ಬಂಟ್ವಾಳ, ಅಕ್ಟೋಬರ್ 14, 2022 (ಕರಾವಳಿ ಟೈಮ್ಸ್) : ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಕಾರನ್ನು ಹಿಂಬಾಲಿಸಿದ ಕ್ವಾಲಿಸ್ ಕಾರಲ್ಲಿ ಬಂದ ದುಷ್ಕರ್ಮಿಯೊಬ್ಬ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಫರಂಗಿಪೇಟೆ ಮೀನು ಮಾರುಕಟ್ಟೆ ಬಳಿ ಮಾರಕಾಸ್ತ್ರ ತೋರಿ ಬೆದರಿಸಿ, £ಂದಿಸಿದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಶಾಸಕರ ಕಾರು ಚಾಲಕ ನವೀನ್ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಫಿರ್ಯಾದಿ ಸಲ್ಲಿಸಿದ್ದು, ಶಾಸಕ ಹರೀಶ್ ಪೂಂಜಾ ಅವರು ದಿನಾಂಕ ಅ 12 ರಂದು ಬೆಂಗಳೂರಿಗೆ ಹೋಗಿದ್ದು, ಅ 13 ರಂದು ಸಂಜೆ 6.20 ರ ವಿಮಾನದಲ್ಲಿ ಮಂಗಳೂರಿಗೆ ಬರುವ ಬಗ್ಗೆ ಮಾಹಿತಿ £ೀಡಿದ ಹಿನ್ನಲೆಯಲ್ಲಿ ನವೀನ್ ಅವರು ಶಾಸಕರ ಕಾರು ಕೆಎ-19-ಎಂ.ಪಿ- 0369 ನೊಂದಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಸಂಜೆ 5.40 ಗಂಟೆಗೆ ಹೋಗಿದ್ದಾರೆ. ಶಾಸಕರು ಸಂಜೆ 7.07 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದು ಅಲ್ಲಿಂದ ಶಾಸಕರನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ಮಂಗಳೂರು ಸರ್ಕೂಟ್ ಹೌಸಿಗೆ ಹೋಗಿ ಅಲ್ಲಿ ಮೀಟಿಂಗಿನಲ್ಲಿ ಭಾಗವಹಿಸಿ ಬಳಿಕ ರಾತ್ರಿ 10.45 ಗಂಟೆಗೆ ಮಂಗಳೂರು ಸರ್ಕೂಟ್ ಹೌಸಿನಿಂದ ನವೀನ್ ಅವರು ಶಾಸಕರ ಕಾರಿನಲ್ಲಿ ಒಬ್ಬನೇ ಚಲಾಯಿಸಿಕೊಂಡು ಶಾಸಕರು ಅವರ ಸಂಬಂಧಿಕರಾದ ಪ್ರಶಾಂತ್ ಮತ್ತು ಕುಶಿತ್ ಅವರ ಕೆಎ-19-ಎಂ.ಇ -5560 ನೇ ಕಾರಿನಲ್ಲಿ ಮಂಗಳೂರು ಸರ್ಕೂಟ್ ಹೌಸಿನಿಂದ ಹೊರಟು ನವೀನ್ ಅವರ ಕಾರಿನ ಎದುರಿನಿಂದ ಶಾಸಕರ ಕಾರು ಹೋಗುತ್ತಿತು. ನಂತೂರು, ಪಡೀಲ್ ಮಾರ್ಗವಾಗಿ ಬರುತ್ತಾ ನಾಗುರಿ ರೈಲ್ವೇ ಓವರ್ ಬ್ರಿಡ್ಜ್ ತಳ ಭಾಗದಲ್ಲಿ ಸ್ಕಾರ್ಪಿಯೋ ಕಾರೊಂದು ನವೀನ್ ಚಲಾಯಿಸಿಕೊಂಡು ಬರುತ್ತಿದ್ದ ಕಾರನ್ನು ಹಿಂಬಾಲಿಸಿಕೊಂಡು ಬಂದಿದೆ. ಈ ಬಗ್ಗೆ ನವೀನ್ ಶಾಸಕರಿಗೆ ಮೊಬೈಲ್ ಮೂಲಕ ಮಾಹಿತಿ ನೀಡಿದ್ದಾರೆ. ಈ ವೇಳೆ ಶಾಸಕರು ತನ್ನ ಕಾರನ್ನು ಹಿಂಬಾಲಿಸಿಕೊಂಡು ಬರುವಂತೆ ನವೀನ್ ಗೆ ತಿಳಿಸಿದ್ದು ಅದರಂತೆ ನವೀನ್ ಅವರು ಶಾಸಕರಿದ್ದ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಈ ವೇಳೆ ನವೀನ್ ತನ್ನ ಕಾರಿನ ಗ್ಲಾಸನ್ನು ಕೆಳಗೆ ಸರಿಸಿದಾಗ ಸ್ಕಾರ್ಪಿಯೋ ಕಾರಿನ ಚಾಲಕ ನವೀನ್ ಕಾರನ್ನು ಬಿಟ್ಟು ಎದುರಿನಿಂದ ಹೋಗುತ್ತಿದ್ದ ಶಾಸಕರ ಕಾರನ್ನು ಫರಂಗಿಪೇಟೆ ಮೀನು ಮಾರ್ಕೆಟಿನ ಸ್ವಲ್ಪ ಮುಂದಕ್ಕೆ ತಲುಪುತ್ತಿದ್ದಂತೆ ರಾತ್ರಿ 11.15 ಗಂಟೆಗೆ ಸ್ಕಾರ್ಪಿಯೋ ಕಾರಿನ ಚಾಲಕ ಶಾಸಕರ ಕಾರಿಗೆ ಅಡ್ಡಲಾಗಿ ಬಂದು ಕಾರಿನ ಚಾಲಕ ಕುಶಿತ್ ಅವರನ್ನುದ್ದೇಶಿಸಿ ರಂಡೇ ಮಕ್ಕಳೇ ಎಂದು ಬೈದು ತನ್ನ ಕೈಯಲ್ಲಿದ್ದ ಆಯುಧವನ್ನು ತೋರಿಸಿ ಬೆದರಿಕೆ ಒಡ್ಡಿರುತ್ತಾನೆ. ತಕ್ಷಣ ಈ ಬಗ್ಗೆ ನವೀನ್ ಅವರು ಫರಂಗಿಪೇಟೆ ಹೊರ ಠಾಣೆಯ ಬಳಿ ನಿಲ್ಲಿಸಿದ ಸಮಯ ಸ್ಕಾರ್ಪಿಯೋ ಕಾರು ಚಾಲಕ ತನ್ನ ಕಾರನ್ನು ವೇಗವಾಗಿ ಬಿ ಸಿ ರೋಡು ಕಡೆಗೆ ಚಲಾಯಿಸಿಕೊಂಡು ಹೋಗಿರುತ್ತಾನೆ. ಸ್ಕಾರ್ಪಿಯೋ ಕಾರು ಬಿಳಿ ಬಣ್ಣದ್ದಾಗಿದೆ ಎಂದು ನವೀನ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಯ ಬಳಿಕ ಸಾರ್ವಜನಿಕ ವಲಯದಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ತೀವ್ರ ಆತಂಕ ಉಂಟಾಗಿದ್ದು, ಶಾಸಕರನ್ನೇ ಟಾರ್ಗೆಟ್ ಮಾಡುವ ಹಂತಕ್ಕೆ ಬಂದಿರುವ ದುಷ್ಕರ್ಮಿಯನ್ನು ಪೊಲೀಸರು ತಕ್ಷಣ ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಘಟನೆಯ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 77/2022 ಕಲಂ 341, 504, 506 ರಂತೆ ಪ್ರಕರಣ ದಾಖಲಾಗಿದೆ.
0 comments:
Post a Comment