ಬಂಟ್ವಾಳ, ಸೆಪ್ಟೆಂಬರ್ 18, 2022 (ಕರಾವಳಿ ಟೈಮ್ಸ್) : ಚುನಾವಣಾ ಆಯೋಗದ ಆದೇಶದಂತರ ಮತದಾರರ ಗುರುತು ಚೀಟಿಯೊಂದಿಗೆ ಆಧಾರ್ ಸಂಖ್ಯೆ ಜೋಡಣೆ ಚಾಲ್ತಿಯಲ್ಲಿದ್ದು, ಭಾನುವಾರ (ಸೆ 18) ಪಾಣೆಮಂಗಳೂರು ವ್ಯಾಪ್ತಿಯ ಎಲ್ಲಾ ಬೂತ್ ಗಳಲ್ಲಿ ಬೆಳಿಗ್ಗೆ ಚಾಲನೆ ನೀಡಿದ್ದು, ಸಂಜೆವರೆಗೂ ಮುಂದುವರಿಯಲಿದೆ.
ಈ ಬಗ್ಗೆ ಮತದಾರರನ್ನು ಆಧಾರ್ ಸಂಖ್ಯೆಯನ್ನು ವೋಟರ್ ಐಡಿ ಲಿಂಕ್ ಪ್ರಕ್ರಿಯೆಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸಿ ನೂರು ಶೇಕಡಾ ಬೆಳವಣಿಗೆ ಸಾಧಿಸಲು ಸಹಕಾರ ನೀಡುವಂತೆ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಅವರು ಪ್ರತಿ ಬೂತ್ ಗಳಿಗೆ ಭೇಟಿ ನೀಡಿ ಮತದಾರರ ಸಹಕಾರ ಕೋರಿದರಲ್ಲದೆ ಬೂತ್ ಮಟ್ಟದ ಅಧಿಕಾರಿಗಳಾದ ವಿನ್ನಿಫ್ರೆಡ್ ಡಿಸೋಜ, ಆಲಿಸ್ ಫೆರ್ನಾಂಡಿಸ್, ದೇವಕಿ ಟೀಚರ್, ವೀಣಾ ಟೀಚರ್ ಮೊದಲಾದವರ ಜೊತೆ ಮಾತುಕತೆ ನಡೆಸಿದರು.
0 comments:
Post a Comment