌಟ್ ಮಾಡಿದೆ. ಈ ಮೂಲಕ ಟಿ20 ಇತಿಹಾಸದಲ್ಲಿ ಎರಡನೇ ಅತೀ ದೊಡ್ಡ ಅಂತರದ ಗೆಲುವು ದಾಖಲಿಸಿದೆ. ಪಾಕಿಸ್ತಾನ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ಮೂಲಕ ಹೊಸ ದಾಖಲೆ ಬರೆದಿದೆ. ಹಾಂಕಾಂಗ್ ವಿರುದ್ಧ ಪಂದ್ಯದಲ್ಲಿ ಪಾಕಿಸ್ತಾನ 155 ರನ್ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಅತೀ ದೊಡ್ಡ ಅಂತರದ ಗೆಲುವು ದಾಖಲಿಸಿದೆ. ಪಾಕಿಸ್ತಾನದ ಬೌಲಿಂಗ್ ದಾಳಿಗೆ ಅಕ್ಷರಶಃ ತತ್ತರಿಸಿ ಹೋದ ಹಾಂಕಾಂಗ್ 10.4 ಓವರ್‌ಗಳಲ್ಲಿ ಕೇವಲ 38 ರನ್‌ಗಳಿಗೆ ಆಲೌಟ್ ಆಗಿದೆ. ಹಾಂಕಾಂಗ್ ತಂಡದ ಯಾವುದೇ ಬ್ಯಾಟ್ಸ್‌ಮನ್ ಕೂಡಾ ಪಾಕ್ ದಾಳಿಗಾರರನ್ನು ಸಮರ್ಥವಾಗಿ ಎದುರಿಸಲು ವಿಫಲವಾಗಿ ಕನಿಷ್ಠ ಎರಡಂಕಿ ಕೂಡಾ ದಾಟಿಲ್ಲ. ನಾಯಕ ನಿಝಾಕತ್ ಖಾನ್ ಸಿಡಿಸಿದ 8 ರನ್ ಗಳೇ ತಂಡದ ಆಟಗಾರ ಗಳಿಸಿದ ಗರಿಷ್ಠ ಮೊತ್ತ. ಪಾಕ್ ಪರ ಶದಬ್ ಖಾನ್ 4, ಮೊಹಮ್ಮದ್ ನವಾಝ್ 3, ನಸೀಂ ಶಾ 2 ಹಾಗೂ ಶಹನವಾಝ್ ಧಹನಿ 1 ವಿಕೆಟ್ ಕಬಳಿಸಿ ಹಾಂಕಾಂಗ್ ತಂಡವನ್ನು ಕನಿಷ್ಠ ಮೊತ್ತಕ್ಕೆ ಕಟ್ಟಿ ಹಾಕಿದರು.
ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ನಡೆಸುವ ಅವಕಾಶ ಪಡೆದ ಪಾಕಿಸ್ತಾನ ಆಟಗಾರರು ಭರ್ಜರಿ ಬ್ಯಾಟಿಂಗ್ ಮಾಡಿದ್ದು, ಆರಂಭಿಕ ಆಟಗಾರ ಮುಹಮ್ಮದ್ ರಿಜ್ವಾನ್ (ಅಜೇಯ 78) ಮತ್ತು ಮದ್ಯಮ ಕ್ರಮಾಂಕದ ಆಟಗಾರ ಫಖರ್ ಜಮಾನ್ (53 ರನ್) ಅಮೋಘ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 193ರನ್ ಗಳಿಸಿತು
ಭರ್ಜರಿ ಹಾಗೂ ದೊಡ್ಡ ಗೆಲುವಿನ ಮೂಲಕ ಸೂಪರ್ 4 ಹಂತಕ್ಕೆ ತೇರ್ಗಡೆಯಾದ ಪಾಕಿಸ್ತಾನ ಭಾನುವಾರ (ಸೆ. 4 ರಂದು) ನಡೆಯಲಿರುವ ಸೂಪರ್ 4 ಹಂತದ ಪಂದ್ಯದಲ್ಲಿ ಮತ್ತೆ ಭಾರತ ತಂಡವನ್ನು ಎದುರಿಸಲಿದೆ. ಈ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಕೂಟದಲ್ಲಿ ಎರಡನೇ ಬಾರಿಗೆ ಇಂಡೋ-ಪಾಕ್ ಹೈ ವೋಲ್ಟೇಜ್ ಪಂದ್ಯಾಟ ವೀಕ್ಷಿಸುವ ಅವಕಾಶ ಒದಗಿ ಬಂದಿದೆ.
ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ಅಂತರದ ಗೆಲುವು ಪಡೆದ ತಂಡಗಳ ವಿವರ
172 ರನ್, ಶ್ರೀಲಂಕಾ vs ಕೀನ್ಯಾ, 2007
155 ರನ್, ಪಾಕಿಸ್ತಾನ vs ಹಾಂಕಾಂಗ್, 2022 *
143 ರನ್ ಭಾರತ vs ಐರ್ಲೆಂಡ್, 2018
143 ರನ್, ಪಾಕಿಸ್ತಾನ vs ವೆಸ್ಟ್ ಇಂಡೀಸ್, 2018
137 ರನ್, ಇಂಗ್ಲೆಂಡ್ vs ವೆಸ್ಟ್ ಇಂಡೀಸ್, 2019
ಪಾಕಿಸ್ತಾನ ವಿರುದ್ಧ ಟಿ20 ಪಂದ್ಯದಲ್ಲಿ ಕಡಿಮೆ ಮೊತ್ತ ದಾಖಲಿಸಿದ ತಂಡ
38 ರನ್, ಹಾಂಕಾಂಗ್, 2022 *
60 ರನ್, ವೆಸ್ಟ್ ಇಂಡೀಸ್, 2018
80 ರನ್, ನ್ಯೂಜಿಲೆಂಡ್, 2010
82 ರನ್, ಸ್ಕಾಟ್ಲೆಂಡ್, 2018
ಹಾಂಕಾಂಗ್ ತಂಡದ ಅತೀ ಕಡಿಮೆ ಮೊತ್ತ(ಟಿ20)
38 ರನ್ vs ಪಾಕಿಸ್ತಾನ, 2022 *
69 ರನ್ vs ನೇಪಾಳ, 2014
87/9 ರನ್ vs ಉಗಾಂಡ, 2022
87 ರನ್ vs ಓಮನ್, 2017
0 comments:
Post a Comment