ಬಂಟ್ವಾಳ, ಸೆಪ್ಟೆಂಬರ್ 05, 2022 (ಕರಾವಳಿ ಟೈಮ್ಸ್) : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಬಂಟ್ವಾಳ ಹಾಗೂ ರೋಟರಿ ಕ್ಲಬ್ ಇವುಗಳ ಜಂಟಿ ಅಶ್ರಯದಲ್ಲಿ ಬಂಟ್ವಾಳ ಸರಕಾರಿ ಪಾಲಿಟೆಕ್ನಿಕಲ್ ಕಾಲೇಜಿನಲ್ಲಿ ಶಾಲಾ ವನ ಕಾರ್ಯಕ್ರಮ ನಡೆಯಿತು.
ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶ ಸತೀಶ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿದ್ದ ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ ಹಾಗೂ ರೋಟರಿ ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಆಚಾರಿ ಅವರು ನಮ್ಮ ಸಂಸ್ಥೆಯಿಂದ ಕಾಲೇಜಿಗೆ ಯಾವುದೇ ಸಹಕಾರ ನೀಡಲು ಬದ್ದ ಎಂದು ಭರಸೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಜಯಾನಂದ ಪಿ, ರೋಟರಿ ಅದ್ಯಕ್ಷ ಪುಪ್ಪರಾಜ್ ಹೆಗ್ಡೆ, ರಾಜೇಂದ್ರ, ನಾರಾಯಣ ಹೆಗ್ಡೆ, ರೀತಿಶ್ ಬಾಳಿಗ, ಭವಾನಿ ಶಂಕರ್, ಪ್ರಕಾಶ್ ಬಾಳಿಗ, ಉಪನ್ಯಾಸಕ ಚಿತ್ರ ಕುಮಾರ, ಜನಜಾಗೃತಿ ವೇದಿಕೆ ಅಧ್ಯಕ್ಷ ರೋನಾಲ್ಡ್ ಡಿ’ಸೋಜ, ಸೇವಾ ಪ್ರತಿನಿಧಿ ಉಷಾ, ಸಂಪ, ರೋಹಿನಿ, ಸ್ಮಿತ ಮೊದಲಾದವರು ಭಾಗವಹಿಸಿದ್ದರು. ಕೃಷಿ ಮೇಲ್ವಿಚಾರ ಜನಾರ್ದನ ಸ್ವಾಗತಿಸಿ, ಕೇಶವ ಕೆ ವಂದಿಸಿದರು.
0 comments:
Post a Comment