ಬಂಟ್ವಾಳ, ಸೆಪ್ಟೆಂಬರ್ 04, 2022 (ಕರಾವಳಿ ಟೈಮ್ಸ್) : ತಂದೆ-ತಾಯಿಯ ಸೇವೆಗೆ ಮಹತ್ವ £ೀಡಿದ ಶಕ್ತಿ ಇದ್ದರೆ ಅದು ಗಣಪತಿ ದೇವರು. ಆದ್ದರಿಂದ ತಂದೆ-ತಾಯಿಯ ಸೇವೆ ಮಾಡುವ ಮೂಲಕ ಗಣಪತಿ ದೇವರನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡಿ ಎಂದು ಶ್ರೀ ಕ್ಷೇತ್ರ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಕರೆ £ೀಡಿದರು.
ಜಕ್ರಿಬೆಟ್ಟು ಸಾರ್ವಜ£ಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಜಕ್ರಿಬೆಟ್ಟು ದಾ ಸ ರೈ ಮೈದಾನದಲ್ಲಿ ನಡೆಯುತ್ತಿರುವ 19ನೇ ವರ್ಷದ ಸಾರ್ವಜ£ಕ ಶ್ರೀ ಗಣೇಶೋತ್ಸವದ 4ನೇ ದಿನದ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ £ೀಡಿ ಮಾತನಾಡಿದ ಅವರು, ಗದ್ದೆಯಲ್ಲಿ ಬೆಳೆಯುವ ಫಸಲು ಪಾಲು ಹಂಚಿಕೊಂಡು ಬೆಳೆಯುವುದಿಲ್ಲ, ದೇಹದಲ್ಲಿ ಹರಿಯುವ ರಕ್ತ ಯಾವುದೇ ಜಾತಿ-ಧರ್ಮದ ಆಧಾರದಲ್ಲಿ ಬೇರೆ ಬೇರೆ ಬಣ್ಣದಲ್ಲಿಲ್ಲ. ರೋಗ ಬರುವಾಗ ಧರ್ಮಾಧಾರಿತವಾಗಿ ಬರೋದಿಲ್ಲ. ಈ ಭೂಮಿ ಭಗವಂತ£ಗೆ ಸೇರಿದ್ದಾಗಿದ್ದು, ಆತ ಸೃಷ್ಟಿಸಿದ ಎಲ್ಲ ವರ್ಗದ ಜನರಿಗೂ ಭಗವಂತ ಇಲ್ಲಿ ಬಾಳಿ ಬದುಕುವ ಅವಕಾಶ £ೀಡಿದ್ದಾನೆ. ಎಲ್ಲ ಧರ್ಮಗಳೂ ಶಾಂತಿಯನ್ನೇ ಬೋಧಿಸಿದೆ.ಧರ್ಮಗ್ರಂಥಗಳು ಹಿಂಸೆಗೆ ಪ್ರೇರಣೆ £ೀಡಿಲ್ಲ. ಆದರೆ ನಾವು ಮಾತ್ರ ಕಣ್ಣಿಗೆ ಬಟ್ಟೆ ಕಟ್ಟಿ ಧರ್ಮಾಚರಣೆ ಮಾಡುತ್ತೇವೆ. ಇದು ದುರಂತ ಈ ಲೋಕದ ದುರಂತ ಎಂದರು.
ಈ ಭೂಮಿಯಲ್ಲಿ ಎಷ್ಟು ದಿನ ಬದುಕುತ್ತೇವೆ ಎಂಬ £ಖರತೆ ಯಾರಿಗೂ ಇಲ್ಲ. ಕ£ಷ್ಠ ಅವಧಿಯಲ್ಲಿ ಬದುಕುವ ಈ ಜೀವನದಲ್ಲಿ ಇನ್ನೊಬ್ಬರಿಗೆ ಕೈ ತೋರುವುದನ್ನು ಬಿಟ್ಟು ಇನ್ನೊಬ್ಬರ ಒಳಿತಿನ ಕಾರ್ಯಗಳನ್ನು ನಮ್ಮಲ್ಲೂ ಅಳವಡಿಸುವಂತಾಗಬೇಕು ಎಂದ ಸ್ವಾಮೀಜಿಗಳು ಜನರ ಕಷ್ಟದ ಸಮಯದಲ್ಲಿ ನಾವು ಮಾಡುವ ದಾನವೇ ನಮ್ಮ £ಜವಾದ ಸಂಪತ್ತು ಹೊರತು ಕೂಡಿಟ್ಟ ಸಂಪತ್ತು ನೈಜ ಸಂಪತ್ತಲ್ಲ. ಮಕ್ಕಳಿಗಾಗಿ ಸಂಪತ್ತು ಕೂಡಡುವ ಬದಲಾಗಿ ಮಕ್ಕಳನ್ನೇ ಸಂಪತ್ತಾಗಿ ಬೆಳೆಸಿದಾಗ ಜೀವನ ಧನ್ಯಗೊಳ್ಳುತ್ತದೆ. ಸಂಘರ್ಷಕ್ಕೆ ಎಡೆ ಮಾಡಿಕೊಡದೆ ದೇಶದ ಸಹಿಷ್ಣುತೆಯ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ತಾಕೀತು ಮಾಡಿದರು.
ನಮ್ಮ ದುರ್ಗುಣದ ಫಲವೇ ಪ್ರಾಕೃತಿಕ ವಿಕೋಪಗಳ ರೂಪದಲ್ಲಿ ಮನುಷ್ಯರ ಮೇಲೆ ಬಂದೆರಗುತ್ತದೆ ಎಂದು ಶ್ರೀ ಕ್ಷೇತ್ರ ಮಾಣಿಲ ಸ್ವಾಮೀಜಿಗಳು ಮಕ್ಕಳ, ಮಹಿಳೆಯರ ಮೇಲಿನ ದೌರ್ಜನ್ಯಗಳು ಇಂದು ದೇವರ ಶಾಪಕ್ಕೆ ಗುರಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಇರುವ ಜೀವನದಲ್ಲಿ ಎಲ್ಲರನ್ನೂ ಪ್ರೀತಿಸಿ, ಮತ್ಸರ £ರ್ಮೂಲನೆ ಮಾಡಬೇಕಾಗಿದೆ. ಪರಸ್ಪರ ಪ್ರೀತಿಯಿಂದ ಬದುಕಿ ಧನ್ಯತೆ ಪಡೆದುಕೊಳ್ಳಿ, ಮತ್ಸರ ದ್ವೇಷ ಅಸೂಯೆ ಬೇಡ ಜೀವನದಲ್ಲಿ ತಲೆಗೆ ಹತ್ತಿಕೊಳ್ಳದಂತೆ ಗರಿಷ್ಠ ಜಾಗರೂಕರಾಗಬೇಕಿದೆ ಎಂದು ಇದೇ ವೇಳೆ ತಾಕೀತು ಮಾಡಿದ ಶ್ರೀ ಪರಮಹಂಸ ಸ್ವಾಮೀಜಿಗಳು ಕೊರೋನಾ ಕಷ್ಟ ಕಾಲದಲ್ಲಿ ಯಾವುದೇ ಅಪೇಕ್ಷೆ ಪಡದೆ ಇದ್ದರೂ ಕಾಲಡಿಗೆ ಬಂದು ಹೃದಯದ ಪ್ರೀತಿಯಿಂದ ಸಹಾಯ ಮಾಡಿದ ಮಾಜಿ ಸಚಿವ ಬಿ ರಮಾನಾಥ ರೈ ಅವರ ಮನೋವೈಶಾಲ್ಯ ಎಲ್ಲರಿಗೂ ಮಾದರಿ ಎಂದವರು ನೆನಪಿಸಿಕೊಂಡು ಶ್ಲಾಘಿಸಿದರು.
ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಬಿ ರಮಾನಾಥ ರೈ ಮಾತನಾಡಿ, ಒಂದು ಕಾಲದಲ್ಲಿ ಕೃಷ್ಣಾಷ್ಟಮಿ, ಗಣೇಶ ಚತುರ್ಥಿ ಹಬ್ಬಗಳನ್ನು ಮನೆಯಲ್ಲಿ ಆಚರಿಸುವ ಸಲುವಾಗಿ ಇತರರಿಂದ ಅಡುಗೆ ಸಾಮಾಗ್ರಿಗಳನ್ನು ಸಂಗ್ರಹಿಸುವ ಕಷ್ಟದ ಸಂದರ್ಭ ಇತ್ತು. ಆದರೆ ಇಂದು ಎಲ್ಲರೂ ಅವರವರ ಮನೆಯಲ್ಲಿ ಸ್ವಂತ ನೆಲೆಯಲ್ಲೇ ಹಬ್ಬಗಳ ಆಚರಣೆ ಶಕ್ತರಾಗಿದ್ದಾರೆ. ದೇವಸ್ಥಾನಗಳಿಗೆ ದೇಣಿಗೆಗಳನ್ನೂ ಸ್ವಂತ ಕೈಯಿಂದ £ೀಡುವಷ್ಟು ಸರ್ವರೂ ಸಶಕ್ತರಾಗಿದ್ದಾರೆ. ಭೂ ಮಸೂದೆ ಕಾನೂನು ಈ ದೇಶದಲ್ಲಿ ಬಲಾಢ್ಯರು-ಕೆಳವರ್ಗದವರು ಎಂಬ ಬೇಧಭಾವ ತೊಡೆದು ಹಾಕಿ ಸಾಮಾಜಿಕ ಸಮಾನತೆ ಸೃಷ್ಟಿಸಿದೆ. ಕಾನೂ£ಂದ ಭೂಮಿ ಕಳೆದುಕೊಂಡವ£ಗೆ ದೇವರು ಬೇರೆ ರೂಪದಲ್ಲಿ ಶಕ್ತಿ £ೀಡಿದರೆ, ಭೂಮಿ ಪಡಕೊಂಡವರು ಸಮಾಜದಲ್ಲಿ ಸ್ವಂತಿಕೆಯನ್ನು ಪಡೆದುಕೊಂಡಿದ್ದಾರೆ ಎಂದರಲ್ಲದೆ ಜಕ್ರಿಬೆಟ್ಟು ಗಣೇಶೋತ್ಸವ ಸ್ವಾತಂತ್ರ್ಯ ಸಂದರ್ಭದಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಸ್ವಾಂತ್ರ್ಯ ಚಳುವಳಿಯ ಕಿಚ್ಚು ಹಚ್ಚಲು ಎಲ್ಲರನ್ನೂ ಒಗ್ಗೂಡಿಸಿದ ಮಾದರಿಯಲ್ಲಿ ಇಲ್ಲೂ ಕೂಡಾ ಎಲ್ಲ ವರ್ಗದ ಜನರನ್ನು ಒಂದೇ ಸೂರಿನಡಿ ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಶಾಸಕ ಜೆ ಆರ್ ಲೋಬೋ, ಕೊಡಂಬಾಡಿ ರೈ ಎಸ್ಟೇಟ್ ಮಾಲಕ, ಮಠಂದಬೆಟ್ಟು ಮಹಿಷಮರ್ದಿ£ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ, ನಮ್ಮ ಕುಡ್ಲ ವಾಹಿ£ಯ £ರ್ದೇಶಕ ಲೀಲಾಕ್ಷ ಬಿ ಕರ್ಕೇರಾ, ದೈಜಿ ವರ್ಲ್ಡ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ವಾಲ್ಟರ್ ಡಿಸೋಜ ನಂದಳಿಕೆ ಮೊದಲಾದವರು ಮುಖ್ಯ ಅಥಿಗಳಾಗಿ ಶುಭ ಹಾರೈಸಿದರು.
ಮಂಗಳೂರು ಮನಪಾ ಸದಸ್ಯ ಅಬ್ದುಲ್ ಲತೀಫ್ ಕಂದಕ್, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ ಬೈಲು, ಮಂಗಳೂರು ತಾಪಂ £ಕಟಪೂರ್ವ ಅಧ್ಯಕ್ಷ ಮುಹಮ್ಮದ್ ಮೋನು, ಪ್ರಮುಖರಾದ ಪಿಯೂಸ್ ಎಲ್ ರೋಡ್ರಿಗಸ್, ಬಿ ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಯೂಸುಫ್ ಕರಂದಾಡಿ, ಸಂಪತ್ ಕುಮಾರ್ ಶೆಟ್ಟಿ, ಬಿ ವಾಸು ಪೂಜಾರಿ, ಲೋಲಾಕ್ಷ ಶೆಟ್ಟಿ, ಸದಾಶಿವ ಬಂಗೇರ, ಪದ್ಮನಾಭ ರೈ, ಜಿನರಾಜ ಅರಿಗ, ಗಂಗಾಧರ ಪೂಜಾರಿ, ಜಗದೀಶ್ ಕುಂದರ್, ರಾಜೀವ್ ಶೆಟ್ಟಿ ಎಡ್ತೂರು, ರಾಜೀವ್ ಕಕ್ಕೆಪದವು, ಡೆಂಝಿಲ್ ನೊರೊನ್ಹಾ, ರಂಜಿತ್ ಪೂಜಾರಿ ಬಿ ಸಿ ರೋಡು, ತಿಲಕ್ ಮಂಚಿ, ಜಿ ಎಂ ಇಬ್ರಾಹಿಂ ಮಂಚಿ, ಎನ್ ಅಬ್ದುಲ್ ಕರೀಂ ಬೊಳ್ಳಾಯಿ, ವೆಂಕಪ್ಪ ಪೂಜಾರಿ, ಜಯಂತಿ ಪೂಜಾರಿ, ಮಲ್ಲಿಕಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು
ಚಿತ್ರಗಳು : ತಿಲಕ್ ಮಂಚಿ




























































0 comments:
Post a Comment