ಬಂಟ್ವಾಳ, ಸೆಪ್ಟೆಂಬರ್ 01, 2022 (ಕರಾವಳಿ ಟೈಮ್ಸ್) : ಸಜಿಪಮೂಡ ಗ್ರಾಮದ ಕಂದೂರು ಬಜಾರ್ ಅಡಿಟೋರಿಯಂನಲ್ಲಿ ನವೆಂಬರ್ 26 ಲಯನ್ಸ್ ಪ್ರಾಂತೀಯ ಸಮ್ಮೆಳನ ನಡೆಯಲಿದ್ದು, ಪ್ರಾಂತೀಯ ಸಮ್ಮೆಳನ ಸಮಿತಿ ಅಧ್ಯಕ್ಷರಾಗಿ ಮನೋರಂಜನ್ ಕೆ ಆರ್ ಆಯ್ಕೆಯಾಗಿದ್ದಾರೆ.
ಸಮಿತಿಯ ಕಾರ್ಯದರ್ಶಿಯಾಗಿ ತಪೋಧನ್ ಶೆಟ್ಟಿ, ಕೋಶಾಧಿಕಾರಿಯಾಗಿ ಉಮೇಶ್ ಸಾಲ್ಯಾನ್, ಮುಖ್ಯ ಸಲಹೆಗಾರರಾಗಿ ಪೂರ್ವ ರಾಜ್ಯಪಾಲರಾಗಿದ್ದ ದೇವದಾಸ್ ಭಂಡಾರಿ, ಗೀತ್ ಪ್ರಕಾಶ್, ವಸಂತ್ ಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಪ್ರಾಂತೀಯ ಅಧ್ಯಕ್ಷ ಲಕ್ಷ್ಮಣ್ ಕುಲಾಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಸಮಿತಿ ಆಯ್ಕೆ ನಡೆದಿದ್ದು, ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಆಚಾರ್ ಸ್ವಾಗತಿಸಿ, ಸಮ್ಮೇಳನ ಸಮಿತಿ ಕಾರ್ಯದರ್ಶಿ ತಪೋಧನ್ ಶೆಟ್ಟಿ ವಂದಿಸಿದರು.
0 comments:
Post a Comment