ಬಂಟ್ವಾಳ, ಅಕ್ಟೋಬರ್ 08, 2022 (ಕರಾವಳಿ ಟೈಮ್ಸ್) : ಬರಿಮಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ವಾರ ಕಾಲ ನಡೆಯಲಿರಿವ ಬಿ ಮೂಡ ಸರಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಬರಿಮಾರು ಗ್ರಾ ಪಂ ಅಧ್ಯಕ್ಷೆ ಶಶಿಕಲಾ ಶಿಬಿರ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬರಿಮಾರು ಗ್ರಾ ಪಂ ಉಪಾಧ್ಯಕ್ಷೆ ಸದಾಶಿವ ಜಿ, ಸದಸ್ಯರಾದ ಜಗದೀಶ್, ಪುರಂದರ, ಪುಷ್ಪಲತಾ, ಶೃತಿ, ವನಿತಾ, ಪಿಡಿಒ ಪುಷ್ಪಾ ಎಂ, ಜಿ ಪಂ ಮಾಜಿ ಸದಸ್ಯೆ ಕಮಲಾಕ್ಷಿ ಪೂಜಾರಿ, ಮಹಮ್ಮಾಯಿ ದೇವಸ್ಥಾನದ ಆಡಳಿತ ಮೋಕ್ತೇಸರ ರಾಕೇಶ್ ಪ್ರಭು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾಣಿ ವಲಯದ ಮೇಲ್ವಿಚಾರಕಿ ವಿನೋದ, ಮಾಣಿ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಪಿ, ನಿವೃತ್ತ ಯೋಧ ಸತೀಶ್ ಸುವರ್ಣ, ಪತ್ರಕರ್ತ ಸಂದೀಪ್ ಸಾಲ್ಯಾನ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ರಜನಿ ಚಿಕ್ಕಯ್ಯಮಠ, ಸದಸ್ಯ ಶ್ರೀನಿವಾಸ ಪೂಜಾರಿ, ಬರಿಮಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಎಸ್ ಡಿ ಎ ಂಸಿ ಅಧ್ಯಕ್ಷೆ ಶಶಿಪ್ರಭಾ, ಶಾಲಾ ಮುಖ್ಯೋಪಾಧ್ಯಾಯಿನಿ ಕಲ್ಯಾಣಿ ಮೊದಲಾದವರು ಭಾಗವಹಿಸಿದ್ದರು.
ಕಾಲೇಜು ಪ್ರಾಂಶುಪಾಲ ಯೂಸುಫ್ ವಿಟ್ಲ ಸ್ವಾಗತಿಸಿ, ಶಿಬಿರಾಧಿಕಾರಿ ಬಾಲಕೃಷ್ಣ ನಾಯ್ಕ್ ಕೆ ಪ್ರಸ್ತಾವನೆUಗೈದರು. ಸಹ ಶಿಬಿರಾಧಿಕಾರಿಗಳಾದ ದಾಮೋದರ ಇ ವಂದಿಸಿ, ಅಬ್ದುಲ್ ರಝಾಕ್ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment