ಬೆಳ್ತಂಗಡಿ, ಅಕ್ಟೋಬರ್ 14, 2022 (ಕರಾವಳಿ ಟೈಮ್ಸ್) : ಗೂಡ್ಸ್ ಅಟೋ ರಿಕ್ಷಾದಲ್ಲಿ ಅಕ್ರಮ ಗಾಂಜಾ ಸಾಗಾಟ ಮಾಡುತ್ತಿರುವ ಪ್ರಕರಣ ಬೇಧಿಸಿರುವ ಬೆಳ್ತಂಗಡಿ ಪೆÇಲೀಸ್ ವೃತ್ತ ನಿರೀಕ್ಷಕ ಶಿವಕುಮಾರ ಬಿ ಅವರ ನೇತೃತ್ವದ ಪೊಲೀಸರು ನಾಲ್ವರು ಆರೋಪಿಗಳಾ ಸಹಿತ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕು ತೆಂಕ ಕಾರಂದೂರು ಗ್ರಾಮದ ಉದಯಗಿರಿ ಎಂಬಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿರುವ ಸಂದರ್ಭ ಗುರುವಾಯನಕೆರೆ ಕಡೆಯಿಂದ ನಾರಾವಿ ಕಡೆಗೆ ಕೆಎ 19 ಎಡಿ 1648 ನೋಂದಣಿ ಸಂಖ್ಯೆಯ ಬಜಾಜ್ ಕಂಪೆನಿಯ ಮ್ಯಾಕ್ಸಿಮೋ ಗೂಡ್ಸ್ ತ್ರಿಚಕ್ರ (ಗೂಡ್ಸ್ ಅಟೋರಿಕ್ಷಾ) ವಾಹನದಲ್ಲಿ ಆರೋಪಿಗಳಾದ ಕೇರಳ ರಾಜ್ಯದ ಕಾಸರಗೋಡು ತಾಲೂಕಿನ ವರ್ಕಾಡಿ ಗ್ರಾಮದ ಮಂಜೇಶ್ವರ-ಮಚ್ಚಂಪಾಡಿ ಕೋಡಿ ಹೌಸ್ ನಿವಾಸಿ ಮುಹಮ್ಮದ್ ಕುಂಞÂ ಅವರ ಪುತ್ರ ಮಹಮ್ಮದ್ ಅಶ್ರಫ್ (34) ಹಾಗೂ ಮಂಜೇಶ್ವರ ಪಾವೂರು ಕ್ವಾಟ್ರಸ್ ಫಾತಿಮಾ ಸ್ಕೂಲ್ ಎದುರಿನ ನಿವಾಸಿ ದಿವಂಗತ ಇಬ್ರಾಹಿಂ ಅವರ ಪುತ್ರ ಅಬ್ದುಲ್ ಲತೀಪ್ ಕೆ (36) ಅವರು ಅಕ್ರಮ ಗಾಂಜಾ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದು, ಆರೋಪಿತರ ವಶದಲ್ಲಿದ್ದ ಸುಮಾರು 30 ಸಾವಿರ ರೂಪಾಯಿ ಮೌಲ್ಯದ 805.00 ಗ್ರಾಂ ತೂಕದ ಮಾದಕ ಗಾಂಜಾ ಹಾಗೂ ಸಾಗಾಟ ಮಾಡಲು ಉಪಯೋಗಿಸಿದ ಅಂದಾಜು 2 ಲಕ್ಷ ರೂಪಾಯಿ ಮೌಲ್ಯದ ಗೂಡ್ಸ್ ಅಟೋ ರಿಕ್ಷಾ ವಾಹನವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಬಗ್ಗೆ ವೇಣೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
0 comments:
Post a Comment