ಕಾಂಗ್ರೆಸ್ ಜನರಿಗಾಗಿ ಮಾಡಿಟ್ಟರೆ, ಬಿಜೆಪಿ ಕಾಂಗ್ರೆಸ್ ಮಾಡಿದ್ದನ್ನು ಮುಕ್ಕಿ ತಿನ್ನುವ ಕೆಲಸ ಮಾಡುತ್ತಿದೆ : ಮಾಜಿ ಸಚಿವ ರೈ ಆಕ್ರೋಶ - Karavali Times ಕಾಂಗ್ರೆಸ್ ಜನರಿಗಾಗಿ ಮಾಡಿಟ್ಟರೆ, ಬಿಜೆಪಿ ಕಾಂಗ್ರೆಸ್ ಮಾಡಿದ್ದನ್ನು ಮುಕ್ಕಿ ತಿನ್ನುವ ಕೆಲಸ ಮಾಡುತ್ತಿದೆ : ಮಾಜಿ ಸಚಿವ ರೈ ಆಕ್ರೋಶ - Karavali Times

728x90

18 October 2022

ಕಾಂಗ್ರೆಸ್ ಜನರಿಗಾಗಿ ಮಾಡಿಟ್ಟರೆ, ಬಿಜೆಪಿ ಕಾಂಗ್ರೆಸ್ ಮಾಡಿದ್ದನ್ನು ಮುಕ್ಕಿ ತಿನ್ನುವ ಕೆಲಸ ಮಾಡುತ್ತಿದೆ : ಮಾಜಿ ಸಚಿವ ರೈ ಆಕ್ರೋಶ

ಬಂಟ್ವಾಳ, ಅಕ್ಟೋಬರ್ 18, 2022 (ಕರಾವಳಿ ಟೈಮ್ಸ್) : ಕಾಂಗ್ರೆಸ್ ಸರಕಾರಗಳು ಸರಕಾರವನ್ನು ಜನರ ಬಳಿಗೆ ಕೊಂಡೊಯ್ದು ಬಡವರ ಕೈಗೆಟುಕುವ ವ್ಯವಸ್ಥೆಗಳನ್ನು ಕೈಗೊಂಡರೆ ಬಿಜೆಪಿ ಸರಕಾರಗಳು ಇದಕ್ಕೆ ತದ್ವಿರುದ್ದವಾಗಿ ಜನ ವಿರೋಧಿಯಾಗಿ ವರ್ತಿಸುವ ಮೂಲಕ ಸರ್ವಾಧಿಕಾರ ಧೋರಣೆ ತಾಳುತ್ತಿದೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದರು. 

ಗ್ರಾಮ ಪಂಚಾಯತ್ ಪ್ರತಿ£ಧಿಗಳ ಹಕ್ಕು ಮೊಟಕುಗೊಳಿಸಿ ವಿಕೇಂದ್ರಿಕರಣ ವ್ಯವಸ್ಥೆಯನ್ನು ದುರ್ಬಲಗೊಳಿಸುವ  ರಾಜ್ಯ ಬಿಜೆಪಿ ಸರಕಾರದ ಧೋರಣೆಯನ್ನು ಖಂಡಿಸಿ ಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಮಂಗಳವಾರ (ಅ 18) ಬಿ ಸಿ ರೋಡಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಜನರ ಸರಕಾರವಾಗಿರುವ ಸ್ಥಳೀಯ ಸಂಸ್ಥೆಗಳಾದ ತಾ ಪಂ ಹಾಗೂ ಜಿ ಪಂ ಚುನಾವಣೆಗಳನ್ನು ನಡೆಸಲು ಬಿಜೆಪಿ ಸರಕಾರ ಮೀನಮೇಷ ಎಣಿಸುವ ಮೂಲಕ ಜನರ ಅವಕಾಶಗಳಿಗೆ ಕತ್ತರಿ ಹಾಕಿದೆ ಎಂದು ಆರೋಪಿಸಿದರು. 

ಕಾಂಗ್ರೆಸ್ ಅಧಿಕಾರ ವಿಕೇಂದ್ರೀಕರಣದ ಮೂಲಕ ಸ್ಥಳೀಯ ಮಟ್ಟದಲ್ಲಿ ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ಅವಕಾಶ ಕಲ್ಪಿಸಿದ್ದರೆ ಬಿಜೆಪಿ ಸರಕಾರಗಳು ಸ್ಥಳೀಯಾಡಳಿತದ ಪ್ರತಿ£ಧಿಗಳಿಗೆ ಇರುವ ಅವಕಾಶಗಳನ್ನು ತಡೆಯುವ ಮೂಲಕ ಜನ ಸಾಮಾನ್ಯರ ಅವಕಾಶಗಳಿಗೆ ಕತ್ತರಿ ಹಾಕುವ ಕೆಲಸ ಮಾಡುತ್ತಿದೆ ಎಂದ ರಮಾನಾಥ ರೈ, ಕಾಂಗ್ರೆಸ್ ಜಾರಿಗೆ ತಂದ ಯೋಜನೆಗಳನ್ನೇ ಹೆಸರು ಬದಲಾವಣೆ ಮಾಡುವ ಮೂಲಕ ಬಿಜೆಪಿ ಯಾವುದೇ ಕೆಲಸ ಮಾಡದೆ ತನ್ನದೆಂದು ಬಿಟ್ಟಿ ಪ್ರಚಾರ ಪಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು ಮಾತನಾಡಿ, ಕಾಂಗ್ರೆಸ್ ಯಾವತ್ತೂ ತನ್ನ ಅಸ್ತಿತ್ವಕ್ಕಾಗಿ ಪ್ರತಿಭಟನೆ ನಡೆಸುತ್ತಿಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ಕಾಂಗ್ರೆಸ್ ಜನರಿಗಾಗಿ ಮಾತ್ರ ಬೀದಿಗಿಳಿದಿದೆ. ಈಗಲೂ ಅದನ್ನೇ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಜನರ ಭಾವನಾತ್ಮಕ ವಿಷಯಗಳಿಗೆ ವಿಷ ಬೀಜ ಬಿತ್ತಿ ರಾಜಕೀಯ ಲಾಭ ಪಡೆದುಕೊಂಡ ಇತಿಹಾಸ ಕಾಂಗ್ರೆಸ್ ಪಕ್ಷಕ್ಕಿಲ್ಲ ಎಂದರು. 

ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಪದ್ಮಶೇಖರ್ ಜೈನ್, ಬಿ ಎಂ ಅಬ್ಬಾಸ್ ಅಲಿ, ಸದಾಶಿವ ಬಂಗೇರ, ಪದ್ಮನಾಭ ರೈ, ಸಂಪತ್ ಕುಮಾರ್ ಶೆಟ್ಟಿ, ಸುದರ್ಶನ್ ಜೈನ್, ಮಾಯಿಲಪ್ಪ ಸಾಲ್ಯಾನ್, ಐಡಾ ಸುರೇಶ್, ಜಯಂತಿ ಪೂಜಾರಿ, ಜೆಸಿಂತಾ ಡಿ’ಸೋಜ, ಕಾಂಚಲಾಕ್ಷಿ, ದೇವಿಪ್ರಸಾದ್ ಪೂಂಜಾ, ವೆಂಕಪ್ಪ ಪೂಜಾರಿ, ನಸೀಮಾ ಬೇಗಂ, ಜಗದೀಶ್ ಕೊಯಿಲ, ಪಿ ಎ ರಹೀಂ, ಮಧುಸೂಧನ್ ಶೆಣೈ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಬಳಿಕ ತಾ ಪಂ ಕಾರ್ಯ£ರ್ವಾಹಕ ಅಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

  • Blogger Comments
  • Facebook Comments

0 comments:

Post a Comment

Item Reviewed: ಕಾಂಗ್ರೆಸ್ ಜನರಿಗಾಗಿ ಮಾಡಿಟ್ಟರೆ, ಬಿಜೆಪಿ ಕಾಂಗ್ರೆಸ್ ಮಾಡಿದ್ದನ್ನು ಮುಕ್ಕಿ ತಿನ್ನುವ ಕೆಲಸ ಮಾಡುತ್ತಿದೆ : ಮಾಜಿ ಸಚಿವ ರೈ ಆಕ್ರೋಶ Rating: 5 Reviewed By: karavali Times
Scroll to Top